ಪುದುಚೇರಿ(ಫೆ.14): ಬೈಕ್, ಸ್ಕೂಟರ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ನಿಯಮ ದೇಶದ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮವಿದೆ. ಆದರೆ ಹೆಲ್ಮೆಟ್ ಕಡ್ಡಾಯ ವಿರುದ್ಧ ಸ್ವತಃ ಮುಖ್ಯಮಂತ್ರಿಯೇ ಬೀದಿಗಳಿದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

ಇತ್ತೀಚೆಗಷ್ಟೇ ಪುದುಚೇರಿ ಗರ್ವನರ್ ಕಿರಣ್ ಬೇಡಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ತಂದಿದ್ದರು. ಬಳಿಕ ರಸ್ತೆಯಲ್ಲಿ ನಿಂತು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ಸವಾರರನ್ನ ನಿಲ್ಲಿಸಿ ಅವರಿಗೆ ತಿಳಿ ಹೇಳಿದ್ದರು. ಆದರೆ ಕಿರಣ ಬೇಡಿ ಆದೇಶವನ್ನ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ವಿರೋಧಿಸಿದ್ದಾರೆ.

 

 

ಇದನ್ನೂ ಓದಿ: ಪೊಲೀಸರಿಗೂ ಹೆಲ್ಮೆಟ್ ಕಡ್ಡಾಯ - ತಪ್ಪಿದರೆ ಹೆಚ್ಚುವರಿ ದಂಡ!

ಕಿರಣ ಬೇಡಿ ನಿವಾಸದ ಎದರು ನಾರಾಯಣಸ್ವಾಮಿ ಹಾಗೂ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹೆಲ್ಮೆಟ್ ರಸ್ತೆಗೆ ಬಿಸಾಡಿ ಪುಡಿ ಪುಡಿ ಮಾಡಿದ್ದಾರೆ. ಕಿರಣ ಬೇಡಿ ಪೊಲೀಸ್ ಪೇದಿ ರೀತಿ ವರ್ತಿಸುತ್ತಿದ್ದಾರೆ. ದಿಢೀರ್ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿ ಮಾಡುವುದು ಸರಿಯಲ್ಲ. ಹೆಲ್ಮೆಟ್ ಕಡ್ಡಾಯ ಹಂತ ಹಂತವಾಗಿ ಜಾರಿ ಮಾಡಬೇಕು. ಆದರೆ ಕಿರಣ ಬೇಡಿ ಏಕಾಏಕಿ ನಿಯಮ ಜಾರಿ ಮಾಡಿ ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ನಾರಾಯಣಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:  ಹೆಲ್ಮೆಟ್‌ಗೆ ಅಂತ್ಯಕ್ರಿಯೆ: ಪೊಲೀಸರ ವಿರುದ್ಧ ವಿನೂತನ ಪ್ರತಿಭಟನೆ!
ಮುಖ್ಯಮಂತ್ರಿ ನಾರಾಯಣಸ್ವಾಮಿ ವರ್ತನೆಯನ್ನ ಕಿರಣ್ ಬೇಡಿ ಖಂಡಿಸಿದ್ದಾರೆ. ಕಾನೂನು ಮಾಡುವವರೆ ಕಾನೂನು ಮುರಿಯುತ್ತಿದ್ದಾರೆ. ಇವರು ನಮ್ಮ ಜನಪ್ರತಿನಿಧಿಗಳು. ಹೆಲ್ಮೆಟ್ ಇಲ್ಲದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಕುರಿತು ಮುಖ್ಯಮಂತ್ರಿಗಳಿಗೆ ಯಾವುದೇ ಚಿಂತೆ ಇಲ್ಲ. ಮುಖ್ಯಮಂತ್ರಿ   ನ್ಯಾಯಂಗ ನಿಂದನೆ ಮಾಡುತ್ತಿದ್ದಾರೆ ಎಂದು ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ.