Asianet Suvarna News Asianet Suvarna News

TVS ಅಪಾಚೆ RR 310 ಹಾಗೂ RTR 2004V ಬೈಕ್ ಜೊತೆ ಗ್ರಾಹಕರಿಗಾಗಿ ಆ್ಯಪ್ ಬಿಡುಗಡೆ!

ಟಿವಿಎಸ್ ಅಪಾಚೆ ಆರ್‍ಆರ್310 ಮತ್ತು ಟಿವಿಎಸ್ ಅಪಾಚೆ ಆರ್‍ಟಿಆರ್ 200 4ಗಿ ಮೋಟರ್‍ಸೈಕಲ್ ಗಳ ಬಿಡುಗಡೆ ಯೊಂದಿಗೆ ಆ್ಯಪ್ ಅನಾವರಣ ಮಾಡಲಾಗಿದೆ.   ಹೊಸ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಗ್ರಾಹಕರಿಗೆ ವಿಭಿನ್ನವಾದ ಅನುಭವವನ್ನು ನೀಡಲು ಆಗುಮೆಂಟೆಡ್ ರಿಯಾಲಿಟಿ

TVS Motor Company unveils ARIVE App for customers ckm
Author
Bengaluru, First Published Nov 27, 2020, 6:25 PM IST

ಹೊಸೂರ್(ನ.27): TVS ಮೋಟರ್ ಕಂಪನಿ, ವಿಶ್ವದಲ್ಲಿಯೇ ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾಗಿದ್ದು, ಇಂದು ತನ್ನ ವಿನೂತನ ಮೊಬೈಲ್ ಅಪ್ಲಿಕೇಷನ್ A.R.I.V.E  ಅನಾವರಣಗೊಳಿಸಿತು. ದ್ವಿಚಕ್ರ ವಾಹನ ಕುರಿತು ಮಾಹಿತಿ ಪಡೆಯುವಲ್ಲಿ ಈ ಅಪ್ಲಿಕೇಷನ್ ಗ್ರಾಹಕರಿಗೆ ಹೊಸತನದ ಅನುಭವವನ್ನು ನೀಡಲಿದೆ.

ಬೆಂಗಳೂರು ಪೊಲೀಸ್ ಇಲಾಖೆ ಸೇರಿದ 25 ಹೊಚ್ಚ ಹೊಸ TVS ಅಪಾಚೆ ಬೈಕ್!.

ಆಗ್‍ಮೆಂಟೆಡ್  ರಿಯಾಲಿಟಿ ಇಂಟರ್‍ಆ್ಯಕ್ಟಿವ್ ವೆಹಿಕಲ್ ಎಕ್ಸ್‍ಪಿರಿಯನ್ಸ್ (A.R.I.V.E ) ಹೆಸರಿನ ಈ ಆ್ಯಪ್ ಗ್ರಾಹಕರಿಗೆ ಉತ್ಪನ್ನ ಕುರಿತಂತೆ ಆಳವಾದ ವಿವರಗಳನ್ನು ನೀಡಲಿದ್ದು, ಎ.ಆರ್. ಟೆಕ್ನಾಲಜಿಯ ಮೂಲಕ ಗ್ರಾಹಕರಿಗೆ ಸಮಗ್ರವಾದ ವಿವರ ತಲುಪಲಿದೆ. ಈ ವಲಯದಲ್ಲಿಯೇ ಪ್ರಥಮ ಎನ್ನಲಾದ ಈ ಆ್ಯಪ್ ಗ್ರಾಹರಿಗೆ ವಿಭಿನ್ನವಾದ ಅನುಭವ ನೀಡಲಿದ್ದು, ಅಲ್ಲದೆ, ವಿಶೇಷ ವೇದಿಕೆಯ ಮೂಲಕ ಗ್ರಾಹಕರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುವ ಅವಕಾಶವನ್ನು ಕಲ್ಪಿಸಲಿದೆ.

TVS ಅಪಾಚೆ RTR 200 4V ಬೈಕ್ ಬಿಡುಗಡೆ!.

ನೂತನ ಟಿ.ವಿ.ಎಸ್A.R.I.V.E  ಆ್ಯಪ್ ಜೊತೆಯಲ್ಲಿಯೇ ಕಂಪನಿಯ ಮುಂಚೂಣಿ ಮಾಡೆಲ್ ಆಗಿರುವ ಟಿವಿಎಸ್ ಅಪಾಚೆ RR 310 ಮತ್ತು TVS ಅಪಾಚೆ RTR 200 4V ಬಿಡುಗಡೆ ಮಾಡಿದ್ದು, ತಂತ್ರಜ್ಞಾನದ ಕುರಿತು ಒಲವಿರುವ ಗ್ರಾಹಕರ ಅಗತ್ಯಗಳನ್ನು ಈಡೇರಿಸಲಿದೆ. ನಂತರದ ದಿನಗಳಲ್ಲಿ ಆ್ಯಪ್‍ನಲ್ಲಿ ಎಲ್ಲ ಉತ್ಪನ್ನಗಳು ಸೇರ್ಪಡೆಯಾಗಲಿವೆ. ಈ ಆ್ಯಪ್‍ನಲ್ಲಿ ಪ್ರತಿ ಉತ್ಪನ್ನಕ್ಕೂ ಪ್ರತ್ಯೇಕ ವಿವರಣಾ ಮಾದರಿ ಇದೆ. ಇವುಗಳನ್ನು ಗ್ರಾಹಕರು ತಮ್ಮ ಆಸಕ್ತಿಗೆ ಅನುಗುಣವಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶವಿದೆ.

ಪ್ರತಿಯೊಂದು ಮಾದರಿಯು ಮತ್ತೆ ಮೂರು ವಿಭಿನ್ನ ಮಾದರಿಗಳನ್ನು ಪ್ರತ್ಯೇಕವಾಗಲಿದೆ. ಅಂದರೆ, ಪ್ಲೇಸ್ ಟು ಎಕ್ಸ್‍ಪ್ಲೋರ್ (ಎ.ಆರ್. ಆಧಾರಿತ), ಸ್ಕ್ಯಾನ್ ಎ ರಿಯಲ್ ಬೈಕ್ (ಎ.ಆರ್. ಆಧಾರಿತ) ಹಾಗೂ 3ಡಿ ಮಾದರಿ (ಎ.ಆರ್ ಪೂರಕವಲ್ಲದ ಮೊಬೈಲ್ ಪರಿಕರಗಳಿಗೆ) ಪ್ರತಿಯೊಂದು ಮಾದರಿಯು ಕೂಡಾ ಎಕ್ಸ್-ರೇ ಚಿತ್ರಣದ ಮೂಲಕ ವಾಹನದ ವಿಶೇಷಗಳನ್ನು ಪ್ರಮುಖವಾಗಿ ಬಿಂಬಿಸಲಿದೆ. ಇವುಗಳಲ್ಲಿ ಅನಿಮೇಷನ್, ವಿಡಿಯೊ ಮತ್ತು ಇನ್ನೂ ಅನೇಕವು ಸೇರಿವೆ. ಈ ಆ್ಯಪ್ ಇದರ ಜೊತಗೆ ಸೆಲ್ ಥ್ರೂ ಪ್ರಕ್ರಿಯೆ ಆಯ್ಕೆಯನ್ನು ನೀಡಲಿದ್ದು, ಅವಿರತ ಸಂಪರ್ಕವನ್ನು ಒದಗಿಸಲಿದೆ. ಈ ಮೂಲಕ ಗ್ರಾಹಕರು ಆಯ್ಕೆಯ ವಾಹನ ಕುರಿತ ಟೆಸ್ಟ್ ರೈಡ್, ಸಮೀಪದ ವಿತರಕರನ್ನು ಗುರುತಿಸುವುದು ಅಥವಾ ಆನ್‍ಲೈನ್‍ನಲ್ಲಿಯೇ ವಾಹನ ಬುಕ್ ಮಾಡುವುದನ್ನು ಮಾಡಬಹುದು.

TVS ಮೋಟರ್ ಕಂಪನಿಯ ಮುಖ್ಯಸ್ಥ (ಮಾರ್ಕೆಟಿಂಗ್- ಪ್ರೀಮಿಯಂ ಮೋಟರ್ ಸೈಕಲ್ಸ್) ಮೇಘಶ್ಯಾಂ ದಿಘೋಲೆ ಅವರು `ಟಿ.ವಿ.ಎಸ್ ಮೋಟರ್ ಕಂಪನಿಯು ತನ್ನ ವಿವಿಧ ಉತ್ಪನ್ನಗಳು ಹಾಗೂ ಸೇವೆಯಲ್ಲಿ ತಂತ್ರಜ್ಞಾನವನ್ನು ಬಳಸುವಲ್ಲಿ ಎಂದಿಗೂ ಮುಂಚೂಣಿಯಲ್ಲಿದೆ. ನೂತನ ಟಿ.ವಿ.ಎಸ್ ಂ.ಖ.I.ಗಿ.ಇ ಆ್ಯಪ್ ಈ ಧ್ಯೇಯದ ಮುಂದುವರಿದ ಭಾಗವಾಗಿದೆ. ನಮ್ಮ ಗ್ರಾಹಕರು ಈಗ ಸಂಸ್ಥೆಯ ಉತ್ಪನ್ನಗಳನ್ನು ಕುರಿತು ಮಾಹಿತಿ ಅನುಭವವನ್ನು ಎ.ಆರ್. ಟೆಕ್ನಾಲಜಿಯ ಮೂಲಕ ತಮ್ಮ ಮನೆಯಲ್ಲಿಯೇ ಪಡೆಯಬಹುದಾಗಿದೆ. ನಾವು ಈ ಆ್ಯಪ್ ಅನ್ನು ಸಂಸ್ಥೆಯ ಮುಂಚೂಣಿ ವಾಹನಗಳಾಗಿರುವ ಟಿವಿಎಸ್ ಅಪಾಚೆ ಆರ್.ಆರ್ 310 ಮತ್ತು ಟಿವಿಎಸ್ ಅಪಾಚೆ RTR 200 4V  ಮೂಲಕ ಪರಿಚಯಿಸಲಿದ್ದೇವೆ. ಈ ಆ್ಯಪ್ ಗ್ರಾಹಕರ ಆಯ್ಕೆ ಮತ್ತು ನಿರ್ಧಾರ ನಡುವಣ ಅಂತರವನ್ನು ಕುಗ್ಗಿಸಲಿದೆ. ಆಗ್‍ಮೆಂಟೆಡ್  ರಿಯಾಲಿಟಿ ತಂತ್ರಜ್ಞಾನದ ಮೂಲಕ ಉತ್ಪನ್ನವನ್ನು ಕುರಿತಂತೆ 360 ಡಿಗ್ರಿ ಕೋನದಲ್ಲಿ ದೃಶ್ಯ ಮತ್ತು ಶ್ರವ್ಯ ವಿವರಗಳ ಮೂಲಕ ಭಿನ್ನ ಅನುಭವವನ್ನು ಗ್ರಾಹಕರು ಪಡೆಯಬಹುದಾಗಿದೆ. ನಮ್ಮ ಸಾಮಥ್ರ್ಯ ಮತ್ತು ಹಾಲಿ ಗ್ರಾಹಕರು ಈ ಸೇವೆಯ ಮೌಲ್ಯವನ್ನು ಖಂಡಿತವಾಗಿ ಸ್ವಾಗತಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ARIVE  ಆ್ಯಪ್‍ನ ಮೂರು ವಿಭಿನ್ನ ಮೋಡ್‍ನಲ್ಲಿ ವೀಕ್ಷಣಾ ಆಯ್ಕೆಗಳು ಸಂಪೂರ್ಣವಾದ ಸೇರ್ಪಡೆಯುಕ್ತ ಸೇವೆಯನ್ನು ಒದಗಿಸಲಿದೆ.  ಪ್ಲೇಸ್ ಟು ಎಕ್ಸ್‍ಪ್ಲೋರ್ ಮೋಡ್ ವಾಹನವನ್ನು ಕುರಿತಂತೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅನುಭವ ನೀಡಲಿದದೆ. ವಚ್ರ್ಯುಯೆಲ್ 3ಡಿ ಮಾಡೆಲ್ ಮತ್ತು ಎ.ಆರ್. ವಲ್ರ್ಡ್ ಕುರಿತು ವಿವರಗಳನ್ನು ಒಳಗೊಂಡಿದೆ.  ವಚ್ರ್ಯುಯೆಲ್ ವೆಹಿಕಲ್ ಅನ್ನು ಯಾವುದೇ ಸಮತಟ್ಟಾದ ಸ್ಥಳದಲ್ಲಿ ಇಡಬಹುದಾಗಿದೆ. ಈ ಮೂಲಕ ಗ್ರಾಹಕರಿಗೆ ಉತ್ಪನ್ನ ಕುರಿತಂತೆ 360 ಡಿಗ್ರಿ ಕೋನದಲ್ಲಿ ಸಂಪೂರ್ಣವಾದ ಅನುಭವವನ್ನು ನೀಡಲಿದೆ. ಈ ಆಯ್ಕೆಗಳನ್ನು ಒತ್ತುವ ಮೂಲಕ ಗ್ರಾಹಕರು ಉತ್ಪನ್ನ ಕುರಿತಂತೆ ವಿಡಿಯೊ ಮತ್ತು ಆಡಿಯೊ ಸ್ವರೂಪದಲ್ಲಿ ಉತ್ಪನ್ನವನ್ನು ಕುರಿತಂತೆ ಸಂಪೂರ್ಣವಾದ ವಿವರಗಳನ್ನು ಪಡೆಯಲಿದ್ದಾರೆ.

ಸ್ಕ್ಯಾನ್ ಎ ರಿಯಲ್ ಬೈಕ್ ಮೋಡ್‍ನಲ್ಲಿ ಇನ್ನೊಂದೆಡೆ ವಾಸ್ತವ ಪರಿಕರಗಳು, ಎಆರ್‍ನ ಸಮ್ಮಿಶ್ರಣವಾಗಿದೆ. ಬಳಕೆದಾರರು ವಾಸ್ತವ ನೆಲೆಗಟ್ಟಿನ ವಾಹನವನ್ನು ಮೊಬೈಲ್‍ನ ಎದುರಿಗಿಟ್ಟು ಸ್ಕ್ಯಾನ್ ಮಾಡಬಹುದು. ಒಮ್ಮೆ ಗುರುತು ಪತ್ತೆಯಾದ ನಂತರ ನಿರ್ದಿಷ್ಟ ವಾಹನದ ವಿವಿಧ ಸೌಲಭ್ಯಗಳನ್ನು ಹಾಟ್‍ಸ್ಪಾಟ್‍ಗಳನ್ನು ಗುರುತಿಸುವ ಸ್ವಯಂಚಾಲಿತವಾಗಿ ಗಮನಸಳೆಯಲಿವೆ. ಇವುಗಳನ್ನು ಅದುಮಿದಾಗ ಗ್ರಾಹಕರಿಗೆ ವಾಹನದ ಎಕ್ಸ್ ರೇ ಸ್ವರೂಪವು ಕಾಣಲಿದೆ. ಆಡಿಯೊ ಮತ್ತು ವಿಡಿಯೊ ಸ್ವರೂಪದಲ್ಲಿ ವಾಹನದ ವಿವರಣೆ, ವಿವರಣಾತ್ಮಕ ಬರಹವು ಲಭ್ಯವಾಗಲಿದೆ.

3D ಮೋಡ್ AR ಮತ್ತು AR ಬೆಂಬಲಿತವಲ್ಲದ ಎರಡೂ ಮೊಬೈಲ್ ಪರಿಕರಗಳಲ್ಲಿ ಲಭ್ಯವಿದೆ. AR ಬೆಂಬಲಿತವಲ್ಲದ ಪರಿಕರಗಳು ಕೇವಲ 3D ಮೋಡ್ ಸ್ವರೂಪ ಪಡೆಯಲಿದ್ದು, ಅದನ್ನು ತಿರುಗಿಸುವ ಮೂಲಕ ವಾಹನವನ್ನು 360 ಡಿಗ್ರಿ ಕೋನದಲ್ಲಿಯೂ ಪರಿಶೀಲಿಸಬಹುದಾಗಿದೆ. ಮೋಟರ್‍ಸೈಕಲ್‍ನ ಮುಖ್ಯ ಸೌಲಭ್ಯಕುರಿತು ಹೆಚ್ಚಿನ ವಿವರ ಪಡೆಯಲು ಬಳಕೆದಾರರು ನಿರ್ದಿಷ್ಟವಾಗಿ ಆ ಐಕನ್ ಅನ್ನು ಒತ್ತಬೇಕು. ಇದು, ಉದ್ದೇಶಿತ ಸೌಲಭ್ಯ ಕುರಿತು ಹೆಚ್ಚಿನ ವಿವರ ಒದಗಿಸಲಿದೆ. ಬಳಕೆದಾರರಿಗೆ ಆಡಿಯೊ, ವಿಡಿಯೊ ಮತ್ತು ಅಕ್ಷರ ಸ್ವರೂಪದ ವಿವರಗಳು ಲಭ್ಯವಾಗಲಿವೆ. ಈ ಆಯ್ಕೆಯನ್ನು ಸೂಕ್ತ ಹಿನ್ನೆಲೆಯೊಂದಿಗೆ ಹೊಂದಿಸಬಹುದಾಗಿದ್ದು, ಅತ್ಯುತ್ತಮ ಅನುಭವವನ್ನು ಅದು ಒದಗಿಸಲಿದೆ. ಇಲ್ಲಿ, ಬಳಕೆದಾರರು ಪಕ್ಷಿನೋಟದ ಮೂಲಕವು ವಾಹನದ ವಿವರಗಳನ್ನು ಕ್ಯಾಮೆರಾ ಆಯ್ಕೆ ಬಳಸುವ ಮೂಲಕ ಪಡೆಯಬಹುದಾಗಿದೆ. 

ಈ ಆ್ಯಪ್ ಈಗ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆ್ಯಪ್‍ಸ್ಟೋರ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ

Follow Us:
Download App:
  • android
  • ios