3 ಸೆಕೆಂಡ್ ನಿಯಮ; ಚಾಲಕರು ಪಾಲಿಸಲೇಬೇಕು ಈ ರೂಲ್ಸ್!

ನಿಯಮ ಬದಲಾಗುತ್ತಿದೆ. ಸಣ್ಣ ತಪ್ಪಿಗ  ಬಾರಿ ದಂಡ ತೆರಬೇಕಾಗುತ್ತೆ. ಹೀಗಾಗಿ ಹಲವು ಹೊಸ ನಿಯಮಗಳು, ಹಳೇ ನಿಯಮಗಳು ತಿದ್ದುಪಡಿಯಾಗಿ ಜಾರಿಯಾಗಿದೆ. ಇದರ ಜೊತೆಗೆ  3 ಸೆಕೆಂಡ್ ರೂಲ್ ಎಲ್ಲಾ ಚಾಲಕರು, ಸವಾರರು ಪಾಲಿಸದರೆ ಉತ್ತಮ. ಏನಿದು 3 ಸೆಕೆಂಡ್ ರೂಲ್? ಇಲ್ಲಿದೆ ವಿವರ. 

Unknown 3 second rule everyone rider or driver must fallow for safety

ಬೆಂಗಳೂರು(ಜು.20): ಮೋಟಾರು ವಾಹನ ಕಾಯ್ದೆ ತಿದ್ದುಪಡಿ, ಕಟ್ಟು ನಿಟ್ಟಿನ ಟ್ರಾಫಿಕ್ ನಿಯಮ, ದಂಡದ ಮೊತ್ತ ಹೆಚ್ಚಳ ಸೇರಿದಂತೆ ಹಲವು ಬದಲಾವಣೆ ರಸ್ತೆ ನಿಯಮ ಪಾಲನೆಗೆ ಸಹಕಾರಿಯಾಗಿದೆ. ಇದರ ಜೊತೆಗೆ  3 ಸೆಕೆಂಡ್ ರೂಲ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದು ಯಾವುದೇ ಕಾಯ್ದೆಯಲ್ಲಿ ಉಲ್ಲೇಖಿಸಿಲ್ಲ. ಆದರೆ ಸುರಕ್ಷತೆಯ ದೃಷ್ಟಿಯಿಂದ 3 ಸೆಕೆಂಡ್ ರೂಲ್ ಪಾಲಿಸಿದರೆ ಉತ್ತಮ.

ಇದನ್ನೂ ಓದಿ: ಪೋನ್ ಬಳಕೆ: ಏನೆಲ್ಲಾ ಮಾಡಿದ್ರೆ ನಿಯಮ ಉಲ್ಲಂಘನೆ? ತಿಳಿದುಕೊಳ್ಳಿ ರೂಲ್ಸ್!

ನಗರದ ಟ್ರಾಫಿಕ್ ರಸ್ತೆಗಳಲ್ಲಿ 3 ಸೆಕೆಂಡ್ ರೂಲ್ ಪಾಲಿಸುವುದು ಕಷ್ಟ. ಪಾಲಿಸಿದರೆ ಉತ್ತಮ. ಆದರೆ ಹೈವೇಗಳಲ್ಲಿ ಈ ನಿಯಮ ಪಾಲಿಸುವುದು ಸಹಕಾರಿಯಾಗಿದೆ. 

ಏನಿದು 3 ಸೆಕೆಂಡ್ ರೂಲ್:
ಸುರಕ್ಷತೆಯ ದೃಷ್ಠಿಯಿಂದ ರಸ್ತೆಗಳಲ್ಲಿ ವಾಹನಗಳ ನಡುವೆ ಕನಿಷ್ಠ 3 ಸೆಕೆಂಡ್‌ಗಳ ಅಂತರವಿರಬೇಕು.  ಮುಂದೆ ಇರೋ ವಾಹನ ಹಾಗೂ ಅದರ ಹಿಂದೆ ಚಲಿಸುತ್ತಿರುವ ವಾಹನ ನಡುವೆ ಕನಿಷ್ಠ 3 ಸೆಕೆಂಡ್ ಅಂತರವಿದ್ದರೆ, ಅಪಘಾತ ಹಾಗೂ ಇತರ ಅನಾಹುತಗಳಿಂದ ಮುಕ್ತವಾಗಬಹುದು.   ಮುಂಭಾಗದ ವಾಹನ ದಿಢೀರ್ ಬ್ರೇಕ್ ಹಾಕಿದಾಗ, ಅದಕ್ಕೆ ತಕ್ಕಂತೆ ಬ್ರೇಕ್ ಹಾಕಲು ಅವಕಾಶ ಹಾಗೂ ವಾಹನವನ್ನು ನಿಗದಿತ ಅಂತರದಲ್ಲಿ ನಿಲ್ಲಿಸಲು ಅವಕಾಶವಿರುತ್ತೆ. 

 

ಇದನ್ನೂ ಓದಿ:ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !

3 ಸೆಕೆಂಡ್ ರೂಲ್ ವಾಹನಗಳಿಗೆ ಹಾಗೂ ವೇಗಕ್ಕೆ ತಕ್ಕಂತೆ ಬದಲಾಗುತ್ತೆ. ಕಾರು,  ಜೀಪು ವಾಹನ ಗರಿಷ್ಠ 60-70 kmph ವೇಗದಲ್ಲಿದ್ದರೆ 3 ಸೆಕೆಂಡ್ ರೂಲ್ ಪ್ರಕಾರ ವಾಹನ ಚಲಾಯಿಸಿದರೆ ಉತ್ತಮ. ಆದರೆ 80ರ ವೇಗದಲ್ಲಿದ್ದರೆ, ಕನಿಷ್ಠ 5 ಸೆಕೆಂಡ್ ಅಂತರ ಕಾಯ್ದುಕೊಳ್ಳುವುದು ಉತ್ತಮ. ಇನ್ನು ಬಸ್, ಟ್ರಕ್ ವಾಹನಗಳು ಕನಿಷ್ಠ 5 ಅಥವಾ 7 ಸೆಕೆಂಡ್ ಅಂತರ ಕಾಯ್ದುಕೊಳ್ಳುವುದು ಉತ್ತಮ. 

Latest Videos
Follow Us:
Download App:
  • android
  • ios