ನವದೆಹಲಿ(ಆ.09): ನಗರ ಪ್ರದೇಶಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಮಾಸ್ಕ್ ಧಾರಣೆ ಕಡ್ಡಾಯವಾಗಿದೆ. ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದೇನೆ, ಯಾರ ಸಂಪರ್ಕವೂ ಮಾಡುತ್ತಿಲ್ಲ, ಕಾರಿನಿಂದ ಇಳಿಯುತ್ತಿಲ್ಲ ಎಂದು ಸಬೂಬು ಹೇಳುವಂತಿಲ್ಲ. ಮಾಸ್ಕ್ ಧರಿಸದಿದ್ದರೆ ದಂಡ ಖಚಿತ. ಹೀಗೆ ಮಾಸ್ಕ್ ಧರಿಸಿದ ವಾಹನ ಚಾಲಕರಿಗೆ ದೆಹಲಿ ಪೊಲೀಸರು ದಂಡ ಹಾಕಿದ್ದಾರೆ.

ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕಾರು ಚಾಲಕರು, ಪ್ರಯಾಣಿಕರು ಎಲ್ಲರೂ ಮಾಸ್ಕ್ ಧರಿಸಲೇಬೇಕು. ಇದನ್ನು ದೆಹಲಿ ಪೊಲೀಸರು ಕಡ್ಡಾಯ ಮಾಡಿದ್ದಾರೆ. ಡ್ರೈವಿಂಗ್ ವೇಳೆ ಮಾಸ್ಕ್ ಧಾರಣೆ ಕುರಿತು ಕೆಲ ಗೊಂದಲಗಳನ್ನು ದೆಹಲಿ ಪೊಲೀಸರು ದೂರ ಮಾಡಿದ್ದಾರೆ. ಕಾರಿನಲ್ಲಿ ಒಬ್ಬರೆ ಪ್ರಯಾಣಿಸುತ್ತಿದ್ದರು ಮಾಸ್ಕ್ ಧರಿಸಲೇಬುಕು. ಇನ್ನು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಒಳಗೆ ಮಾಸ್ಕ್ ಹಾಕಿರಲೇಬೇಕು ಎಂದಿದ್ದಾರೆ.

ಎರಡು ಕೈ ಬಿಟ್ಟು ಸ್ಕೂಟರ್‌ನಲ್ಲಿ ಸಾಹಸ; ಸವಾರನಿಗೆ 48 ಸಾವಿರ ರೂ. ಫೈನ್!.

ಈ ನಿಯಮ ಉಲ್ಲಂಘಿಸಿದ ಹಲವರಿಗೆ ದೆಹಲಿ ಪೊಲೀಸರು ದಂಡ ವಿಧಿಸಿದ್ದಾರೆ.  ವಾಹನ ಸವಾರರು ಕೆಲವು ವೇಳೆ ದಾರಿಗಾಗಿ, ವಿಳಾಸಕ್ಕಾಗಿ ಇತರರನ್ನು ಮಾತನಾಡಿರುವ ಅನಿವಾರ್ಯತೆಗಳು ಎದುರಾಗುತ್ತದೆ. ತಾತ್ಕಾಲಿಕವಾಗಿ ದಾರಿಬಂದ್ ಆಗಿದ್ದರೆ, ಅಥವಾ ಇನ್ಯಾವುದೋ ಕಾರಣಕ್ಕೆ ಇತರರ ವಾಹನ ಸವಾರರ ಜೊತೆ ಅಥವಾ ಇನ್ಯಾರ ಜೊತೆಯಲ್ಲಾದರೂ ಮಾತನಾಡುವ ಅವಶ್ಯಕತೆ ಬರುತ್ತದೆ. ಈ ವೇಳೆ ಕೊರೋನಾ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಇದರಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ದೆಹಲಿ ಪೊಲೀಸರು ಖಡಕ್ ಆಗಿ ಹೇಳಿದ್ದಾರೆ.