Asianet Suvarna News Asianet Suvarna News

BS6 ಎಂಜಿನ್, ET-Fi ತಂತ್ರಜ್ಞಾನದ ನೂತನ TVS ಜೆಸ್ಟ್ 110 ಸ್ಕೂಟರ್ ಬಿಡುಗಡೆ!

ಆಧುನಿಕ ತಂತ್ರಜ್ಞಾನ, ಇಂಧನ ಕ್ಷಮತೆ, ಆರಾಮದಾಯಕ ಪ್ರಯಾಣ ಹಾಗೂ ಕೈಗೆಟುಕುವ ದರದಲ್ಲಿ TVS ಮೋಟಾರ್ ನೂತನ ಜೆಸ್ಟ್ 110 ಸ್ಕೂಟರ್ ಬಿಡುಗಡೆ ಮಾಡಿದೆ. ಹಿಮಾಲಯ, ಕರ್ದುಂಗ್ ಲಾ ಪರ್ವತ ಶ್ರೇಣಿ ಏರಿದ ಮೊದಲ 110 ಸಿಸಿ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಜೆಸ್ಟ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

TVS motor corp introduce Zest 110cc  ET-Fi technology scooter
Author
Bengaluru, First Published Jul 23, 2020, 5:52 PM IST

ಬೆಂಗಳೂರು(ಜು.23): ಜನಪ್ರಿಯ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದಕ ಸಂಸ್ಥೆಯಾಗಿರುವ TVS ಮೋಟಾರ್ ಕಂಪನಿ  ಇಂದು ಬಿ.ಎಸ್-6 ಮಾದರಿಯ TVS ಜೆಸ್ಟ್ 110 ವಾಹವನ್ನು ಮಾರುಕಟ್ಟೆಗೆ ಪರಿಚಯಿಸಿತು. ನೂತನ ಮಾದರಿಯು ET-Fi(ಎಕೊಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್) ತಂತ್ರಜ್ಞಾನ ಸೌಲಭ್ಯವನ್ನು ಒಳಗೊಂಡಿದೆ.

ಹೆಚ್ಚು ಮೈಲೇಜ್, ಕೈಗೆಟುಕವ ಬೆಲೆಯೊಂದಿಗೆ BS6 ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ!

ET-Fi (ಎಕೊಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್) ತಂತ್ರಜ್ಞಾನ ಸೌಲಭ್ಯವು ಬಿ.ಎಸ್-6 TVS ಜೆಸ್ಟ್ 110 ಸ್ಕೂಟರ್  ಸಮಸ್ಯೆ ರಹಿತ ನಿರ್ವಹಣೆ ಹಾಗೂ ಅನುಕೂಲಕರ ಪ್ರಯಾಣವನ್ನು ನೋಡಿಕೊಳ್ಳಲಿದೆ. ಗ್ರಾಹಕರಿಗೆ ಅತ್ಯುತ್ತಮ ಇಂಧನ ಕ್ಷಮತೆ ಮತ್ತು ಸಾಮಥ್ರ್ಯವನ್ನು ನೀಡಲಿದೆ. ET-Fi (ಎಕೊಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್) ತಂತ್ರಜ್ಞಾನ ಸೌಲಭ್ಯವು ಒಟ್ಟಾರೆಯಾಗಿ ವಾಹನದ ಸಾಮಥ್ರ್ಯವನ್ನು ವೃದ್ಧಿಸಲಿದ್ದು, ಆರಾಮದಾಯಕ ಚಾಲನೆ, ಇಂಧನ ಮಿತವ್ಯಯಿಯೂ ಆಗಿರಲಿದೆ.

COVID-19 ಸಂಕಷ್ಟ; ಪಿಎಂ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ TVS!

ಟಿ.ವಿ.ಎಸ್ ಜೆಸ್ಟ್ 110 ವಾಹನವು ಕರ್ದುಂಗ್ ಲಾ ಪರ್ವಶ ಶ್ರೇಣಿ ಏರಿದ ಮೊದಲ 110 ಸಿ.ಸಿ ಸಾಮಥ್ರ್ಯದ ಸ್ಕೂಟರ್ ಆಗಿದೆ. ಹಿಮಾಲಯ ಏರಿದ್ದ ಈ ವಾಹನವು ಆಕರ್ಷಕ ವಿನ್ಯಾಸವನ್ನು ಒಳಗೊಂಡಿದೆ. ಈ ವರ್ಗದ ವಾಹನದಲ್ಲೇ ಇದು ಅತ್ಯುತ್ತಮದ್ದಾಗಿದೆ. ಸ್ಕೂಟರ್ ಅನ್ನು ಅತ್ಯುತ್ತಮ ಎನ್ನಲಾದ ಸೀಟ್ ಕೆಳಗಿನ 19 ಲೀಟರ್ ಸಾಮಥ್ರ್ಯದ ಸ್ಟೋರೇಜ್ ಸೌಲಭ್ಯ, LED ಹಿಂಬದಿ ಲ್ಯಾಂಪ್, ಫ್ರಂಟ್ DRL ಮತ್ತು ಟ್ವಿಲೈಟ್ ಲ್ಯಾಂಪ್ ಒಳಗೊಂಡಿದೆ.

ಸ್ಕೂಟರ್‌ನಲ್ಲಿ ದೃಢವಾದ ಬಾಳಿಕೆ ಬರುವ ಟ್ಯೂಬ್‍ರಹಿತ ಟೈಯರ್ ಇದ್ದು, ಅತ್ಯುತ್ತಮ ಗ್ರಿಪ್ ನೀಡಲಿದೆ. ET-Fi ತಂತ್ರಜ್ಞಾನ ಒಳಗೊಂಡ ಎಂಜಿನ್ ಒಟ್ಟಾರೆ ಪ್ರಯಾಣದ ಅನುಭವವನ್ನು ಉತ್ತಮಪಡಿಸಲಿದೆ. BS-6 TVS ಜೆಸ್ಟ್ 110 ವಾಹನವು 110 ಸಿಸಿ ಸಾಮಥ್ರ್ಯದ ಎಂಜಿನ್ ಅನ್ನು ಒಳಗೊಂಡಿದೆ. 5.75 KW ಸಾಮಥ್ರ್ಯ, 8.8 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ವಿಶಾಲವಾದ ಸೀಟು ಸುಲಭವಾದ ನಿರ್ವಹಣೆಗೆ ಪೂರಕವಾಗಿದ್ದು, ಸೆಂಟರ್ ಸ್ಟ್ಯಾಂಡ್ ಅನ್ನು ಚಾಲಕನಿಗೆ ಅತ್ಯುತ್ತಮ ಆರಾಮದಾಯಕ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಸ್ಕೂಟರ್‌ನಲ್ಲಿ ಮುಂಬದಿ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಹಾಗೂ ಹೈಡ್ರಾಲಿಕ್ ಹಿಂಬದಿಯಲ್ಲಿ ಮೊನೊ ಶಾಕ್ ಅಳವಡಿಸಲಾಗಿದೆ.

ಬಿಎಸ್-6 TVS ಜೆಸ್ಟ್ 110 ವಾಹನದ ದರ ರೂ. 58,460 (ಎಕ್ಸ್ ಶೋ ರೂಂ, ಚೆನ್ನೈ) ಆಗಿದ್ದು, ಎರಡು ಮಾದರಿ ಅಂದರೆ ಹಿಮಾಲಯನ್ ಹೈ ಸೀರೀಸ್ ಮತ್ತು ಮ್ಯಾಟೆ ಸೀರೀಸ್ ನಲ್ಲಿ ಲಭ್ಯವಿದೆ. ಸ್ಕೂಟರ್ ಆರು ವರ್ಣಗಳಲ್ಲಿ ಲಭ್ಯವಿದೆ. ಅವುಗಳು: ರೆಡ್, ಬ್ಲೂ, ಪರ್ಪಲ್, ಬ್ಲ್ಯಾಕ್, ಯೆಲ್ಲೊ ಮತ್ತು ಟಾಕ್ರ್ಯಾಸ್ ಬ್ಲೂ.

Follow Us:
Download App:
  • android
  • ios