ರ‍್ಯಾಂಗ್ಲರ್ ಜೀಪ್ ಖರೀದಿಸುವವರಿಗೆ ಬಂಪರ್ ಆಫರ್ ಘೋಷಿಸಲಾಗಿದೆ. ಬರೋಬ್ಬರಿ 8.50 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಆಫರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಡಿ.11): ವರ್ಷಾಂತ್ಯದಲ್ಲಿ ಬಹುತೇಕ ಆಟೋಮೊಬೈಲ್ ಕಂಪೆನಿಗಳು ಸೇಲ್ ಕ್ಲೀಯರೆನ್ಸ್ ಮಾಡಲು ವಿಶೇಷ ಆಫರ್ ಘೋಷಿಸುತ್ತಿದೆ. ಇದೀಗ ಪ್ರಖ್ಯಾತ ರ‍್ಯಾಂಗ್ಲರ್ ಜೀಪ್ ಕೂಡ ಭರ್ಜರಿ ಡಿಸ್ಕೌಂಟ್ ನೀಡಿದೆ. ಈ ಮೂಲಕ ಗ್ರಾಹಕರನ್ನ ಆಕರ್ಷಿಸಲು ಮುಂದಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ

ಡಿಸೆಂಬರ್‌ನಲ್ಲಿ ರ‍್ಯಾಂಗ್ಲರ್ ಜೀಪ್ ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ 8.50 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ. ರ‍್ಯಾಂಗ್ಲರ್ ಜೀಪ್ 2017 ಮಾಡೆಲ್ ಖರೀದಿಸುವದಾದರೆ 8.50 ಲಕ್ಷ ರೂಪಾಯಿ, 2018ರ ಮಾಡೆಲ್ ಖರೀದಿಸುವಾದದರೆ 5 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ.

8.50 ಲಕ್ಷ ರೂಪಾಯಿ ಡಿಸ್ಕೌಂಟ್ ಇದೆ ಆದರೆ, ರ‍್ಯಾಂಗ್ಲರ್ ಜೀಪ್ ಟಾಪ್ ಮಾಡೆಲೆ ಬೆಲೆ 78.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ರ‍್ಯಾಂಗ್ಲರ್ ಜೀಪ್ ಆಫ್ ರೋಡ್ ಜೀಪ್ ಎಂದೇ ಹೆಸರುವಾಸಿಯಾಗಿದೆ.
