ಜೀನ್ಸ್ ಧರಿಸಿದ ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್‌ಗೆ ಅವಕಾಶವಿಲ್ಲ!
ಮಹಿಳೆಯರಿಗೆ ಸ್ಯಾರಿ, ಸೆಲ್ವಾರ್‌ಗಿಂತ ಜೀನ್ಸ್ ಧರಿಸಿ ಸ್ಕೂಟರ್, ಬೈಕ್ ಚಲಾಯಿಸುವುದು ಸುಲಭ. ಆದರೆ ಜೀನ್ಸ್ ಅಥವಾ ಪ್ಯಾಂಟ್ ಹಾಕಿದರೆ ಡ್ರೈವಿಂಗ್ ಟೆಸ್ಟ್‌ಗೆ ಅವಕಾಶವಿಲ್ಲ ಅನ್ನೋ ಹೊಸ ನಿಯಮ ಲೈಸೆನ್ಸ್ ಪಡೆಯಲು ಬಂದವರಲ್ಲಿ ಮಾತ್ರವಲ್ಲ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚೆನ್ನೈ(ಅ.23): ಮಹಿಳೆಯರ ಡ್ರೆಸ್ ಕೂಡ್ ಕುರಿತು ಹಲವು ಬಾರಿ ಚರ್ಚೆಯಾಗಿದೆ. ಅಷ್ಟೇ ವಿವಾದಕ್ಕೂ ಕಾರಣವಾಗಿದೆ. ಇದೀಗ ಡ್ರೈವಿಂಗ್ ಲೈಸೆನ್ಸ್‌ಗಾಗಿ ಟೆಸ್ಟ್ ನಡೆಸುವಲ್ಲಿ RTO ಆಫೀಸರ್ ಜಾರಿ ಮಾಡಿರುವ ಹೊಸ ನಿಯಮ ಟೆಸ್ಟ್‌ಗೆ ಬಂದ ಮಹಿಳೆಯರಿಗೆ ಶಾಕ್ ನೀಡಿದೆ. ಜೀನ್ಸ್ ಹಾಕಿ ಬಂದ ಹುಡುಗಿಯರಿಗೆ ಡ್ರೈವಿಂಗ್ ಟೆಸ್ಟ್ ನೀಡಲು ಅವಕಾಶವೇ ಮಾಡಿಕೊಟ್ಟಿಲ್ಲ.
ಇದನ್ನೂ ಓದಿ: ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!
ಈ ಹೊಸ ನಿಯಮ ಜಾರಿಯಾಗಿರುವುದು ಚೆನ್ನೈ ಕೆಕೆ ನಗರ RTO ವ್ಯಾಪ್ತಿಯಲ್ಲಿ. ಮಹಿಳೆಯರು, ಹುಡುಗಿಯರು ಜೀನ್ಸ್ ಅಥವಾ ಲೆಗ್ಗೀನ್ಸ್ ಹಾಕಿದರೆ ಡ್ರೈವಿಂಗ್ ಟೆಸ್ಟ್‌ಗೆ ಅವಕಾಶವಿಲ್ಲ ಎಂದಿದ್ದಾರೆ. ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಚೆನ್ನೈನ ಟೆಕ್ಕಿ ಪವಿತ್ರ ಎಂಬುವವರು ಡ್ರೈವಿಂಗ್ ಟೆಸ್ಟ್‌ಗೆ ತೆರಳಿದಾ ಕೆಕೆ ನಗರ RTO ಇನ್ಸ್‌ಪೆಕ್ಟರ್ ಮಾತು ಅಚ್ಚರಿ ತಂದಿತ್ತು.
ಇದನ್ನೂ ಓದಿ: 1.5 ಲಕ್ಷ ಟ್ರಾಫಿಕ್ ಚಲನ್ ರದ್ದು; ವಾಹನ ಸವಾರರು ನಿರಾಳ!
ಜೀನ್ಸ್ ಹಾಗೂ ಟೀ ಶರ್ಟ್‌ನಲ್ಲಿ ತೆರಳಿದ್ದ ಪವಿತ್ರ ವಾದ ಮಾಡಲು ಹೋಗಿಲ್ಲ. ಕಾರಣ ಪವಿತ್ರಾಗೆ ಲೈಸೆನ್ಸ್ ಅನಿವಾರ್ಯವಾಗಿತ್ತು. ವಾದ ಮಾಡಿದರೆ ಡ್ರೈವಿಂಗ್ ಪರೀಕ್ಷೆಯಲ್ಲಿ ಫೈಲ್ ಮಾಡಿದರೆ ನನ್ನ ಗತಿಯೇನು ಎಂದು ಪವಿತ್ರ ತಕ್ಷಣವೇ ಮನೆಗೆ ಹಿಂತಿರುಗಿ ಸೆಲ್ವಾರ್ ಹಾಕಿ ಡ್ರೈವಿಂಗ್ ಟೆಸ್ಟ್ ನೀಡಿದ್ದಾರೆ.
ಕೆಕೆ ನಗರ ಕಾಲೇಜು ವಿದ್ಯಾರ್ಥಿನಿಗೂ ಇದೇ ಪರಿಸ್ಥಿತಿ ಎದುರಾಗಿದೆ. ನಿಯಮದ ಪ್ರಕಾರ ಲೈಸೆನ್ಸ್ ಪರೀಕ್ಷೆಗೆ 18 ವಯಸ್ಸು ತುಂಬಿರಬೇಕು. ಟ್ರಾಫಿಕ್ ನಿಯಮದ ಕುರಿತು ಅರಿವಿರಬೇಕು. ಆದರೆ ಡ್ರೆಸ್ ಕೂಡ ಉಲ್ಲೇಖವಿಲ್ಲ. ಅಲಿಖಿತ ನಿಯಮದ ವಿರುದ್ಧ ಕೆಕೆ ನಗರ RTO ವ್ಯಾಪ್ತಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.