Asianet Suvarna News

ಆಧುನಿಕ ತಂತ್ರಜ್ಞಾನದೊಂದಿಗೆ TVS ಅಪಾಚೆ ಬೈಕ್ ಬಿಡುಗಡೆ!

ಟಿವಿಎಸ್ ಮೋಟಾರ್ ನೂತನ ಅಪಾಚೆ RTR ಬೈಕ್ ಬಿಡುಗಡೆ ಮಾಡಿದೆ. BS6 ಎಂಜಿನ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

TVS Motor  launches  TVS Apache RTR 200 4V and  RTR 160 4V BS-VI motorcycles
Author
Bengaluru, First Published Nov 27, 2019, 11:28 AM IST
  • Facebook
  • Twitter
  • Whatsapp

ಚೆನ್ನೈ(ನ.27): ಭಾರತದ ಅತೀ ದೊಡ್ಡ ಮೋಟಾರ್ ಕಂಪನಿ TVS ಇದೀಗ 2020ರ ಅಪಾಚೆ ಬೈಕ್ ಲಾಂಚ್ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ BS-VI ಎಂಜಿನ್ ಅಪ್‌ಗ್ರೇಡ್‌ನೊಂದಿಗೆ TVS ಅಪಾಚೆ  RTR 200 4V ಹಾಗೂ  TVS ಅಪಾಚೆ  RTR  160 4V ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಟಿವಿಎಸ್ ಮೋಟಾರ್ ಕಂಪನಿಯ ಮೊದಲ BS-VI ಎಂಜಿನ್ ವಾಹನ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇದನ್ನೂ ಓದಿ: ಮಧ್ಯಮ ವರ್ಗದ ಡಾರ್ಲಿಂಗ್‌ ಟಿವಿಎಸ್‌ ರೇಡಿಯೋನ್‌!

ನೂತನ ಅಪಾಚೆ RTR ಬೈಕ್ ಆಕರ್ಷಕ ಗ್ರಾಫಿಕ್ಸ್ ಹಾಗೂ ಕ್ಲಾ ಸ್ಟೈಲ್ LED ಹೆಡ್‌ಲ್ಯಾಂಪ್ಸ್ ಹೊಂದಿದೆ. ನೂತನ LED ಬೆಳಕಿನ ಮೂಲಕ ರಾತ್ರಿಯಲ್ಲೂ ಸ್ಪಷ್ಟತೆ ಸಿಗಲಿದೆ. ವಿಶೇಷ ಅಂದರೆ ಈ ಬೈಕ್ ರೇಸ್ ಟ್ಯೂನ್ ಫ್ಯೂಯೆಲ್ ಇಂಜೆಕ್ಟ್ RT-Fi ಟೆಕ್ನಾಲಜಿ ಹೊಂದಿದೆ. ಈ ತಂತ್ರಜ್ಞಾನದಿಂದ ಬೈಕ್ ಎಂಜಿನ್ ರೇಸ್ ಅನುಭವ ನೀಡಲಿದೆ.

ಇದನ್ನೂ ಓದಿ: ಇನ್ಮುಂದೆ ಎಥೆನಾಲ್ ಬೈಕ್; ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ಗುಡ್‌ಬೈ!

TVS ಅಪಾಚೆ RTR 200 4V ಬೈಕ್, 197.75cc ಸಿಂಗಲ್ ಸಿಲಿಂಡಡರ್, 4 ಸ್ಟ್ರೋಕ್, 4 ವೇಲ್ವ್, ಆಯಿಲ್ ಕೂಲ್ಡ್ ಎಂಜಿನ್ ಮೋಟಾರ್ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಬೈಕ್, 20.5 PS ಪವರ್(@ 8500 RPM) UEIT  16.8 Nm ಪೀಕ್ ಟಾರ್ಕ್(@7500 RPM) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ TVS Nಟಾರ್ಕ್ 125 ಸ್ಕೂಟರ್ ಬಿಡುಗಡೆ!

TVS ಅಪಾಚೆ RTR 160 4V ಬೈಕ್ 159.7 cc, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, 4 ವೇಲ್ವ್, ಆಯಿಲ್ ಕೂಲ್ಡ್ ಎಂಜಿನ್  ಹೊಂದಿದೆ. 16.02 PS ಪವರ್( @8250 RPM) ಹಾಗೂ 14.12 Nm ಪೀಕ್ ಟಾರ್ಕ್(@ 7250 RPM) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆ ಲಭ್ಯವಿದೆ.

ನೂತನ ಅಪಾಚೆ ಬೈಕ್ ಬೆಲೆ ವಿವರ(ಎಕ್ಸ್  ಶೋ ರೂಂ ದೆಹಲಿ)
TVS ಅಪಾಚೆ RTR 200 4V - DC – Rs.  124,000
TVS ಅಪಾಚೆ RTR 160 4V (disc) – Rs. 103,000
TVS ಅಪಾಚೆ RTR 160 4V (drum) – Rs. 99,950

Follow Us:
Download App:
  • android
  • ios