Asianet Suvarna News Asianet Suvarna News

ಕಿತ್ತೂರು ಕರ್ನಾಟಕಕ್ಕಾಗಿ ಸಿಎಂ ಯಡಿಯೂರಪ್ಪ ಜತೆ ಚರ್ಚೆ: ಕೇಂದ್ರ ಸಚಿವ ಅಂಗಡಿ

ಕಿತ್ತೂರು ಉತ್ಸವ-2019 ಸಮಾರೋಪ; ಸಾಂಸ್ಕೃತಿಕ ಸಂಭ್ರಮಕ್ಕೆ ತೆರೆ| ಚನ್ನಮ್ಮನ ಯಶೋಗಾಥೆ ಹಾಗೂ ಬಸವಣ್ಣನವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ ಎಂದ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ| ಸ್ವಾತಂತ್ರ್ಯದ ಕಹಳೆ ಊದಿದ ಚೆನ್ನಮ್ಮನ ಶೌರ್ಯ, ಸಾಹಸವನ್ನು ಯುವ ಪೀಳಿಗೆಗೆ ತಲುಪಿಸಬೇಕಿದೆ| ಬ್ರಿಟೀಷರ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡುವ ಮೂಲಕ ಸ್ವಾಭಿಮಾನ ನೆನಪಿಸಿಕೊಟ್ಟವರು ತಾಯಿ ರಾಣಿ ಚನ್ನಮ್ಮ|

Discussion with CM Yediyurappa Regarding on Kittur Karnataka
Author
Bengaluru, First Published Oct 26, 2019, 9:26 AM IST
  • Facebook
  • Twitter
  • Whatsapp

ಚನ್ನಮ್ಮ ಕಿತ್ತೂರು(ಅ.26): ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಆಗಬೇಕು ಎಂಬ ಬಹಳ ದಿನಗಳ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಈಗಾಗಲೇ ಚರ್ಚಿಸಲಾಗಿದೆ. ಚನ್ನಮ್ಮನ ಯಶೋಗಾಥೆ ಹಾಗೂ ಬಸವಣ್ಣನವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿದ್ದಾರೆ. 

ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ-2019 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಕಹಳೆ ಊದಿದ ಚೆನ್ನಮ್ಮನ ಶೌರ್ಯ, ಸಾಹಸವನ್ನು ಯುವ ಪೀಳಿಗೆಗೆ ತಲುಪಿಸಬೇಕಿದೆ. ಬ್ರಿಟೀಷರ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡುವ ಮೂಲಕ ಸ್ವಾಭಿಮಾನ ನೆನಪಿಸಿಕೊಟ್ಟವರು ತಾಯಿ ರಾಣಿ ಚನ್ನಮ್ಮ. 1924 ರಲ್ಲಿ ಚನ್ನಮ್ಮ ನಡೆಸಿದ ಹೋರಾಟವು ನಮ್ಮಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿ, ಸ್ವಾತಂತ್ರ್ಯದ ಹೋರಾಟಕ್ಕೆ ಇಂಬು ನೀಡಿತು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯಲ್ಲಿ ಜನರು ಸಂಕಷ್ಟದ್ದಲ್ಲಿದ್ದಾರೆ. ಆದಾಗ್ಯೂ ನೋವು ಮರೆತು ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಸಂತ್ರಸ್ತರಿಗೆ ಮನೆಗಳನ್ನು ಮನೆ ನಿರ್ಮಿಸಿಕೊಡುವ ಮೂಲಕ ಅವರಿಗೆ ನೆರವಾಗಬೇಕಿದೆ. ಈ ಭಾಗದ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನೆರೆಹಾವಳಿ ಹಾಗೂ ಮಳೆಯಿಂದ ರೈತಾಪಿ ವರ್ಗ ಸೇರಿದಂತೆ ಎಲ್ಲ ವರ್ಗದ ಜನು ತೊಂದರೆ ಅನುಭವಿಸುತಿದ್ದಾರೆ, ಅವರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಶ್ರೀಮಠದ ವತಿಯಿಂದ ಈಗಾಗಲೇ .5 ಲಕ್ಷ ನೀಡಲಾಗಿದೆ. ಅಲ್ಲದೆ ಈಗಲೂ ಸಹ .10 ಸಾವಿರ ನಗದು ನೀಡುತ್ತಿನೆಂದು ಹೇಳಿ ಹಣವನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿ ಮಾನವೀಯ ಮೌಲ್ಯಮೆರೆದರು.
ಇದಕ್ಕೂ ಮೊದಲು ರಾಣಿ ಚನ್ನಮ್ಮಾಜಿಯ ಚಿತ್ರ ಹಾಗೂ ಸಾಹಸ ಶೌರ್ಯಗಳನ್ನು ಒಳಗೊಂಡ ಅಂಚೆ ಲಕೋಟಿಯನ್ನು ಸಚಿವ ಸುರೇಶ ಅಂಗಡಿ ಲೋಕಾರ್ಪಣೆ ಗೊಳಿಸಿದರು.

ಚನ್ನಮ್ಮ ಎಕ್ಸಪ್ರೆಸ್‌ ರೈಲು ಕಿತ್ತೂರಿಗೆ ಬರಲಿ: ಶಾಸಕ ದೊಡ್ಡಗೌಡರ

ಕಿತ್ತೂರು ಚೆನ್ನಮ್ಮ ಎಕ್ಸಪ್ರೆಸ್‌ ರೈಲು ಮುಂಬರುವ ದಿನಗಳಲ್ಲಿ ಕಿತ್ತೂರು ಮೂಲಕ ಹಾದು ಹೋಗಬೇಕು ಎಂಬುವುದು ಜನರ ಆಶಯವಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡರು.

ಕಿತ್ತೂರು ಮೂಲಕ ರೈಲು ಮಾರ್ಗ ನಿರ್ಮಿಸಲು ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಈಗಾಗಲೇ ಪ್ರಯತ್ನವನ್ನು ಆರಂಭಿಸಿದ್ದಾರೆ. ಭೂಸ್ವಾಧೀನ ಸಂದರ್ಭದಲ್ಲಿ ರೈತರು ಸಹಕಾರ ನೀಡುವ ಮೂಲಕ ಕಿತ್ತೂರಿನಲ್ಲಿ ರೈಲು ನಿಲ್ದಾಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೋರಿದರು. ನಿರಂತರ ಮಳೆಯ ಮಧ್ಯೆಯೂ ಮೂರು ದಿನಗಳ ಉತ್ಸವವು ಯಶಸ್ವಿಯಾಗಿದ್ದು, ಇದಕ್ಕೆ ಸಹಕಾರ ನೀಡಿದ ಎಲ್ಲ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಕ್ಕೆ ಶಾಸಕ ಮಹಾಂತೇಶ ದೊಡ್ಡಗೌಡರ ಕೃತಜ್ಞತೆ ಸಲ್ಲಿಸಿದರು.

ಸಮಾರೋಪ ನುಡಿ:

ಕಿತ್ತೂರು ಉತ್ಸವ-2019 ರ ಸಮಾರೋಪ ನುಡಿಗಳನ್ನಾಡಿದ ಕರ್ನಾಟಕ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ರಾಜೇಶ್ವರಿ ಮಹೇಶ್ವರಯ್ಯ ಅವರು, ಕಿತ್ತೂರು ಕರ್ನಾಟಕ ಆಗಲಿ ಎಂಬ ಜನರ ಆಶಯ ಶೀಘ್ರದಲ್ಲಿ ಈಡೇರಲಿ ಎಂದು ಆಶಿಸಿದರು.

ಬೆಳಗಾವಿ: ಕಿತ್ತೂರು ಉತ್ಸವದಲ್ಲಿ ಮೆರಗು ತಂದ ಮಹಿಳೆಯರು

ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಂಚೆ ಇಲಾಖೆಯ ಅಧೀಕ್ಷಕರಾದ ಎಸ್‌.ಜಿ.ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ ಅಂಗಡಿ ಬಿಡುಗಡೆಗೊಳಿಸಿದರು. ನಿಚ್ಚಣಿಕೆ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಹಾಗೂ ಕಾದರವಳ್ಳಿ ಶೀಮಿಮಠದ ಡಾ.ಫಾಲಾಕ್ಷಿ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮವಹಿಸುವ ಅವಶ್ಯಕತೆ ಇದೆ. ಕಾರಣ ಮುಂದಿನ ದಿನಗಳಲ್ಲಿ ಇಲ್ಲಿ ಹಲವಾರು ಉದ್ಯಮಗಳನ್ನು ಸ್ಥಾಪಿಸುವ ಅಗತ್ಯತೆ ಇದೆ. ಬಸವಣ್ಣನ ಕ್ರಾಂತಿ ಹಾಗೂ ಪ್ರಜಾಪ್ರಭುತ್ವವನ್ನು ಅರಿತು ಸರ್ಕಾರ ಕಲ್ಯಾಣ ಕರ್ನಾಟಕ ಎಂಬ ನಾಮಕಾರಣ ಮಾಡಿದೆ. ಬಸವಣ್ಣ ದೇಶಕ್ಕೆ ಪ್ರಜಾಪ್ರಭುತ್ವ ಕೊಡುಗೆ ನೀಡಿದರೆ ತಾಯಿ ಚನ್ನಮ್ಮಾಜಿಯು ಶೌರ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಹೇಳಿದ್ದಾರೆ. 

ಕಿತ್ತೂರು ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆಗೊಂಡಿದ್ದು .200 ಕೋಟಿಯ ಅವಶ್ಯಕತೆ ಇದೆ. ಈಗಾಗಲೇ ಪ್ರಾಧಿಕಾರದ ವತಿಯಿಂದ 200 ಕೋಟಿಯ ನೀಲನಕ್ಷೆಯನ್ನು ತಯಾರಿಸಲಾಗಿದ್ದು, ಅನುದಾನ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರವನ್ನು ಸಚಿವರು ಒತ್ತಾಯಿಸಬೇಕು. ರಾಜ್ಯ ಸರ್ಕಾರದಿಂದ ಉತ್ಸವದ ಆಚರಣೆಗೆ 1 ಕೋಟಿಯನ್ನು ನೀಡಿ ಉತ್ಸವದ ಆಚರಣೆಯನ್ನು ಪ್ರೋತ್ಸಾಹಿಸಲಾಗಿದ್ದು ಅದರಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ ಕಲಾತಂಡಗಳು ಉತ್ಸವವನ್ನು ಯಶಸ್ವಿಗೊಳಿಸಿವೆ ಎಂದು ಶಾಸಕ ಮಹಾಂತೇಶ ದೊಡಗೌಡರ ಅವರು ತಿಳಿಸಿದ್ದಾರೆ.

ನೆರೆಹಾವಳಿ ಹಾಗೂ ಮಳೆಯಿಂದ ರೈತಾಪಿ ವರ್ಗ ಸೇರಿದಂತೆ ಎಲ್ಲ ವರ್ಗದ ಜನು ತೊಂದರೆ ಅನುಭವಿಸುತಿದ್ದಾರೆ, ಅವರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಶ್ರೀ ಮಠದ ವತಿಯಿಂದ ಈಗಾಗಲೇ ರೂ. 5 ಲಕ್ಷ ನಿಡಲಾಗಿದೆ ಅಲ್ಲದೆ ಈಗಲೂ ಸಹ ರೂ. 10 ಸಾವಿರ ನಗದು ನೀಡುತ್ತಿದ್ದೇನೆ ಎಂದು ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಅವರು ಹೇಳಿದ್ದಾರೆ.

ಕ್ಷಮೆ ಕೋರಿದ ಶಾಸಕ ದೊಡಗೌಡರ

ಚನ್ನಮ್ಮಾಜಿಯ ವಂಶಸ್ಥರನ್ನು ಪ್ರತಿವರ್ಷ ಉತ್ಸವದ ಉದ್ಘಾಟನೆಯಲ್ಲಾಗಲಿ ಅಥವಾ ಸಮಾರೋಪ ಸಮಾರಂಭದಲ್ಲಾಗಲಿ ಸನ್ಮಾನಿಸುವುದು ಉತ್ಸವದ ವಾಡಿಕೆ. ಅದರೆ, ಈ ಬಾರಿ ಚನ್ನಮ್ಮಾಜಿಯ ವಂಶಸ್ಥರಾದ ದೇಸಾಯಿ ವಂಶಸ್ಥರಿಗೆ ಆಮಂತ್ರಣ ಪತ್ರಿಕೆ ನಿಡುವುದರಲ್ಲಿ ಸ್ವಲ್ಪ ತೊಂದರೆ ಉಂಟಾದ ಕಾರಣ ಅವರು ಸಮಾರೋಪಕ್ಕೆ ಬರುತ್ತಿರುವುದು ತಡವಾಗಿದ್ದು ಅವರು ಬಂದ ನಂತರ ಸನ್ಮಾನಿಸುವುದಾಗಿ ಹೇಳಿ ನೆರೆದ ಜನರಲ್ಲಿ ಕ್ಷಮೆ ಯಾಚಿಸಿ ಸರಳತೆ ಮೆರೆದರು.
 

Follow Us:
Download App:
  • android
  • ios