ಜಿನೆವಾ(ಮಾ.06): ದುಬಾರಿ ಹಾಗೂ ಐಷಾರಾಮಿ ಕಾರು ಎಂದೇ ಗುರುತಿಸಿಕೊಂಡಿರುವ ಬುಗಾಟಿ ಇದೀಗ ಹೊಸ ಕಾರನ್ನ ಅನಾವರಣ ಮಾಡಿದೆ. ಜಿನೆವಾ ಮೋಟಾರ್ ಶೋನಲ್ಲಿ ಬುಗಾಟಿ ಚಿರೋನ್ ಕಾರನ್ನ ಪರಿಚಯಿಸಿದೆ. ಇದು ವಿಶ್ವದ ಅತ್ಯಂತ ದುಬಾರಿ ಕಾರು ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ.

ಇದನ್ನೂ ಓದಿ:ಬುಲೆಟ್ ಪ್ರೂಫ್,ಬಾಂಬ್ ಪ್ರೊಟೆಕ್ಷನ್ - ರೇಂಜ್ ರೋವರ್ ಕಾರು ಬಿಡುಗಡೆಗೆ ರೆಡಿ!

ಬುಗಾಟಿ ಚಿರೋನ್ ಬ್ಲಾಕ್ ಕಾರು ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಹೀಗಾಗಿ ಈ ಕಾರಿನ ಬೆಲೆ ಬರೋಬ್ಬರಿ 118 ಕೋಟಿ ರೂಪಾಯಿ(ಆನ್ ರೋಡ್ ಬೆಲೆ). ಸಂಪೂರ್ಣ ಕಾರು ಕಾರ್ಬನ್ ಫೈಬರ್ ನಿರ್ಮಿತವಾಗಿದೆ. 

ಇದನ್ನೂ ಓದಿ: ಹ್ಯುಂಡೈ ಕ್ರೆಟಾ ಸದ್ದಡಗಿಸಲು ಬರುತ್ತಿದೆ ಟಾಟಾ ಬ್ಲಾಕ್‌ಬರ್ಡ್!

8.9 ಲೀಟರ್ ಕ್ವಾಡ್ ಟರ್ಬೋ ಚಾರ್ಜ್ W16 ಎಂಜಿನ್ 1,500 ps ಪವರ್ ಹಾಗೂ 1,600nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಈ ಕಾರಿನ ಗರಿಷ್ಠ ಸ್ಪೀಡ್ 420 KMPH. 0 to 100 kmph ತೆಗೆದುಕೊಳ್ಳುವ ಸಮಯ 2.5 ಸೆಕೆಂಡ್ ಮಾತ್ರ.