ವಕೀಲೆ ಮೇಲೆ ಶನಿವಾರ ಅಮಾನವೀಯವಾಗಿ ಹಲ್ಲೆ ನಡೆದಿತ್ತು ಹೊಡೆದು ಹೊಟ್ಟೆಗೆ ಒದ್ದು ವ್ಯಕ್ತಿಯಿಂದ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು
ಬಾಗಲಕೋಟೆ: ನಗರದಲ್ಲಿ ಶನಿವಾರ ನಡೆದ ವಕೀಲೆ ಸಂಗೀತಾ ಶಿಕ್ಕೇರಿ ಮೇಲಿನ ದೌರ್ಜನ್ಯ ಖಂಡಿಸಿ ಬಾಗಲಕೋಟೆ ಜಿಲ್ಲಾ ನ್ಯಾಯವಾದಿಗಳ ಸಂಘ ಇಂದು ಸ್ವಯಂಪ್ರೇರಿತವಾಗಿ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿತ್ತು. ಬಾಗಲಕೋಟೆಯ (Bagalkote) ವಿನಾಯಕನಗರದಲ್ಲಿ (Vinayakanagara)ಶನಿವಾರ ವಕೀಲೆ ಸಂಗೀತಾ ಅವರಿಗೆ ಆತನ ನೆರೆ ಮನೆಯ ಮಹಾಂತೇಶ್ (Mahantesh) ಎಂಬಾತ ಹೊಡೆದು ಬಡಿದು ಹೀನಾಯವಾಗಿ ಹೊಟ್ಟೆಗೆ ಒದ್ದು ಅಮಾನವೀಯವಾಗಿ ವರ್ತಿಸಿದ್ದ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬಾಗಲಕೋಟೆ ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳು ಇಂದ ಜಿಲ್ಲಾ ನ್ಯಾಯಾಲಯ ಆವರಣದಿಂದ ಜಿಲ್ಲಾಡಳಿತ ಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹಲ್ಲೆ ಮಾಡಿರುವ ಆರೋಪಿಯ ಜೊತೆಗೆ ದೂರಿನಲ್ಲಿ ದಾಖಲಿಸಿರುವ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ವಕೀಲೆಯಮನೆಗೆ ಬಂದ್ ಮಾಡಿರುವ ಕುಡಿಯುವ ನೀರು, ವಿದ್ಯುತ್ ಸಂಪರ್ಕವನ್ನು ಮರು ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲಾ ವಕೀಲರ ಸಂಘಕ್ಕೆ ಕರವೇ, ಮಹಿಳಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರು.
"
Ramya vs Nalapad ಹಲ್ಲೆ ಕೇಸ್‌ನಲ್ಲಿ ಬೇಲ್ ಮೇಲಿರುವ ನಲಪಾಡ್‌ನಿಂದ ನನ್ನ ನೈತಿಕತೆ ಪಶ್ನೆ, ರಮ್ಯಾ ತರಾಟೆ!
ಇನ್ನು ಈ ಘಟನೆಯ ಬಗ್ಗೆ ಬಾಗಲಕೋಟೆಯಲ್ಲಿ (Bagalkote) ಹಲ್ಲೆಗೊಳಗಾದ ವಕೀಲೆ ಸಂಗೀತಾ ಶಿಕ್ಕೇರಿ (Sangeeta Shikkeri) ಮಾಧ್ಯಮಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗಲಕೋಟೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ (Raju naykara) ನಮ್ಮ ಕಟ್ಟಡಕ್ಕೆ ಹಾನಿ ಮಾಡಿದ್ದಾರೆ. ವಿನಾಯಕ ನಗರದಲ್ಲಿನ ಮನೆ ಮುಂದಿನ ಗೋಡೆ ಧ್ವಂಸ ಮಾಡಿದ್ದಾರೆ. ನಮ್ಮ ಕುಟುಂಬದ ಮಧ್ಯೆ ಆಸ್ತಿ ಸಂಬಂಧ ಜಗಳವಿದೆ. ಅದೀಗ ಕೋರ್ಟ್ ಮೆಟ್ಟಿಲೇರಿದೆ. ಹೀಗಿರುವಾಗ ರಾಜು ನಾಯ್ಕರ ನಮ್ಮ ಆಸ್ತಿ ಖರೀದಿ ಮಾಡಿದ್ದು ಹೇಗೆ ಎಂದು ಸಂಗೀತಾ ಪ್ರಶ್ನಿಸಿದರು. ನಮ್ಮ ದೊಡ್ಡಪ್ಪನ ಜೊತೆ ಸೇರಿಕೊಂಡು ರಾಜು ನಾಯ್ಕರ ಅಕ್ರಮವಾಗಿ ನಮ್ಮ ಮನೆ ಖರೀದಿ ಮಾಡಿದ್ದಾರೆ. ಈಗ ಮನೆ ಖಾಲಿ ಮಾಡಿಸಲು ದೌರ್ಜನ್ಯ ಮಾಡುತ್ತಿದ್ದಾರೆ. ರಾಜು ನಾಯ್ಕರಿಂದ ಆಗಿರುವ ಅನ್ಯಾಯಕ್ಕೆ ನಮಗೆ ನ್ಯಾಯ ಸಿಗಬೇಕು. ಇಲ್ಲವಾದರೆ ಶಾಸಕರ ಮನೆ ಎದುರು ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದ ವಕೀಲೆ ಸಂಗೀತಾ ಶಿಕ್ಕೇರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದರೆ ವಕೀಲೆ ಸಂಗೀತಾ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜು ನಾಯ್ಕರ, ದಬ್ಬಾಳಿಕೆ ನಮ್ಮ ಸಂಸ್ಕೃತಿ ಅಲ್ಲ, ವಕೀಲೆ ಸಂಗೀತಾಳ ದೂರು ಸತ್ಯಕ್ಕೆ ದೂರವಾಗಿದೆ. ನಾವು ಯಾರ ಮೇಲೂ ದಬ್ಬಾಳಿಕೆ ಮಾಡಿಲ್ಲ. ನಾವು ಪಡೆದಿರೋ ಆಸ್ತಿಯಲ್ಲಿ ವಕೀಲೆ ಕುಟುಂಬ ವಾಸಿಸುತ್ತಿದೆ. ನಾವು ಅವರಿಗೆ ದಾಖಲಾತಿ ನೀಡಿ, ಮನೆ ಬಿಟ್ಟು ಕೊಡುವಂತೆ ಮನವಿ ಮಾಡಿದ್ದೇವೆ. ಇದನ್ನು ಬಿಟ್ಟು ನಾವೆಲ್ಲೂ ದೌಜ೯ನ್ಯ ಮಾಡಿಲ್ಲ. ದಾಖಲಾತಿಯಂತೆ ನಮ್ಮ ಆಸ್ತಿ ಬಿಟ್ಟು ಕೊಡುವಂತೆ ಕೇಳಿದ್ದೇವೆ ಎಂದು ರಾಜು ನಾಯ್ಕರ ಪ್ರತಿಕ್ರಿಯಿಸಿದ್ದಾರೆ.
ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆ, ಇನ್ಸ್ಪೆಕ್ಟರ್ ಸೇರಿ ಮೂವರ ಅಮಾನತು
ಈ ನಡುವೆ ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಆರೋಪಿ ಕುಟುಂಬದಿಂದ ಎಸ್ಪಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಹಲ್ಲೆ ಮಾಡಿದ ಮಹಾಂತೇಶ ಚೊಳಚಗುಡ್ಡ ಅವರ ಪತ್ನಿ ಸುಜಾತಾ , ಪುತ್ರರಾದ ಅಮೋಘ, ಆದರ್ಶ ಹಾಗೂ ಮಹಾಂತೇಶ ಸಹೋದರ ಯಲ್ಲಪ್ಪ ಅವರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ವಕೀಲೆ ಸಂಗೀತಾ ಹಾಗೂ ಅವರ ಪತಿ ಮತ್ತು ಮೈದುನ ಮೊದಲು ಮಹಾಂತೇಶ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಅಂಗಡಿಗೆ ನುಗ್ಗಿ ಮಹಾಂತೇಶ್ ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಬಳಿಕ ಮಹಾಂತೇಶ ಕೋಪಗೊಂಡು ವಕೀಲೆಗೆ ಹೊಡೆದಿದ್ದಾನೆ. ತಾವು ಹಲ್ಲೆ ಮಾಡಿರುವುದನ್ನು ಬಿಟ್ಟು ಮಹಾಂತೇಶ್ ಹೊಡೆಯುವುದನ್ನಷ್ಟೆ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುವ ಸಲುವಾಗಿಯೇ ಜಗಳ ಮಾಡಿದ್ದಾಳೆ. ತಮ್ಮ ಮನೆಯಿಂದ ನಮ್ಮ ಅಂಗಡಿಗೆ ವಕೀಲೆ ನುಗ್ಗಿದ್ದ್ಯಾಕೆ? ಹೀಗಾಗಿ ಇಡೀ ಪ್ರಕರಣದಲ್ಲಿ ನಮಗೂ ಅನ್ಯಾಯವಾಗಿದೆ. ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಯುವತಿಯ ಮೇಲೂ ಹಲ್ಲೆ ಮಾಡಿದ್ದಾರೆ.
ಆ ಬಗ್ಗೆ ಯುವತಿ, ವಕೀಲೆ ಸಂಗೀತಾ, ಪತಿ ನವೀನ್, ಮೈದುನ ಸುನೀಲ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಸಂಗೀತಾ ಶಿಕ್ಕೇರಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು.
ನಮಗೆ ನ್ಯಾಯ ಕೊಡಿಸಬೇಕು ಎಂದು ಹಲ್ಲೆ ಮಾಡಿದ ಮಹಾಂತೇಶ ಚೊಳಚಗುಡ್ಡ ಅವರ ಸಹೋದರ ಯಲ್ಲಪ್ಪ ಚೊಳಚಗುಡ್ಡ ಹೇಳಿದ್ದಾರೆ. ಶನಿವಾರ ಮಧ್ಯಾಹ್ನ ವಕೀಲೆ ಸಂಗೀತಾ (Sangeetha) ಅವರ ಮೇಲೆ ಮಹಾಂತೇಶ್ (Manthesh) ಹಲ್ಲೆ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯೋರ್ವಳ ಮೇಲೆ ಈ ರೀತಿ ದೌರ್ಜನ್ಯ ನಡೆಸಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.