ಮುಂಬೈ(ಫೆ.27): ಭಾರತದ ಟಾಟಾ ಮೋಟಾರ್ಸ್ ಇದೀಗ ವಿದೇಶಿ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಈಗಾಗಲೇ ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಹ್ಯಾರಿಯರ್ ರಸ್ತೆಗಿಳಿಸಿ ಯಶಸ್ವಿಯಾಗಿರುವ ಟಾಟಾ, ಇದೀಗ ಹ್ಯುಂಡೈ ಕ್ರೆಟಾ SUV ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ SUV ಕಾರು ಬಿಡುಗಡೆ ಮಾಡಲಿದೆ. ಟಾಟಾ ಬ್ಲಾಕ್‌ಬರ್ಡ್ ಅನ್ನೋ ನೂತನ ಕಾರು ಹೆಚ್ಚುವರಿ ಫೀಚರ್ಸ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಕಡಿಮೆ ಬೆಲೆಗೆ  ಈ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಭಾರತದ ಮಿಲಿಟರಿ ಶಕ್ತಿಯಲ್ಲಿದೆ 4 ಅತ್ಯಾಧುನಿಕ ವಾಹನ!

ಟಾಟಾ ನೆಕ್ಸಾನ್ ಕಾರಿಗಿಂತ ದೊಡ್ಡದು ಹಾಗೂ ಹ್ಯಾರಿಗಿಂತ ಚಿಕ್ಕದಾದ ನೂತನ ಬ್ಲಾಕ್‌ಬರ್ಡ್ ಹೊಸ ಸಂಚಲನ ಮೂಡಿಸಲಿದೆ. ಕಾರಣ ಇದರ ಬೆಲೆ 6.5 ಲಕ್ಷ ರೂಪಾಯಿಂದ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಹ್ಯುಂಡೈ ಕ್ರೆಟಾಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆಯ SUV ಕಾರಾಗಿ ಹೊರಹೊಮ್ಮಲಿದೆ.