Asianet Suvarna News Asianet Suvarna News

ಕಂಪ್ಲಿ ಪುರಸಭೆ ಉಪಚುನಾವಣೆ: ತಾಯಿ- ಮಗನಿಗೆ ಸೋಲು

ಕಂಪ್ಲಿ ಪುರಸಭೆ ಉಪಚುನಾವಣೆಯ ಫಲಿತಾಂಶ|ಯಿ- ಮಗನಿಗೆ ಸೋಲು| 4 ಹಾಗೂ 5ನೇ ವಾರ್ಡಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ತಾಯಿ‌-ಮಗ|

BJP Candidates Mother-Son Defeat in Kampli Local Body Election
Author
Bengaluru, First Published Nov 14, 2019, 10:57 AM IST

ಬಳ್ಳಾರಿ[ನ.14]: ಜಿಲ್ಲೆಯ ಕಂಪ್ಲಿ ಪುರಸಭೆಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಂದು ಕಡೆ ಮದುಮಗ ಸೋತರೆ ಮತ್ತೊಂದು ಕಡೆ ತಾಯಿ-ಮಗ ಇಬ್ಬರೂ ಸೋಲು ಕಂಡಿದ್ದಾರೆ. 

ಹೌದು, ಕಂಪ್ಲಿ ಪುರಸಭೆಯ 4 ಹಾಗೂ 5ನೇ ವಾರ್ಡಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ತಾಯಿ‌-ಮಗ ಇಬ್ಬರು ಪರಾಭವ ಹೊಂದಿದ್ದಾರೆ. G.ಕೊಂಡಮ್ಮ ಅವರು 4 ನೇ ವಾರ್ಡಿಗೆ ಸ್ಪರ್ಧಿಸಿದರೆ, ಮಗ 5 ನೇ ವಾರ್ಡಿಗೆ ಸ್ಪರ್ಧಿಸಿದ್ದರು. ಆದರೆ, ಮತದಾರ ಪ್ರಭು ಇಬ್ಬರಿಗೂ ಸೋಲಿನ ರುಚಿ ತೋರಿಸಿದ್ದಾರೆ. ಈ ಮೂಲಕ ಪುರಸಭೆ ಪ್ರವೇಶಿಸಬೇಕು ಅಂದುಕೊಂಡಿದ್ದ ಇವರಿಬ್ಬರ ಕನಸು ನುಚ್ಚು ನೂರಾಗಿದೆ.

ಪುರಸಭೆ ಚುನಾವಣೆ ಫಲಿತಾಂಶ: ಮದುವೆಯ ದಿನವೇ ಮದುಮಗನಿಗೆ ಸೋಲು

ರಾಜ್ಯದ ಎರಡು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 409 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ತಾಲೂಕು ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಇವಿಎಂಗಳನ್ನು ಇಡಲಾಗಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತೆಯ ನೇತೃತ್ವವನ್ನು ವಹಿಸಿದ್ದಾರೆ. 

ಮದುವೆ, ಚುನಾವಣೆಯ ರಿಸಲ್ಟ್ ಒಂದೇ ದಿನ: ಮದುಮಗನಲ್ಲಿ ಹೆಚ್ಚಿದ ಟೆನ್ಷನ್!

ಎರಡು ಮಹಾನಗರ ಪಾಲಿಕೆಯ 105, ಆರು ನಗರ ಸಭೆಗಳ 194, ಮೂರು ಪುರಸಭೆಗಳ 69, 3 ಪಟ್ಟಣ ಪಂಚಾಯಿತಿಗಳ 50 ಸೇರಿದಂತೆ 418 ವಾರ್ಡ್‌ಗಳ ಪೈಕಿ 409 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ.

Follow Us:
Download App:
  • android
  • ios