ಪುರಸಭೆ ಚುನಾವಣೆ ಫಲಿತಾಂಶ: ಮದುವೆಯ ದಿನವೇ ಮದುಮಗನಿಗೆ ಸೋಲು
ಕಂಪ್ಲಿ ಪುರಸಭೆ ಉಪ ಚುನವಾಣೆ|ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಾಜೇಶ್ ಪರಾಭವ| ಬಿಜೆಪಿ ಟಿ.ವಿ.ಸುದರ್ಶನ ರೆಡ್ಡಿಗೆ ಗೆಲುವು|ರಾಜೇಶಗೆ 11 ಮತಗಳಿಂದ ಸೋಲು|ಮದುವೆಯ ದಿನವೇ ಸೋಲಿನ ರುಚಿ ತೋರಿಸಿ ಮತದಾರ|ಕಂಪ್ಲಿ ನಗರದ ಕೆ.ಎಸ್.ಭವನದಲ್ಲಿ ರಾಜೇಶ ವಿವಾಹ|
"
ಕಂಪ್ಲಿ[ನ.14]: ಪುರಸಭೆಗೆ ನಡೆದ ಉಪ ಚುನವಾಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಾಜೇಶ್ ಅವರು ಪರಾಭವ ಹೊಂದಿದ್ದಾರೆ. ರಾಜೇಶ್ ಅವರ ಮದುವೆ ಕೂಡ ಇಂದೇ ಇದೆ. ಹೀಗಾಗಿ ಇಂದು ರಾಜೇಶ ಅವರಿಗೆ ವಿಶೇಷ ದಿನವಾಗಿತ್ತು. ಆದರೆ. ಮದುವೆಯ ದಿನವೇ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇವರ ಪ್ರತಿಸ್ಪರ್ಧಿ ಅಭ್ಯರ್ಥಿ ಬಿಜೆಪಿಯ ಟಿ.ವಿ.ಸುದರ್ಶನ ರೆಡ್ಡಿ ಅವರು ಗೆಲುವು ಸಾಧಿಸಿದ್ದಾರೆ.
ಕಂಪ್ಲಿ ಪುರಸಭೆಗೆ ಎಂಟನೇ ವಾರ್ಡ್ ನಿಂದ ಕಣಕ್ಕಿಳಿದಿದ್ದರು. ರಾಜೇಶ ಮದುಮಗ ರಾಜೇಶ ಅವರಿಗೆ 11 ಮತಗಳಿಂದ ಸೋಲು ಅನುಭವಿಸಿದ್ದಾರೆ. ಮದುವೆಯ ದಿನ ಗೆಲುವಿನ ಉಡುಗೊರೆಯ ನಿರೀಕ್ಷೆಯಲ್ಲಿದ್ದ ರಾಜೇಶ ಅವರಿಗೆ ಮತದಾರ ಸೋಲಿನ ರುಚಿ ತೋರಿಸಿದ್ದಾರೆ.
ಮದುವೆ, ಚುನಾವಣೆಯ ರಿಸಲ್ಟ್ ಒಂದೇ ದಿನ: ಮದುಮಗನಲ್ಲಿ ಹೆಚ್ಚಿದ ಟೆನ್ಷನ್!
ಇಂದು ಕಂಪ್ಲಿ ನಗರದ ಕೆ.ಎಸ್.ಭವನದಲ್ಲಿ ರಾಜೇಶ ಅವರ ವಿವಾಹ ನಡೆಯಲಿದೆ. ರಾಜೇಶಗೆ ಒಂದು ಮದುವೆಯ ಖುಷಿ ಆದರೆ, ಮತ್ತೊಂದೆ ಕಡೆ ಚುನಾವಣೆಯ ಸೋಲಿನ ಕಹಿ ಅನುಭವಿಸಿದ್ದಾರೆ.
ರಾಜ್ಯದ ಎರಡು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 409 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ತಾಲೂಕು ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಇವಿಎಂಗಳನ್ನು ಇಡಲಾಗಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತೆಯ ನೇತೃತ್ವವನ್ನು ವಹಿಸಿದ್ದಾರೆ.
ಎರಡು ಮಹಾನಗರ ಪಾಲಿಕೆಯ 105, ಆರು ನಗರ ಸಭೆಗಳ 194, ಮೂರು ಪುರಸಭೆಗಳ 69, 3 ಪಟ್ಟಣ ಪಂಚಾಯಿತಿಗಳ 50 ಸೇರಿದಂತೆ 418 ವಾರ್ಡ್‌ಗಳ ಪೈಕಿ 409 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ.