ಬೈಕ್, ಪೆಟ್ರೋಲ್ ನಂದು, ಬಿದ್ರೆ ಸಾಯೋದು ನಾನು- ಹಿಡಿಯೋಕೆ ನೀವ್ಯಾರು?
ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ಬೈಕ್ ಸವಾರನನ್ನು ಹಿಡಿದ ಪೊಲೀಸರನ್ನೇ ತಬ್ಬಿಬ್ಬು ಮಾಡಿದ ಘಟನೆ ನಡಿದೆದೆ. ಈತನ ಒಂದೊಂದು ಪ್ರಶ್ನೆಗೂ ಸಾಮಾಜಿಕ ಜಾಲತಾಣದಲ್ಲಿ ಫುಲ್ ಮಾರ್ಕ್ಸ್ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವೀಡಿಯೋ ಇಲ್ಲಿದೆ ನೋಡಿ.
ಬೆಂಗಳೂರು(ಏ.08): ನಿಯಮ ಉಲ್ಲಂಘನೆ ಕಾರಣದಿಂದ ಪೊಲೀಸರು ಬೈಕ್ ಅಥವಾ ವಾಹನ ಸವಾರರನ್ನು ಅಡ್ಡಗಟ್ಟವು ಕುರಿತು ಪರ ವಿರೋಧಗಳಿವೆ. ಕೆಲವೊಮ್ಮೆ ಸವಾರರು ಅತೀರೇಕದಿಂದ ವರ್ತಿಸಿದರೆ, ಕೆಲವು ಭಾರಿ ಪೊಲೀಸರ ವರ್ತನೆ ಭಾರಿ ಸುದ್ದಿಯಾಗಿದೆ. ಇದೀಗ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ ಬೈಕ್ ಸವಾರನನ್ನು ಹಿಡಿದ ಪೊಲೀಸರನ್ನೇ ಸವಾರ ತಬ್ಬಿಬ್ಬು ಮಾಡಿದ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗೆ ಬ್ರೇಕ್ - 170 ಸ್ಕೂಟರ್ ವಶಕ್ಕೆ!
ಚಿಕ್ಕಬಳ್ಳಾಪುರದ ಮುಖ್ಯರಸ್ತೆ ಹಾರೊಂಡೆ ಬಳಿ ಪೊಲೀಸರು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ಬೈಕ್ ಸವಾರರನ್ನು ನಿಲ್ಲಿಸಿದ್ದಾರೆ. ಬಳಿಕ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ ರೊಚ್ಚಿಗೆದ್ದ ಸವಾರ, ಬೈಕ್ ನಂದು, ಪೆಟ್ರೋಲ್ ನಂದು, ಬಿದ್ರೆ ಸಾಯೋದು ನಾನು. ಹೆಲ್ಮೆಟ್ ಹಾಕಿಲ್ಲ ಅಂತಾ ಹಿಡಿಯೋಕೆ ನೀವ್ಯಾರು ಎಂದು ಪೊಲೀಸರ ಮೆಲರಗಿದ್ದಾನೆ.
ಇದನ್ನೂ ಓದಿ: ಜಾವಾ- ಜಾವಾ 42 ಬೈಕ್ ಮೈಲೇಜ್ ಬಹಿರಂಗ!
ಇನ್ಶುರೆನ್ಸ್ ಕಟ್ಟಿರೋ ಬೈಕ್ ಬಿದ್ದ ತಕ್ಷಣ ಎದ್ದು ನಿಲ್ಲುತ್ತಾ? 8 ವರ್ಷದಿಂದ ನಾನು ಬೈಕ್‌ನಲ್ಲಿ ಓಡಾಡುತ್ತಿದ್ದೇನೆ. ನನಗೇನಾದರು ಆದರೆ ನನ್ನ ಕುಟುಂಬಕ್ಕೆ ನಷ್ಟ. ನಿಮಗೇನು? ನೀವ್ಯಾಕೆ ನನ್ನ ಹಿಡೀತೀರಿ ಎಂದು ಕೂಗಾಡಿದ್ದಾನೆ. ಆರಂಭದಲ್ಲಿ ಸಮಾಧಾನದಿಂದಲೇ ಉತ್ತರಿಸಿದ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಹೀಗಾಗಿ ಈತನನ್ನು ಪೊಲೀಸರು ವಶಕ್ಕೆ ಪಡೆದರು.
"
ಬೈಕ್, ಸ್ಕೂಟರ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಹಾಕಲೇ ಬೇಕು. ಇಷ್ಟೇ ಅಲ್ಲ ರಸ್ತೆ ನಿಯಮ ಪಾಲನೆ ಮಾಡಲೇಬೇಕು ಇದು ಎಲ್ಲರ ಸುರಕ್ಷತೆಗಾಗಿ. ಇದಕ್ಕೆ ಪೊಲೀಸರ ವಿರುದ್ಧ ಕೂಗಾಡುವುದು ಸೂಕ್ತವಲ್ಲ. ಇನ್ನು ಸರ್ಕಾರ ಸೂಕ್ತ ರಸ್ತೆಗಳನ್ನ ನಿರ್ಮಿಸಬೇಕು. ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಸವಾರರು, ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಬೇಕು. ಇತ್ತ ಪೊಲೀಸರು ಕೂಡ ಅಷ್ಟೇ ಸಂಯಮದಿಂದ ವರ್ತಿಸುವುದು ಅಗತ್ಯ.