ಬೆಂಗಳೂರು(ಜು.20):  ಟ್ರಾಫಿಕ್ ನಿಯಮಗಳು ಕಟ್ಟು ನಿಟ್ಟಾಗಿದೆ. ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಫೋನ್ ಬಳಕೆ ಸೇರಿದಂತೆ ಯಾವುದೇ ನಿಯಮ ಉಲ್ಲಂಘನೆ ದಂಡ ಮೊತ್ತ 10 ಪಟ್ಟು ಹೆಚ್ಚಿಸಲಾಗಿದೆ. ವಾಹನ ಚಲಾಯಿಸುವಾಗ ಫೋನ್ ಬಳಕೆ ಕೂಡ ಸಂಪೂರ್ಣ ನಿಷೇಧಿಸಲಾಗಿದೆ. ಜುಲೈ 20,2019 ರಿಂದ ಹೊಸ ನಿಯಮ ಜಾರಿಯಾಗಿದೆ.  ಇಷ್ಟಾದರೂ ವಾಹನ ಚಲಾವಣೆ ಹಾಗೂ ಫೋನ್ ಬಳಕೆ ಕುರಿತು ಹಲವು ಗೊಂದಲಗಳು ಮನೆ ಮಾಡಿದೆ. ಏನೆಲ್ಲಾ ಮಾಡಿದರೆ ನಿಯಮ ಉಲ್ಲಂಘನೆಯಾಗಲಿದೆ ಅನ್ನೋ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ: ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ: ಯಾವುದಕ್ಕೆ ಎಷ್ಟು ದಂಡ..?

ಪೋನ್ ಬಳಕೆ: ಏನೆಲ್ಲಾ ಮಾಡಿದ್ರೆ ನಿಯಮ ಉಲ್ಲಂಘನೆ? ತಿಳಿದುಕೊಳ್ಳಿ, ಸೇಫ್ ಆಗಿರಿ

*ದ್ವಿ ಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ನಡಿ ಫೋನ್ ಇಟ್ಟುಕೊಳ್ಳಬಹುದೇ?
ಕರೆಯಲ್ಲಿದ್ದರೂ, ಇಲ್ಲದಿದ್ದರೂ ಹೆಲ್ಮೆಟ್ ನಡಿ ಫೋನ್ ಇಟ್ಟುಕೊಳ್ಳಬಾರದು

ಕಾರು ಅಥವಾ ಬೈಕ್ ಚಲಾಯಿಸುವಾಗ ಫೋನ್ ಇಯರ್ ಫೋನ್ ಬಳಸಬಹುದೇ?
ವಾಹನ ಚಲಾಯಿಸುವಾಗ ಇಯರ್ ಫೋನ್ ಧರಿಸಬಾರದು

*ಬ್ಲೂ ಟೂತ್ ಡಿವೈಸ್ ಧರಿಸಿ ಕರೆ ಸ್ವೀಕರಿಸಬಹುದೇ?
ಬ್ಲೂ ಟೂತ್ ಡಿವೈಸ್ ಧರಿಸುವುದು ಕೂಡಾ ತಪ್ಪು. ವಾಹನ ಚಲಾಯಿಸುವಾಗ ಯಾವುದೇ ಗ್ಯಾಜೆಟ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ.

*ಟ್ರಾಫಿಕ್ ಸಿಗ್ನಲ್ ನಲ್ಲಿ ಕಾಯುವಾಗ ಕರೆ ಸ್ವೀಕರಿಸಬಹುದೇ?
ಇಲ್ಲ, ಇದರಿಂದ ಇತರ ವಾಹನ ಚಾಲಕರಿಗೆ ಸಮಸ್ಯೆಯಾಗಬಹುದು.

*ಸಹ ಪ್ರಯಾಣಿಕ ಫೋನ್ ಸ್ಪೀಕರ್ ನಲ್ಲಿಟ್ಟು ಚಾಲಕನ ಕಿವಿ ಬಳಿ ಕೇಳುವಂತೆ ಹಿಡಿದುಕೊಳ್ಳಬಹುದೇ?
ವಾಹನ ಚಲಾಯಿಸುವಾಗ ಯಾವುದೇ ರೀತಿ ಫೋನ್ ಸಂಭಾಷಣೆ ನಡೆಸುವುದು ತಪ್ಪು. ಇದು ನಿಮ್ಮ ಏಕಾಗ್ರತೆಯನ್ನು ತಪ್ಪಿಸಿ, ಇತರರಿಗೆ ಮಾರಕವಾಗಬಹುದು. ಇದು ಕಾರು ಚಾಲಕರಿಗೂ ಅನ್ವಯಿಸುತ್ತದೆ.

*ಕಾರು ಚಲಾಯಿಸುತ್ತಿದ್ದಾಗ ಫೋನ್ ಬಳಸುತ್ತಿರಲಿಲ್ಲ ಎಂದು ವಾದಿಸಿದರೆ?
ಉತ್ತಮ ಗುಣಮಟ್ಟದ ಸಿಸಿಟಿವಿಯಲ್ಲಿ ದೃಶ್ಯಗಳು ದಾಖಲಾಗಿರುತ್ತದೆ. ಈ ಆಧಾರದಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಬಹುದು. 

*ಇಯರ್ ಫೋನ್ ಬಳಸಿ ಕೇವಲ ಹಾಡು ಕೇಳುತ್ತಿದ್ದರೆ?
ಇಯರ್ ಫೋನ್ ಬಳಸುವುದೇ ನಿಯಮ ಉಲ್ಲಂಘನೆ ಎಂದರೆ ಹಾಡು ಕೆಳುವ ಪ್ರಶ್ನೆಯೇ ಇಲ್ಲ.

ಫೋನ್ ನಲ್ಲಿ ಗೂಗಲ್ ಮ್ಯಾಪ್ ಬಳಸಬಹುದೇ?
ವಾಹನದಲ್ಲಿ ಫೋನ್ ಹೋಲ್ಟರ್ ನಲ್ಲಿ ಪೋನಿಟ್ಟು ಮ್ಯಾಪ್ ಬಳಸಿದರೆ ನಿಯಮ ಉಲ್ಲಂಘನೆಯಲ್ಲ. ಆದರೆ ಪೋನ್ ಕೈಯ್ಯಲ್ಲಿ ಹಿಡಿದು ಬಳಸುತ್ತಿದ್ದರೆ ನಿಯಮ ಉಲ್ಲಂಘಿಸಿದಂತೆ.

*ಬ್ಲೂ ಟೂತ್ ಸ್ಪೀಕರ್ ಗೆ ಫೋನ್ ಕನೆಕ್ಟ್ ಮಾಡಿ ಹಾಡು ಕೆಳುತ್ತಾ ಕಾರು ಚಲಾಯಿಸಬಹುದೇ?
ಕಾರು ಚಾಲಕ ಇತರರಿಗೆ ಸಮಸ್ಯೆಯಾಗದಂತೆ ಕಾರಿನಲ್ಲಿ ಹಾಡು ಕೆಳಿದರೆ ತಪ್ಪಲ್ಲ.

ಕ್ಯಾಬ್ ಹಾಗೂ ಟ್ಯಾಕ್ಟಿ ಡ್ರೈವರ್ಸ್ ಮಾರ್ಗಸೂಚಿಗಾಗಿ ಸ್ಮಾರ್ಟ್ ಫೋನ್ ಬಳಸಬಹುದೇ?
ಬಳಸಬಹುದು ಆದರೆ ಕಾರು ಚಾಲಕರಂತೆ ಇವರು ಕೂಡಾ ಮೊಬೈಲ್ ಹೋಲ್ಡರ್ ಬಳಸಲೇಬೇಕು

ಇದನ್ನೂ ಓದಿ: PRESS, POLICE ಯಾವುದೇ ಸ್ಟಿಕ್ಕರ್ ಹಾಕಿದ್ರೆ ವಾಹನ ಸೀಝ್!

ಮೋಟಾರು ವಾಹನ ತಿದ್ದುಪಡಿ ನಿಯದ ಪ್ರಕಾರ, ದಂಡ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದೆ. ಬದಲಾದ ದಂಡದ ಮೊತ್ತ ವಿವರ ಇಲ್ಲಿದೆ:

ಸ್ಪೀಡ್ ಮಿತಿ ಹೆಚ್ಚಾದರೆ: 1000 ರೂ. ದಂಡ
ರ‍್ಯಾಶ್ ಡ್ರೈವಿಂಗ್
    ಮೊದಲ ಬಾರಿ: 1000ರೂ. ದಂಡ
    2ನೇ ಬಾರಿಯಿಂದ: 2000ರೂ. ದಂಡ

ಡ್ರೈವಿಂಗ್ ವೇಳೆ ಮೊಬೈಲ್ ಪೋನ್ ಬಳಕೆ
    ಮೊದಲ ಬಾರಿ: 1000ರೂ. ದಂಡ
    2ನೇ ಬಾರಿಯಿಂದ: 2000ರೂ. ದಂಡ

ಇನ್ಸೂರೆನ್ಸ್ ಇಲ್ಲದೇ ಡ್ರೈವಿಂಗ್:
    1000 ರೂ ದಂಡ

ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿದರೆ
    1000 ರೂ. ದಂಡ