ಸುಜುಕಿ ಸಂಸ್ಥೆ ನೂತನ ಜಿಕ್ಸರ್ 250 ಸಿಸಿ ಬೈಕ್ ಬಿಡುಗಡೆ ಮಾಡಲಿದೆ. ಹಲವು ವಿಶೇಷತೆಗಳೊಂದಿಗೆ ನೂತನ ಬೈಕ್  ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 

ನವದೆಹಲಿ(ಡಿ.30): ಸುಜುಕಿ ಸಂಸ್ಥೆಯ ಜಿಕ್ಸರ್ 150 ಬೈಕ್ ಮಾರಾಟದಲ್ಲಿ ದಾಖಲೆ ಬರೆದಿತ್ತು. ಇದೀಗ ಜಿಕ್ಸ್ 250 ಸಿಸಿ ಬೈಕ್ ಬಿಡುಗಡೆ ಮಾಡಲು ಸುಜುಕಿ ಮುಂದಾಗಿದೆ. ಸ್ಪೋರ್ಟ್ ಬೈಕ್ 2019ರ ಆರಂಭದಲ್ಲೇ ಬಿಡುಗಡೆಯಾಗಲಿದೆ. ಕೆಲ ಬದಲಾವಣೆಯೊಂದಿಗೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: 2019ರಲ್ಲಿ ಹ್ಯುಂಡೈ ಕ್ರೆಟಾಗೆ ತೀವ್ರ ಪೈಪೋಟಿ- ಬಿಡುಗಡೆಯಾಗಲಿದೆ 4 ಕಾರು!

ಸುಜುಕಿ ಜಿಕ್ಸರ್ 250 ಬೈಕ್, GSX-S750 ಹಾಗೂ GSX-S1000 ಬೈಕ್ ವಿನ್ಯಾಸದಲ್ಲಿ ರಸ್ತೆಗಿಳಿಯಲಿದೆ. ಎಲ್ಇಡಿ ಹೆಡ್ ಹಾಗೂ ಟೈಲ್ಸ್ ಲ್ಯಾಂಪ್ಸ್, ಡಿಜಿಟಲ್ ಡಿಸ್‌ಪ್ಲೇ, ಸ್ಲಿಟ್ ಸೀಟ್ ಹಾಗೂ ಕಂಫರ್ಟ್ ರೈಡ್ ನೂತನ ಬೈಕ್ ವಿಶೇಷತೆ.

ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!

ಹೆಚ್ಚು ಬಲಿಷ್ಠ ಎಂಜಿನ್ ಹೊಂದಿರುವ ನೂತನ ಬೈಕ್ ಡುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್) ಹೊಂದಿದೆ. ನೂತನ ಸುಜುಕಿ ಬೈಕ್ ಯಮಾಹ , ಬಜಾಜ್, ಹೊಂಡಾ CBR250R ಸೇರಿದಂತೆ 250 ಸೆಗ್ಮೆಂಟ್ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ. 22-25 bhp ಪವರ್, 6 ಸ್ಪೀಡ್ ಹೊಂದಿರುವ ನೂತನ ಬೈಕ್ ಬೆಲೆ 1.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.