ಬೆಂಗಳೂರು(ಡಿ.31): ಭಾರತದಲ್ಲಿ ಬೈಕ್ ದಾಖಲೆಯ ಮಾರಾಟ ಕಾಣುತ್ತಿದೆ.  ಹೀಗಾಗಿ ಇದೀಗ ವಿದೇಶಿ ಬೈಕ್‌ಗಳು, 350 ಸಿಸಿಗಿಂತ ಹೆಚ್ಚಿನ ಎಂಜಿನ್ ಬೈಕ್‌ಗಳು ಭಾರತದಲ್ಲಿ ಜನರನ್ನ ಮೋಡಿ ಮಾಡುತ್ತಿದೆ. 2018ರಲ್ಲಿ ಹಲವು ಬೈಕ್‌ಗಳು ಹೊಸ ಮೈಲಿಗಲ್ಲು ನಿರ್ಮಿಸಿದೆ. ಇದೀಗ 2019ರ ಹೊಸ ವರ್ಷದಲ್ಲಿ ಮತ್ತಷ್ಟು ಕ್ಲಾಸಿಕ್ ಬೈಕ್‌ಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಸುಜುಕಿ ಜಿಕ್ಸರ್ 250 ಸಿಸಿ ಬೈಕ್ ಬಿಡುಗಡೆ !

ರಾಯಲ್ ಎನ್‌ಫೀಲ್ಡ್ ಸ್ಕ್ರಾಂಬ್ಲರ್ 500
ರಾಯಲ್ ಎನ್‌ಫೀಲ್ಡ್ 2019ರಲ್ಲಿ ಸ್ಕ್ರಾಂಬ್ಲರ್ 500 ಬೈಕ್ ಬಿಡುಗಡೆ ಮಾಡುತ್ತಿದೆ. ಸ್ಪೋರ್ಟ್ ಟೈಯರ್, ಸೋಲೋ ಸೀಟ್, ಡ್ಯುಯೆಲ್ ಚಾನೆಲ್ ABS ಹಾಗೂ ಹಲವು ವಿಶಿಷ್ಠಗಳೊಂದಿಗೆ ಸ್ಕ್ರಾಂಬ್ಲರ್ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಸ್ಟಾರ್ಟ್ ಮಾಡಬೇಡಿ-ಯಾಕೆ?

ಜಾವಾ ಪೆರಾಕ್
2018ರಲ್ಲಿ ಹೆಚ್ಚು ಸದ್ದು ಮಾಡಿದ ಬೈಕ್ ಜಾವಾ. ಭಾರತದ ಮಾರುಕಟ್ಟೆಯಲ್ಲಿ ಮತ್ತೆ ಮೋಡಿ ಮಾಡುತ್ತಿರುವು ಜಾವಾ ಈಗಾಗಲೇ 2 ಬೈಕ್‌ಗಳನ್ನ ಬಿಡುಗಡೆ ಮಾಡಿದೆ. ಇದೀಗ ಜಾವ ಪೆರಾಕ್ 2019ರಲ್ಲಿ ಬಿಡುಗಡೆಯಾಗಲಿದೆ. ಬಾಬರ್ ಸ್ಟೈಲ್ ನಲ್ಲಿ ಬಿಡುಗಡೆಯಾಗಲಿರುವ ಜಾವಾ ಪೆರಾಕ್ ಸಾಕಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ರೆಡ್ಡಿಚ್ ABS ಬೈಕ್ ಬಿಡುಗಡೆ!

ಟ್ರಿಂಪ್ ಸ್ಟ್ರೀಟ್ ಟ್ವಿನ್
ಭಾರತಕ್ಕೆ ಕಾಲಿಟ್ಟಿರುವ ಟ್ರಿಂಪ್ ಕಂಪೆನಿ 2019ರಲ್ಲಿ ನೂತನ ಎರಡು ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ. ಟ್ರಿಂಪ್ ಸ್ಟ್ರೀಟ್ ಟ್ವಿನ್, ಹಾಗೂ ಟ್ರಿಂಪ್ ಸ್ಟ್ರೀಟ್ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ ಮಾಡುತ್ತಿದೆ. ಆಫ್ ರೋಡ್ ಬೈಕ್ ಎಂದೇ ಗುರಿತಿಸಿಕೊಂಡಿರುವ ಈ ಎರಡೂ ಬೈಕ್‌ಗಳೂ ಭಾರತದ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳೋ ವಿಶ್ವಾಸದಲ್ಲಿದೆ.