ರಾಯಲ್ ಎನ್‌ಫೀಲ್ಡ್ ರೆಡ್ಡಿಚ್ ABS ಬೈಕ್ ಬಿಡುಗಡೆ!

ರಾಯಲ್ ಎನ್‌ಫೀಲ್ಡ್ ನೂತನ ಬೈಕ್ ಬಿಡುಗಡೆ ಮಾಡಿದೆ. ರೆಡ್ಡಿಚ್ ಎಡಿಶನ್ ಬೈಕ್ ABS ತಂತ್ರಜ್ಞಾನದೊಂದಿಗೆ ಮಾರುಕಟ್ಟೆ  ಪ್ರವೇಶಿಸಿದೆ. ಇದರ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇಲ್ಲಿದೆ ವಿವರ.
 

Royal Enfield classic 350 reddich ABS edition bike launched

ನವದೆಹಲಿ(ಡಿ.27): ರಾಯಲ್ ಎನ್‌ಫೀಲ್ಡ್ ನೂತನ ಬೈಕ್ ಬಿಡುಗಡೆ ಮಾಡಿದೆ.  ABS ತಂತ್ರಜ್ಞಾನ ಅಳವಡಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ರೆಡ್ಡಿಚ್ ಎಡಿಶನ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಇದು  ABS ರಹಿತ ರಾಯಲ್ ಎನ್‌ಫೀಲ್ಡ್ ಬೈಕ್‌ಗಿಂತ 6,000 ರೂಪಾಯಿ ಹೆಚ್ಚುವರಿಯಾಗಿದೆ.

Royal Enfield classic 350 reddich ABS edition bike launched

ಇದನ್ನೂ ಓದಿ: 2019ರ ಸುಜುಕಿ ಹಯಬುಸಾ ಸೂಪರ್ ಬೈಕ್ ಬಿಡುಗಡೆ- ಬೆಲೆ 13.74 ಲಕ್ಷ!

ರೆಡ್ಡಿಚ್ ಕ್ಲಾಸಿಕ್ 350 ಬೈಕ್ ಬೆಲೆ 1.53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ರೆಡ್ಡಿಚ್ ಎಡಿಶನ್ ಬೈಕ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಕೆಂಪು, ನೀಲಿ ಹಾಗೂ ಹಸಿರು ಬಣ್ಣದಲ್ಲಿ ಬೈಕ್ ಲಭ್ಯವಿದೆ. 1939ರಲ್ಲಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಬೇಬಿ ಪ್ರೋಟೋಟೈಪ್ ಮಾಡೆಲ್‌ನಿಂದ ಸ್ಪೂರ್ತಿ ಪಡೆದು ಈ ಬೈಕ್ ನಿರ್ಮಿಸಲಾಗಿದೆ. 

Royal Enfield classic 350 reddich ABS edition bike launched

ಇದನ್ನೂ ಓದಿ: ರಾಜಧಾನಿಯಲ್ಲಿ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್!

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಬೈಕ್‌ಗೆ ಪೈಪೋಟಿ ನೀಡಲು ನೂತನ ಬೈಕ್ ಬಿಡುಗಡೆ ಮಾಡಿದೆ. ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೇಂದ್ರ ಸರ್ಕಾರದ ನೂತನ ನಿಯಮದ ಪ್ರಕಾರ ಎಪ್ರಿಲ್ 2019ರೊಳಗೆ 125 ಸಿಸಿಗಿಂತ ಹೆಚ್ಚಿನ ಎಲ್ಲಾ ಬೈಕ್‌ಗಳು ಸುರಕ್ಷತಾ ಕ್ರಮವಾಗಿ ABS ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ರಾಯಲ್ ಎನ್‌ಫೀಲ್ಡ್ 2018ರ ಅಂತ್ಯದಲ್ಲಿ ABS ತಂತ್ರಜ್ಞಾನದ ರೆಡ್ಡಿಚ್ ಬೈಕ್ ಬಿಡುಗಡೆ ಮಾಡಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios