ಸ್ಥಳೀಯ ಸಂಸ್ಥೆಗಳ ಚುನಾವಣೆ: ಕೂಡ್ಲಿಗಿಯಲ್ಲಿ ಅತಂತ್ರ, ಕಂಪ್ಲಿಯಲ್ಲಿ ಅರಳಿದ ಕಮಲ
ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ|ಕೂಡ್ಲಿಗಿಯಲ್ಲಿ ಅತಂತ್ರ| ಕಂಪ್ಲಿ ಪುರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ| ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷೇತರರ ನಿರ್ಣಾಯ ಪಾತ್ರ|
ಬಳ್ಳಾರಿ[ನ.14]: ಜಿಲ್ಲೆಯಲ್ಲಿ ನಡೆದ ಎರಡು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು[ಗುರುವಾರ] ಹೊರಬಿದ್ದಿದೆ. ಕೂಡ್ಲಿಗಿ ಪಟ್ಟಣ ಪಂಚಾಯತಿ ಅತಂತ್ರವಾದರೆ, ಕಂಪ್ಲಿ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಕೂಡ್ಲಿಗಿ ಪಟ್ಟಣ ಪಂಚಾಯತಿಯ 20 ವಾರ್ಡ್ ಗಳ ಪೈಕಿ 7 ವಾರ್ಡ್ ಗಳಲ್ಲಿ ಬಿಜೆಪಿ ಜಯ ಸಾಧಿಸಿದರೆ, 6 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಜೆಡಿಎಸ್ 4 ವಾರ್ಡ್ ಗಳಲ್ಲಿ ಗೆಲುವಿನ ನಗ ಬೀರಿದ್ದಾರೆ. ಇನ್ನು ಪಕ್ಷೇತರರು 3 ವಾರ್ಡ್ ಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಹೀಗಾಗಿ ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷೇತರರೇ ನಿರ್ಣಾಯ ಪಾತ್ರ ವಹಿಸಿಲಿದ್ದಾರೆ.
ಪುರಸಭೆ ಚುನಾವಣೆ ಫಲಿತಾಂಶ: ಮದುವೆಯ ದಿನವೇ ಮದುಮಗನಿಗೆ ಸೋಲು
ಇನ್ನು ಕಂಪ್ಲಿ ಪುರಸಭೆಯನ್ನು ಬಿಜೆಪಿ ವಶಪಡಿಸಿಕೊಂಡಿದೆ. ಪಟ್ಟಣದ ಒಟ್ಟು 23 ವಾರ್ಡ್ ಗಳ ಪೈಕಿ. 13 ವಾರ್ಡ್ ಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 10 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ.
ರಾಜ್ಯದ ಎರಡು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 409 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ತಾಲೂಕು ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಇವಿಎಂಗಳನ್ನು ಇಡಲಾಗಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತೆಯ ನೇತೃತ್ವವನ್ನು ವಹಿಸಿದ್ದಾರೆ.
ಮದುವೆ, ಚುನಾವಣೆಯ ರಿಸಲ್ಟ್ ಒಂದೇ ದಿನ: ಮದುಮಗನಲ್ಲಿ ಹೆಚ್ಚಿದ ಟೆನ್ಷನ್!
ಎರಡು ಮಹಾನಗರ ಪಾಲಿಕೆಯ 105, ಆರು ನಗರ ಸಭೆಗಳ 194, ಮೂರು ಪುರಸಭೆಗಳ 69, 3 ಪಟ್ಟಣ ಪಂಚಾಯಿತಿಗಳ 50 ಸೇರಿದಂತೆ 418 ವಾರ್ಡ್‌ಗಳ ಪೈಕಿ 409 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ.