ಬೆಂಗಳೂರು ಪೊಲೀಸ್ ಇಲಾಖೆ ಸೇರಿದ 25 ಹೊಚ್ಚ ಹೊಸ TVS ಅಪಾಚೆ ಬೈಕ್!
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನ ಬಲಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಗೆ ಈಗಾಗಲೇ ಹೀರೋ ಗ್ಲಾಮರ್ ಬೈಕ್ ನೀಡಿದ ಸರ್ಕಾರ, ಇದೀಗ ಬೆಂಗಳೂರು ಪೊಲೀಸರಿಗೆ ಟಿವಿಎಸ್ ಅಪಾಚೆ 160 ಬೈಕ್ ನೀಡಿದೆ.
ಬೆಂಗಳೂರು(ನ.12): ಬೆಂಗಳೂರು ಪೊಲೀಸ್ ಇಲಾಖೆಗೆ ಹೊಚ್ಚ ಹೊಸ 25 ಟಿವಿಎಸ್ ಅಪಾಚೆ 160 ಬೈಕ್ ಆಗಮಿಸಿದೆ. ನಗರ ಪೊಲೀಸರ ಕೈ ಬಲಪಡಿಸಲು ಮುಂದಾಗಿರುವ ಸರ್ಕಾರ ಇದೀಗ 25 ಬೈಕ್ ಇಲಾಖೆಗೆ ನೀಡಿದೆ.
ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?..
ಟಿವಿಎಸ್ ಮೋಟಾರ್ ಸಂಸ್ಥೆಯ (ಮಾರ್ಕೆಟಿಂಗ್) ಪ್ರೀಮಿಯಂ ಮೋಟರ್ ಸೈಕಲ್ಸ್, ಮುಖ್ಯಸ್ಥ ಮೇಘಶ್ಯಾಮ್ ದಿಘೋಲೆ, 25 ಟಿವಿಎಸ್ ಅಪಾಚೆ RTR 160 ಮೋಟಾರ್‌ಸೈಕಲ್‌ನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು. ಕರ್ನಾಟಕ ಸೃಹ ಸಚಿವ ಬಸವರಾಜ್ ಬೊಮ್ಮಾಯಿ, ಬೆಂಗಳೂರು ನಗರ ಪೊಲೀಸ್ ಅಯುಕ್ತ ಕಮಲ್ ಪಂತ್ ಉಪಸ್ಥಿತರಿದ್ದರು.
ಹಬ್ಬದ ಕೊಡುಗೆ: TVS Nಟಾರ್ಕ್ 125 ಸೂಪರ್ ಸ್ಕ್ವಾಡ್ ಎಡಿಶನ್ ಸ್ಕೂಟರ್ ಲಾಂಚ್!.
ನೂತನ ಬೈಕ್ ಅಪಾಚೆ RTR 160 ಬೈಕ್ 159.7cc ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್, 5 ಸ್ಪೀಡ್ ಟ್ರಾನ್ಸ್‌ಮಿಶನ್ ಹೊಂದಿದೆ. 16 hp ಪವರ್ ಹಾಗೂ 14 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಆರಂಭಿಕ ಬೆಲೆ 99,950 ರೂಪಾಯಿ.