Asianet Suvarna News Asianet Suvarna News

ಹೆಚ್ಚು ಮೈಲೇಜ್, ಕೈಗೆಟುಕವ ಬೆಲೆಯೊಂದಿಗೆ BS6 ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬಿಡುಗಡೆಯಾಗಬೇಕಿದ್ದ ಹಲವು ವಾಹನಗಳು ಅನಿವಾರ್ಯ ಕಾರಣದಿಂದ ಮುಂದೂಡಲ್ಪಟ್ಟಿವೆ. ಇದರ ನಡುವೆ ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ಬೆಲೆ, ವಿಶೇಷತೆ ಇಲ್ಲಿದೆ. 

TVS launch bs6 Radeon bike in India
Author
Bengaluru, First Published Apr 11, 2020, 9:09 PM IST

ನವದೆಹಲಿ(ಏ.11): ಸುಪ್ರೀಂ ಕೋರ್ಟ್ ಆದೇಶದಂತೆ ಏಪ್ರಿಲ್ 1, 2020ರಿಂದ ನೂತನ ವಾಹನಗಳೆಲ್ಲಾ bs6 ಎಮಿಶನ್ ಎಂಜಿನ್ ಹೊಂದಿರಬೇಕು. ಹೀಗಾಗಿ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು bs6 ಎಂಜಿನ್‌ಗಳಾಗಿ ಪರಿವರ್ತಿಸಿದೆ. ಇನ್ನು ಪರಿವರ್ತಿಸಲು ಸಾಧ್ಯವಾಗದೆ ವಾಹನಗಳನ್ನು ಕಂಪನಿಯೇ ಸ್ಥಗತಿಗೊಳಿಸಿದೆ. ಇದೀಗ ಟಿವಿಎಸ್ ತನ್ನ ಜನಪ್ರಿಯಾ ರೆಡಿಯಾನ್ ಬೈಕ್   bs6 ಎಂಜಿನ್ ಬಿಡುಗಡೆಯಾಗಿದೆ. 

ಯೇ ದೋಸ್ತಿ ಹಮ್ ನಹೀ ತೋಡೆಂಗೆ; ಮತ್ತೆ ಬರುತ್ತಿದೆ ಹಳೇ ಜಮಾನದ ಸೈಡ್‌ಕಾರ್ ಮೋಟರ್‌ಸೈಕಲ್!..

ನೂತನ ಬೈಕ್ ಬೆಲೆ 58,992 ರೂಪಾಯಿಂದ(ಎಕ್ಸ್ ಶೋ ರೂಂ ಆರಂಭವಾಗಲಿದ್ದು, ಗರಿಷ್ಠ ಬೆಲೆ 64,992 ರೂಪಾಯಿ(ಎಕ್ಸ ಶೋ ರೂಂ) .    bs4 ಬೈಕ್‌ಗಿಂತ ನೂತನ ಬೈಕ್ ಬೆಲೆ 8,600 ರೂಪಾಯಿ ಹೆಚ್ಚಳವಾಗಿದೆ. 109.7 cc ಸಿಂಗಲ್ ಸಿಲಿಂಡರ್ , ಏರ್ ಕೂಲ್ಡ್ ಎಂಜಿನ್ ಹೊಂದಿರುವ ನೂತನ ಬೈಕ್  8.08 bhp ಪವರ್ ಹಾಗೂ 8.7 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಬುಕ್ ಮಾಡಿದ ಹತ್ತೇ ದಿನದಲ್ಲಿ ಕೈಸೇರಲಿದೆ ಜಾವಾ; ಫುಲ್ ಖುಷ್ ಹುವಾ!.

4 ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಟಿವಿಎಸ್ ರೆಡಿಯಾನ್ ಬೈಕ್ ಹಳೇ ಬೈಕ್‌ಗಿಂತ ಶೇಕಡಾ 15ರಷ್ಟು ಹೆಚ್ಚು ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ನೂತನ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 63.3 ಕಿಲೋಮೀಟರ್ ಮೈಲೇಜ್ ನೀಡಲಿದೆ.  10 ಲೀಟರ್ ಇಂಧನ್ ಸಾಮರ್ಥ್ಯ ಹೊಂದಿರುವ ಟ್ಯಾಂಕ್ ಹೊಂದಿದೆ. 

Follow Us:
Download App:
  • android
  • ios