Asianet Suvarna News Asianet Suvarna News

ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆ, ಇನ್ಸ್ಪೆಕ್ಟರ್  ಸೇರಿ ಮೂವರ ಅಮಾನತು

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಮಂಗಳೂರಿನ ಬಜಪೆ ಪೊಲೀಸರು ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ ಆರೋಪ ಕೇಳಿ ಬಂದಿದ್ದು ಬಜಪೆ ಠಾಣೆ ಇನ್ಸ್ಪೆಕ್ಟರ್  ಸೇರಿ 3 ಮಂದಿ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

Bajpe police allegedly assaulted case cops and the Bajpe police inspector suspended gow
Author
Bengaluru, First Published Apr 26, 2022, 9:56 AM IST

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಗಳೂರು (ಏ.26): ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ (kateel durgaparameshwari temple) ನಡೆದ ಘಟನೆಗೆ ಸಂಬಂಧಿಸಿ ಮಂಗಳೂರಿನ ಬಜಪೆ ಪೊಲೀಸರು (Bajpe police) ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ ಆರೋಪ ಕೇಳಿ ಬಂದಿದ್ದು, ಹಲ್ಲೆ ನಡೆಸಿದ್ದಲ್ಲದೇ ಹಿಂದೂ ಕಾರ್ಯಕರ್ತರ ತಾಯಿ ಮತ್ತು ತಂಗಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಅಂತ ಆಸ್ಪತ್ರೆಗೆ ದಾಖಲಾಗಿರುವ ಕಾರ್ಯಕರ್ತರು ಆರೋಪಿಸಿದ್ದಾರೆ. 

ಪೊಲೀಸರ ಹಲ್ಲೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತ ಮಹೇಶ್ ಹೇಳಿಕೆ ನೀಡಿದ್ದಾನೆ. ಮುಸ್ಲಿಂ ವ್ಯಾಪಾರಿ ದೇವಸ್ಥಾನದಲ್ಲಿ ಎಳನೀರು ಹಾಕುವುದು ಬೇಡ ಅಂದಿದ್ದೆವು. ಅವನಿಗೆ ಒಳ್ಳೆಯ ರೀತಿಯಲ್ಲೇ ಹೇಳಿ ನಾವು ಕಳಿಸಿದ್ದೆವು. ಇದೇ ವಿಚಾರದಲ್ಲಿ ಬಜಪೆ ಠಾಣೆಗೆ ನನ್ನನ್ನು ಕರೆದಿದ್ದರು‌. ಆ ಬಳಿಕ ಕಟೀಲಿಗೆ ಬಂದು ಪೊಲೀಸರೇ ನನ್ನನ್ನ ಕರೆದು ಠಾಣೆಗೆ ಬಂದ್ರು. ಠಾಣೆಯಲ್ಲಿ ಇಳಿದ ತಕ್ಷಣ ಇನ್ಸ್ಪೆಕ್ಟರ್ ಸಂದೇಶ್ ಕೆನ್ನೆಗೆ ಹೊಡೆದು ಮೊಬೈಲ್ ಕಸಿದರು. ಕೆನ್ನೆಗೆ ಹೊಡೆದ ಪರಿಣಾಮ ಕಿವಿ ಕೇಳಿಸದಂತಾಗಿ ಹೋಯ್ತು. ಆ ಬಳಿಕ ನನಗೆ‌ ಬೆದರಿಸಿ ಗೆಳೆಯರಾದ ದೀಪಕ್ ಹಾಗೂ ದುರ್ಗ ಚರಣ್ ಕರೆಸಿದ್ರು. ಬಳಿಕ ಮೂವರಿಗೂ ಠಾಣೆಯಲ್ಲಿ ಬೆಳಿಗ್ಗಿನಿಂದ ಸಂಜೆ ತನಕ ಹೊಡೆದಿದ್ದಾರೆ.

ಕಾಲಿನ ಮೇಲೆ ಲಾಠಿ ಇಟ್ಟು ಅದರ ಮೇಲೆ ಪೊಲೀಸರು ನಿಂತು ಹಿಂಸಿಸಿದ್ದಾರೆ. ಮೂವರನ್ನ ಸಾಲಾಗಿ ಕೂರಿಸಿ ಚೆನ್ನಾಗಿ ಮನಸೋ ಇಚ್ಛೆ ಹೊಡೆದಿದ್ದಾರೆ. ಒಬ್ಬ ಮುಸ್ಲಿಂ ಪೊಲೀಸ್ ಸಿಬ್ಬಂದಿ ಕೈಯ್ಯಲ್ಲಿ ಚೆನ್ನಾಗಿ ಥಳಿಸಿದ್ದಾರೆ. ಮುಸ್ಲಿಂ ವ್ಯಾಪಾರಿ ದೂರು ಕೊಟ್ಟಿಲ್ಲ, ವಾರ್ನ್ ಮಾಡಿ ಅಂತ ಹೇಳಿದ್ರು. ಬಳಿಕ ನಿನ್ನ ತಂಗಿಯನ್ನ ಕರೆಸು ಅಂತ ಕೆಟ್ಟದಾಗಿ ಮಾತನಾಡಿದ್ರು. ದೀಪಕ್ ಮತ್ತು ಶರಣ್ ನ ಅಮ್ಮನನ್ನ ಕರೆಸಿ ಅಂತ ಅವಾಚ್ಯವಾಗಿ ಬೈದಿದ್ದಾರೆ. ಬಟ್ಟೆ ಬಿಚ್ಚಿ ಅಮಾನವೀಯವಾಗಿ ನಮಗೆ ಹಲ್ಲೆ ನಡೆಸಿದ್ದಾರೆ. ನಮ್ಮ ಮೇಲೆ ಯಾವುದೇ ಕೇಸ್ ಇಲ್ಲ, ಸುಖಾಸುಮ್ಮನೆ ಥಳಿಸಿದ್ದಾರೆ. ತಲೆ, ಹೊಟ್ಟೆ, ಕುತ್ತಿಗೆ  ಎಲ್ಲ ಕಡೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಯಾವುದೇ ತಪ್ಪು ಮಾಡದೇ ನಮಗೆ ಹಲ್ಲೆ ಮಾಡಿದ್ದಾರೆ. ಸೀಯಾಳ ವ್ಯಾಪಾರಿಗೆ ನಾವು ಬೈದಿಲ್ಲ, ಹೊಡೆದಿಲ್ಲ. ಸೀಯಾಳ ವ್ಯಾಪಾರಿಯೇ ನಾವು ಹೊಡೆದಿಲ್ಲ ಅಂತ ಪೊಲೀಸರಿಗೆ ಹೇಳಿದ್ದಾರೆ ಎಂದು ಬಜಪೆ ಪೊಲೀಸರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. 

NIT KARNATAKA RECRUITMENT 2022: ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ನೇಮಕಾತಿ

ಅಷ್ಟಕ್ಕೂ ನಡೆದಿದ್ದೇನು?: ಮುಸ್ಲಿಂ ವ್ಯಾಪಾರಿಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎಳನೀರು ವ್ಯಾಪಾರಕ್ಕೆ ಕಳೆದ ಶನಿವಾರ ಹಿಂದೂ ಕಾರ್ಯಕರ್ತರು ತಡೆ ಒಡ್ಡಿದ್ದಾರೆ‌. ದೇವಸ್ಥಾನದ ಆವರಣದ ಅಂಗಡಿಗೆ ಕಳೆದ ಹಲವಾರು ವರ್ಷಗಳಿಂದ ಮೂಡಬಿದಿರೆಯ ಇಸ್ಮಾಯಿಲ್ ಎಳನೀರು ಪೂರೈಕೆ ಮಾಡುತ್ತಿದ್ದು, ದೇವಸ್ಥಾನಗಳಲ್ಲಿ ಧರ್ಮ ದಂಗಲ್ ಹಿನ್ನೆಲೆ ಹಿಂದೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ವ್ಯಾಪಾರ ನಡೆಸದಂತೆ ಇಸ್ಮಾಯಿಲ್ ಗೆ ಹಿಂದೂ ಕಾರ್ಯಕರ್ತ ಮಹೇಶ್ ಸೂಚಿಸಿದ್ದ ಎನ್ನಲಾಗಿದೆ. ಹೀಗಾಗಿ ಹಿಂದೂ ಕಾರ್ಯಕರ್ತರ ಬೆದರಿಕೆ ಬಗ್ಗೆ ಇಸ್ಮಾಯಿಲ್ ಮೌಖಿಕವಾಗಿ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರಿನ ಹಿನ್ನೆಲೆ ಮಹೇಶ್ ನನ್ನ ಠಾಣೆಗೆ ಕರೆಸಿದ್ದ ಬಜಪೆ ಪೊಲೀಸರು, ಮಹೇಶನ ಮೂಲಕ ಗೆಳೆಯರಾದ ದುರ್ಗಾಚರಣ್ ಹಾಗೂ ದೀಪಕ್ ಠಾಣೆಗೆ ಕರೆಸಿದ್ದರು. ಠಾಣೆಗೆ ಕರೆಸಿ ಮೂವರಿಗೂ ಬಜಪೆ ಇನ್ಸ್ಪೆಕ್ಟರ್ ಸಂದೇಶ್ ಮತ್ತು ನಾಲ್ವರು ಸಿಬ್ಬಂದಿ ಥಳಿಸಿದ್ದಾಗಿ ಆರೋಪಿಸಿದ್ದಾರೆ.

Patna Abhishek Amazon Offer ಪಾಟ್ನಾ ವಿದ್ಯಾರ್ಥಿಗೆ ದಾಖಲೆಯ ₹1.8 ಕೋ ಆಫರ್!

ಠಾಣೆಗೆ ಕರೆದು ಹೊಡೆಯೋಕೆ ಅವಕಾಶ ಇಲ್ಲ, ಹಾಗಾಗಿ ಅಮಾನತು: ಕಮಿಷನರ್
ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಜಪೆ ಠಾಣೆ ಇನ್ಸ್ಪೆಕ್ಟರ್ ಸಂದೇಶ್, ಸಿಬ್ಬಂದಿಗಳಾದ ಇಮ್ತಿಯಾಜ್, ಸುನೀಲ್ ಮತ್ತು ಪ್ರವೀಣ್ ಅಮಾನತು ಮಾಡಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾರೆ.

ಕಟೀಲಿನ ಮೂರು‌ ಜನ ಯುವಕರು ಬಜಪೆ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ವಿರುದ್ದ ಆರೋಪಿಸಿದ್ದರು.‌ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಈ ವೇಳೆ ಆ ಯುವಕರ ದೇಹದ ಮೇಲೆ ಗಾಯಗಳು ಕಂಡು ಬಂದಿವೆ. ಹೀಗಾಗಿ ಪ್ರಾಥಮಿಕ ವರದಿ ಆಧಾರದಲ್ಲಿ ಇನ್ಸ್ಪೆಕ್ಟರ್ ಸಂದೇಶ್ ಮತ್ತು ಮೂವರು ಸಿಬ್ಬಂದಿ ಅಮಾನತು ಮಾಡಲಾಗಿದೆ. ಕಟೀಲು ದೇವಸ್ಥಾನದಲ್ಲಿದ್ದ ಕೆಲ ಅಂಗಡಿಗಳನ್ನ ಮಂಗಳೂರು ಎಸಿ ಮದನ್ ಖಾಲಿ ಮಾಡಿಸಿದ್ದರು‌.

ಹೀಗಿದ್ದರೂ ಕೂಡ ನಿಯಮ ಮೀರಿ ಕೆಲ ಅಂಗಡಿಗಳು ಕಾರ್ಯಾಚರಣೆ ಮಾಡ್ತಿದ್ದವು. ಅದರಲ್ಲಿ ಒಂದು ಅಂಗಡಿಗೆ ಮೂಡಬಿದ್ರೆ ಮೂಲದ ಒಬ್ಬ ವ್ಯಕ್ತಿ ಎಳನೀರು ಪೂರೈಸಿದ್ದ. ಆಗ ಅಲ್ಲಿದ್ದ ಯುವಕರು ಅಡ್ಡಿಪಡಿಸಿದ್ದಾಗಿ ಆ ವ್ಯಕ್ತಿ ಇನ್ಸ್ಪೆಕ್ಟರ್ ಸಂದೇಶ್ ಗೆ ಮಾಹಿತಿ ನೀಡ್ತಾರೆ. ಹೀಗಾಗಿ ಇನ್ಸ್ಪೆಕ್ಟರ್ ಇಬ್ಬರು ಯುವಕರನ್ನ ಕರೆದು ವಿಚಾರಿಸಿದ್ದಾರೆ. ಆಗ ಅವರು ಸರಿಯಾಗಿ ಉತ್ತರ ಕೊಡದ ಹಿನ್ನೆಲೆ ಪೋಲೀಸರು ಹೊಡೆದಿದ್ದಾರೆ.

ಇದು ಸದ್ಯ ನಮ್ಮ ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ. ನಮ್ಮ ಸಿಬ್ಬಂದಿ ಮತ್ತು ಅಧಿಕಾರಿ ಲೋಪದ ಹಿನ್ನೆಲೆ ಅಮಾನತು ಮಾಡಿದ್ದೇವೆ. ಎ.22ರಂದು ಈ ಘಟನೆ ಆಗಿದೆ, ಎಸಿಪಿ ಹಂತದ ಅಧಿಕಾರಿ ವಿಚಾರಣೆ ಮಾಡಿದ್ದಾರೆ. ಅವರ ಲೋಪ ಇದ್ದ ಹಿನ್ನೆಲೆ ಅಮಾನತು ಮಾಡಿದ್ದೇವೆ. ಎಳನೀರು ವ್ಯಾಪಾರಿ ಯಾವುದೇ ದೂರು ಕೊಟ್ಟಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಕ್ರಮ ಕೈಗೊಂಡಿದ್ದಾರೆ. ಠಾಣೆಗೆ ಕರೆದು ಹೊಡೆಯೋಕೆ ಅವಕಾಶ ಇಲ್ಲ, ಕಾನೂನು ಬಿಟ್ಟು ಕೆಲಸ ಮಾಡಿದ್ದಾರೆ. ದೂರು ನೀಡಿದ್ದರೆ ಎಫ್ ಐಆರ್ ದಾಖಲಿಸಿ ಬಂಧನ ಮಾಡಲಿ. ಅದು ಬಿಟ್ಟು ಪ್ರಕರಣ ದಾಖಲಿಸದೇ ಈ ರೀತಿ ಕ್ರಮ ಸರಿಯಲ್ಲ ಎಂದಿದ್ದಾರೆ.

Follow Us:
Download App:
  • android
  • ios