ಬೆಂಗಳೂರು(ನ.01): ಬಹುನಿರೀಕ್ಷಿತ ಜಾವಾ ಮೋಟರ್ ಬೈಕ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ನವೆಂಬರ್ 15 ರಂದು ಜಾವಾ ಮೋಟಾರ್ ಬೈಕ್ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಜಾವಾ ರೋಡ್ ಬೈಕ್ ಟೆಸ್ಟ್ ನಡೆಸಿದೆ.

300 ಸಿಸಿ ಎಂಜಿನ್ ಜಾವಾ ಬೈಕ್ ರೋಡ್ ಟೆಸ್ಟ್‌ನಲ್ಲಿ ಪಾಸ್ ಆಗಿದೆ. ಎಲ್ಲಾ ಮಾದರಿ ರೋಡ್ ಟೆಸ್ಟ್‌ನಲ್ಲಿ ಅತ್ಯುತ್ತಮ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಇದೀಗ ರಾಯಲ್ ಎನ್‌ಫೀಲ್ಡ್ ಸೇರಿದಂತೆ ಇತರ ಬೈಕ್‌ಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.

80ರ ದಶಕದಲ್ಲಿ ಭಾರತದಲ್ಲಿ ಜಾವಾ ಮೋಟಾರ್ ಬೈಕ್ ಮೋಡಿ ಮಾಡಿತ್ತು. ಬಳಿಕ ಜಾವಾ ಭಾರತದಲ್ಲಿ ಕಣ್ಮರೆಯಾಗಿತ್ತು. ಯಾವಾಗ ಮಹೀಂದ್ರ ಮೋಟಾರ್ಸ್ ಜಾವಾ ಬೈಕ್ ನಿರ್ಮಾಣಹ ಹಕ್ಕನ್ನು ಪಡೆಯಿತೋ ಅಲ್ಲಿಂದ ಭಾರತೀಯರ ಕಾಯುವಿಕೆ ಆರಂಭಗೊಂಡಿತು.

ನವೆಂಬರ್ 15 ರಂದು ಜಾವಾ ಬೈಕ್ ಅನಾವರಣಗೊಳ್ಳಲಿದೆ. ಈ ಕುರಿತು ಕಂಪೆನಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿತ್ತು. ಇದೀಗ ಟೆಸ್ಟಿಂಗ್ ಕೂಡ ಬಹುತೇಕ ಮುಕ್ತಾಯಗೊಂಡಿದೆ. ಇದೀಗ ಜಾವಾ ಮೋಟಾರ್ ಬೈಕ್‌ ಅನಾವರಣಕ್ಕೆ ಬೈಕ್ ಪ್ರಿಯರು ಕಾಯುತ್ತಿದ್ದಾರೆ.