ಇನ್ಮುಂದೆ ಎಥೆನಾಲ್ ಬೈಕ್; ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ಗುಡ್‌ಬೈ!
ಎಥೆನಾಲ್ ಚಾಲಿತ TVS ಅಪಾಚೆ RTR 200 Fi E100 ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಕ್ಕೆ ಪರ್ಯಾಯವಾಗಿ ಹಾಗೂ ಪರಿಸರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಚೆನ್ನೈ(ಜು.13): ಮಾಲಿನ್ಯ ನಿಯಂತ್ರಣ, ಇಂಧನ ಆಮದು ಪ್ರಮಾಣ ಕಡಿಮೆ ಮಾಡಲು ಭಾರತ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಿದೆ. ಇದೀಗ ಪರಿಸರಕ್ಕೆ ಪೂರಕವಾದ ಎಥೆನಾಲ್ ಚಾಲಿತ ಬೈಕ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. TVS ಕಂಪನಿಯ ಜನಪ್ರಿಯ ಅಪಾಚೆ RTR 200 Fi E100 ಬೈಕ್ ಮಾರುಕಟ್ಟೆ ಪ್ರವೇಶಿಸಿದೆ.
ಇದನ್ನೂ ಓದಿ: 2025ರ ಬಳಿಕ ದೇಶದಲ್ಲಿ ವಿದ್ಯುತ್ ಚಾಲಿತ ಬೈಕ್ ಮಾತ್ರ ಮಾರಾಟ?
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ TVS ಅಪಾಚೆ RTR 200 Fi E100 ಎಥೆನಾಲ್ ಬೈಕ್ ಬಿಡುಗಡೆ ಮಾಡಿದರು. ಇದು ಭಾರತದ ಮೊತ್ತ ಮೊದಲ ಎಥೆನಾಲ್ ಚಾಲಿತ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಬೈಕ್ ಬೆಲೆ 1.2 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸದ್ಯ TVS ಅಪಾಚೆ RTR 200 Fi E100 ಎಥೆನಾಲ್ ಬೈಕ್ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಲಭ್ಯವಿದೆ.
ಇದನ್ನೂ ಓದಿ: ಆಗಸ್ಟ್ ಆರಂಭದಲ್ಲೇ ಬಜಾಜ್ ಪಲ್ಸಾರ್ 125NS ಬಿಡುಗಡೆ!
ಬೈಕ್ ಬಿಡುಗಡೆ ಮಾಡಿ ಮಾತನಾಡಿದ ನಿತಿನ್ ಗಡ್ಕರಿ, ಎಥೆನಾಲ್ ಪಂಪ್‌ಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಭಾರತದ ಪ್ರಮುಖ ನಗರಗಲ್ಲಿ ಎಥೆನಾಲ್ ಪಂಪ್ ಕಾರ್ಯ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯ ಇಂಧನ ಬಳಕೆಯಿಂದ ಪ್ರತಿ ವರ್ಷ 7 ಲಕ್ಷ ರೂಪಾಯಿ ಇಂಧನ ಆಮದು ತಪ್ಪಿಸಬಹುದು ಎಂದಿದ್ದಾರೆ.