ಇಟಲಿ(ಜೂ.15):  ಹೆದ್ದಾರಿಗಳಲ್ಲಿ ವೀಲಿಂಗ್, ಅತೀ ವೇಗದ ಚಾಲನೆ, ಹೆಲ್ಮೆಟ್ ರಹಿತ, ಸೀಟ್ ಬೆಲ್ಟ್ ಹಾಕದೇ ಡ್ರೈವಿಂಗ್ ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸುತ್ತಾರೆ. ರಸ್ತೆ ಸುರಕ್ಷತೆಗಾಗಿ ನೀಡಿರುವ ಸೂಚನೆಗಳನ್ನು ಗಾಳಿಗೆ ತೂರುವ ಕಾರಣ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದೀಗ ಇಟಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಸವಾರ ಬರೋಬ್ಬರಿ 127 ಕಿ.ಮೀ ವೇಗದಲ್ಲಿ ಚಲಿಸಿ, ಎರಡು ಕೈಗಳನ್ನು ಬಿಟ್ಟು ಸಾಹಸ ಪ್ರದರ್ಶಿಸಿದ್ದಾನೆ.

ತೆಪ್ಪಗಿರುವುದು ಬಿಟ್ಟು ಲಾಕ್‌ಡೌನ್ ವೇಳೆ ಓವರ್ ಸ್ವೀಡ್; 4.5 ಲಕ್ಷ ವಾಹನ ಮೇಲೆ ಫೈನ್

ಇಟಲಿಯಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಜನರು ಇನ್ನೂ ಓಡಾಟ ಆರಂಭಿಸಿಲ್ಲ. ಹೀಗಾಗಿ ಹೆದ್ದಾರಿಗಳು ಬಹುತೇಕ ಖಾಲಿ ಖಾಲಿ. ಈ ಸಂದರ್ಭದಲ್ಲಿ ಸ್ಕೂಟರ್ ಸವಾರ 127 ಕಿ.ಮೀ ವೇಗದಲ್ಲಿ ಸ್ಕೂಟರ್ ರೈಡ್ ಮಾಡಿದ್ದಾರೆ. ಇಷ್ಟೇ ಅಲ್ಲ ತನ್ನು ಎರಡೂ ಕೈಗಳನ್ನು ಹ್ಯಾಂಡಲ್‌ಬಾರ್‌ನಿಂದ ತೆಗೆದು ಹಕ್ಕಿಯಂತೆ ಹಾರಾಡುವ ಶೈಲಿಯಲ್ಲಿ ಚಲಿಸಿದ್ದಾನೆ.

ಸಿಂಘಂ ಸಿನಿಮಾ ಸೀನ್ ಮರುಸೃಷ್ಟಿ ಮಾಡಿದ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಬಿತ್ತು ಬರೆ!..

ಅಪಾಯಕಾರಿ ಸಾಹಸ ಹೆದ್ದಾರಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ದೃಶ್ಯ ಆಧರಿಸಿ ಪೊಲೀಸಲು ಈತನಿಗೆ 560 ಯುರೋ ದಂಡ ಹಾಕಿದ್ದಾರೆ. ಭಾರತೀಯ ರೂಪಾಯಿಗಳಲ್ಲಿ ಇದರ ಮೌಲ್ಯ 48,000 ರೂಪಾಯಿ. ಇಷ್ಟೇ ಅಲ್ಲ ಅಪಾಯಕಾರಿ ಸಾಹಸ ಮಾಡಿದ ಬೈಕ್ ಸವಾರನ ಲೈಲೆನ್ಸ್ ರದ್ದು ಮಾಡಲಾಗಿದೆ. 

ಸವಾರ ಸಾಹಸ ಆರಂಭಿಸಿದ ಪಾದಾಚಾರಿಗಳು ಸಾಗುವ ದಾರಿಯನ್ನು ಸಾಗಿದ್ದಾನೆ. ಆದರೆ ಈತನ ಸಾಹಸಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.