ಜಾವಾ ಬೈಕ್‌ಗೆ ಎದುರಾಯ್ತು ಮೊದಲ ಸಂಕಷ್ಟ!
ರಾಯಲ್ ಎನ್‌ಫೀಲ್ಡ್ ಸೇರಿದಂತೆ ಇತರ ಬೈಕ್‌ಗಳಿಗೆ ನಡುಕ ಹುಟ್ಟಿಸಿರುವ ಜಾವಾ ಮೋಟಾರ್ ಬೈಕ್ ಇದೀಗ ಸಂಕಷ್ಟದಲ್ಲಿದೆ. ಬಿಡುಗಡೆಯಾದ ಬಳಿಕ ನೆಮ್ಮದಿಯಿಂದಿದ್ದ ಜಾವಾಗೆ ಏಕಾಏಕಿ ಸಂಕಷ್ಟ ಎದುರಾಗಿದ್ದು ಹೇಗೆ? ಇಲ್ಲಿದೆ ವಿವರ.
ನವದೆಹಲಿ(ಏ.22): ಕಳೆದ ವರ್ಷ ನವೆಂಬರ್ 15 ರಂದು ಜಾವಾ ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆಯಾಗಿದೆ. ದಶಕಗಳ ಬಳಿಕ ಜಾವಾ ಅದೇ ರೆಟ್ರೋ ಲುಕ್‌ನೊಂದಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಿತು. ಬೈಕ್ ಪ್ರಿಯರ ಸಂತಸಕ್ಕೆ ಪಾರವೇ ಇರಲಿಲ್ಲ. ರಾಯಲ್ ಎನ್‌ಫೀಲ್ಡ್ ಸೇರಿದಂತೆ ಇತರ ಬೈಕ್‌ಗಳಿಗೆ ತೀವ್ರ ಹೊಡೆತ ನೀಡಿದ ಜಾವಾಗೆ ಇದೀಗ ಮೊದಲ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ಭಾರತ್ ಟ್ರೈಲರ್ ಬಿಡುಗಡೆ: ಟ್ರಿಯಂಪ್ ಬೊನ್ನೆವಿಲ್ಲಿ ಬೈಕ್‌ನಲ್ಲಿ ಸಲ್ಮಾನ್ ಸ್ಟಂಟ್!
ಜಾವಾ ಬಿಡುಗಡೆಗೂ ಮುನ್ನವೇ ಬುಕಿಂಗ್ ಆರಂಭಿಸಿತು. ಆದರೆ ಜಾವಾ ಗ್ರಾಹಕರ ಕೈ ಸೇರಲು ವಿಳಂಭವಾಗುತ್ತಿದೆ. ಇತ್ತ ಡೀಲರ್ ಬಳಿ ಉತ್ತರ ಸಿಗುತ್ತಿಲ್ಲ. ಕಳೆದ 5 ತಿಂಗಳಿಗಿಂತ ಹೆಚ್ಚು ಕಾಲ ಕಾಯುತ್ತಿರುವ ಗ್ರಾಹಕರಿಗೆ ಯಾವಾಗ ಬೈಕ್ ಕೈಸೇರುತ್ತೆ ಅನ್ನೋದು ಕೂಡ ತಿಳಿಯುತ್ತಿಲ್ಲ. ಅತ್ತ ಜಾವಾ ಸೇಲ್ಸ್ ಟೀಂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಅನ್ನೋ ಕಾರಣಕ್ಕೆ ಗ್ರಾಹಕರು ಜಾವಾ ಬೈಕ್ ವಿರುದ್ದ ತಿರುಗಿ ಬಿದಿದ್ದಾರೆ. ಹಲವು ಗ್ರಾಹಕರು ಜಾವಾ ಬೈಕ್ ಬಕಿಂಗ್ ರದ್ದು ಮಾಡಿದ್ದಾರೆ.
ಇದನ್ನೂ ಓದಿ: ಮತದಾನ ಮಾಡುವ ಗ್ರಾಹಕರಿಗೆ ಹೀರೋ ಮೋಟಾರ್‌ನಿಂದ ಭರ್ಜರಿ ಗಿಫ್ಟ್!
ಡೀಲರ್‌ಗಳಿಗೆ ಸರಿಯಾದ ಮಾಹಿತಿ ಕೊರತೆ ಅಥವಾ ಸ್ಪಂದನೆ ಕೊರತೆಯಿಂದ ಜಾವಾ ಬುಕಿಂಗ್ ರದ್ದು ಮಾಡುತ್ತಿದ್ದೇವೆ ಎಂದು ಗ್ರಾಹಕರು ಹೇಳಿಕೊಂಡಿದ್ದಾರೆ. ಜಾವಾ ಬೈಕ್‌ಗಾಗಿ ಕಾಯುಲು ಸಿದ್ದ ಆದರೆ ಜಾವಾ ತಂಡದ ಸ್ಪಂದನೆ ಸರಿಯಾಗಿಲ್ಲ ಎಂದು ಆರೋಪಿಸಿದ್ದಾರೆ. ಬಿಡುಗಡೆಯಾದ ಬಳಿಕ ಭಾರಿ ಬೇಡಿಕೆ ಸೃಷ್ಟಿಸಿದ್ದ ಜಾವಾಗೆ ಮೊದಲ ಸಂಕಷ್ಟ ಎದುರಾಗಿದೆ.