ಬೆಳಗಾವಿ(ನ.01): ರಾಜ್ಯ ಸರ್ಕಾರ ದುಶ್ಯಾಸನ, ಕೇಂದ್ರ ಸರ್ಕಾರ ಧೃತರಾಷ್ಟ್ರ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಹೇಳಿದೆ. ಬೆಳಗಾವಿಯಲ್ಲಿ ಮತ್ತೆ ಪುಂಡಾಟ ಆರಂಭಿಸಿದ ಎಂಇಎಸ್ ಮೆರವಣಿಗೆ ನಡೆಸಿ, ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದೆ.

"

ಕನ್ನಡ ರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ಮತ್ತೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟ ಶುರುವಾಗಿದ್ದು, ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಲಾಗಿದೆ. ಕಿಡಿಗೇಡಿಗಳು ಮೆರವಣಿಗೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ.

64ನೇ ಕನ್ನಡ ರಾಜ್ಯೋತ್ಸವ: ನಮ್ಮ ಭಾಷೆಯಲ್ಲಿಯೇ ಶುಭ ಕೋರಿದ ಮೋದಿ

ಕರ್ನಾಟಕ ಸರ್ಕಾರ ಮರಾಠಿ ಭಾಷಿಕರ ಮಾನ ಹರಣ ಮಾಡಿದೆ, ಮಹಾರಾಷ್ಟ್ರ ಸರ್ಕಾರ ಅನ್ಯಾಯವನ್ನು ನೋಡುತ್ತಿದೆ ಎಂದು ಆರೋಪಿಸಿದ ಎಂಇಎಸ್ ಕೇಂದ್ರ ಸರ್ಕಾವನ್ನು ದೃತರಾಷ್ಟ್ರನಿಗೆ ಹೋಲಿಸಿದ ವ್ಯಂಗ್ಯ ‌ಚಿತ್ರವನ್ನೂ ಪ್ರದರ್ಶಿಸಿದ್ದಾರೆ. ಗಡಿ ವಿಚಾರದಲ್ಲಿ ಕೃಷ್ಣನ ಪಾತ್ರ ಯಾರದು ಎಂದು ಪ್ರಶ್ನೆ ಮಾಡಿದ್ದು, ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟಿದ್ದಾರೆ.

ಕಾರ್ಯಕರ್ತರ ಸಂಖ್ಯೆ ಕ್ಷೀಣ:

ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಕರಾಳ ದಿನ‌ ಆಚರಣೆ ಮಾಡುತ್ತಿದೆ. ಬೆಳಗಾವಿ ಸಂಭಾಜೀ ವೃತ್ತದಿಂದ ಸೈಕಲ್ ರ‌್ಯಾಲಿ ಆರಂಭಿಸಲಾಗಿದ್ದು, ಮಾಜಿ ಶಾಸಕ ಮನೋಹರ ಕಿಣೇಕರ್,ದೀಪಕ್ ದಳವಿ ಭಾಗಿಯಾಗಿದ್ದಾರೆ. ಮೆರವಣಿಗೆ ಬಸವೇಶ್ವರ ಸರ್ಕಲ್ ವರಗೆ ನಡೆಯಲಿದೆ. ಮೆರವಣಿಗೆಯಲ್ಲಿ ಎಂಇಎಸ್ ಕಾರ್ಯಕರ್ತರ ಸಂಖ್ಯೆ ಕ್ಷೀಣಿಸಿದೆ.

ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಮತದಾರರ ಒಗ್ಗೂಡಿಸುವ ಯತ್ನ ವಿಫಲವಾಗಿದ್ದು, ಮಹಾರಾಷ್ಟ್ರ ನಾಯಕರು ಕೈಕೊಟ್ಟಿದ್ದಾರೆ. ಪ್ರತಿ ಕರಾಳ ದಿನ ಆಚರಣೆ ಬರುತ್ತಿದ್ದ ಮಹಾರಾಷ್ಟ್ರ ನಾಯಕರು ಈ ವರ್ಷ ಎಂಇಎಸ್ ಬೇಡಿಕೆಗೆ ಸ್ಪಂದಿಸಿಲ್ಲ. ಸ್ಥಳದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಒದಗಿಸಿದ್ದು, 300 ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜಿಸಲಾಗಿದೆ. 

ಇಂದಿನಿಂದ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಲೇ ಬೇಕು..!