ವಾಹನ ಮಾಡಿಫಿಕೇಶನ್ ನಿಯಮ: ಪ್ರತಿಭಟನೆ ಮಾಡಿದ 15 ಯುವಕರು ಅರೆಸ್ಟ್!

ವಾಹನ ಮಾಡಿಫಿಕೇಶನ್ ನಿಯಮ ವಿರುದ್ಧ ಪ್ರತಿಭಟನೆ ಮಾಡಿದ ಯುವಕರನ್ನು ಅರೆಸ್ಟ್ ಮಾಡಲಾಗಿದೆ. ಅಷ್ಟಕ್ಕೂ ಈ ಯುವಕರು ಸುಪ್ರೀಂ ಕೋರ್ಟ್ ನಿಯಮದ ವಿರುದ್ಧ ಪ್ರತಿಭಟನೆ ಮಾಡಿದ್ದೇಕೆ? ಇಲ್ಲಿದೆ ವಿವರ
 

Vehicle modification Kerala Police arrest 15 youth in kochi

ಕೊಚ್ಚಿ(ಏ.09): ವಾಹನ ಮಾಡಿಫಿಕೇಶನ್ ಮಾಡಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಹೆಡ್ ಲೈಟ್ ಬದಲಾವಣೆ, ಶೈಲಿ ಬದಲಾವಣೆ, ಅಲೋಯ್ ವೀಲ್ಹ್, ಶೇಪ್ ಸೇರಿದಂತೆ ವಾಹನವನ್ನು ಮಾಡಿಫಿಕೇಶನ್ ಮಾಡಿಸಿಸಿದರೆ ಈಗ ನಿಯಮ ಉಲ್ಲಂಘಿಸಿದಂತೆ. ಕೇರಳದಲ್ಲಿ ಅತೀ ಹೆಚ್ಚು ಜನರು ವಾಹನವನ್ನು ಮಾಡಿಫಿಕೇಶನ್ ಮಾಡಿಸುತ್ತಾರೆ. ಈಗಾಗಲೇ ಪೊಲೀಸರು 65ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ವಿರುದ್ದ ಯುವಕರ ಗುಂಪು ಪ್ರತಿಭಟನೆ ನಡೆಸಿದೆ.

ಇದನ್ನೂ ಓದಿ: ರಾಂಗ್ ಸೈಡ್ ಡ್ರೈವ್- 35,760 ರೂ ಫೈನ್, ತಪ್ಪೇ ಮಾಡಲ್ಲ ಬಿಟ್ಟು ಬಿಡಿ ಎಂದ ಮಾಲೀಕ

ಕೊಚ್ಚಿಯಲ್ಲಿ ಯುವಕರ ಗುಂಪೊಂದು  ಮಾಡಿಫಿಕೇಶನ್ ನಿಯಮ ಹಾಗೂ ಕೇರಳ ಪೋಲೀಸರ ವಿರುದ್ದ ಪ್ರತಿಭಟನೆ ಮಾಡಿದೆ. ಪ್ರತಿಭಟನೆ ಕಾವು ಏರುತ್ತಿದಂತೆ ಪೊಲೀಸರು 15ಕ್ಕೂ ಹೆಚ್ಚು ಯುವಕರನ್ನು ಬಂಧಿಸಿದ್ದಾರೆ. ಬಳಿಕ ಬೇಲ್ ಮೂಲಕ ಬಿಡುಗಡೆಗೊಳಿಸಲಾಗಿದೆ.

ಇದನ್ನೂ ಓದಿ: ಬೈಕ್, ಪೆಟ್ರೋಲ್ ನಂದು, ಬಿದ್ರೆ ಸಾಯೋದು ನಾನು- ಹಿಡಿಯೋಕೆ ನೀವ್ಯಾರು?

ಯುವಕರ ಗುಂಪು ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಈ ಮೂಲಕ ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಟ್ರಾಫಿಕ್ ಜಾಮ್  ಸೇರಿದಂತೆ ಇತರ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ  IPC ಸೆಕ್ಷನ್ 279 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios