ಹೊಸೂರು(ಅ.22): ವಿಶ್ವದಾದ್ಯಂತ ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದಕ ಸಂಸ್ಥೆಯಾಗಿರುವ TVS ಮೋಟಾರ್ ಕಂಪನಿ,  ಮಾರ್ವೆಲ್  ಅವೆಂಜರ್ಸ್‍ನಿಂದ ಪ್ರೇರೇಪಣೆಗೊಂಡಿರುವ TVS Ntorq 125  ಸೂಪರ್ ಸ್ಕ್ವಾಡ್ ಎಡಿಶನ್ ವಾಹನವನ್ನು ಬಿಡುಗಡೆ ಮಾಡಿತು. ಕಂಪನಿಯು ಈಗ ಡಿಸ್ನೇ ಇಂಡಿಯಾದ ಗೃಹಬಳಕೆ ಉತ್ಪನ್ನಗಳ ವಹಿವಾಟಿನ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಮೂಲಕ ವಿಶೇಷ ಸೂಪರ್ ಸ್ಕ್ವಾಡ್ ಆವೃತ್ತಿಯಾಗಿರುವ TVS Ntorq 125 ಬಿಡುಗಡೆ ಮಾಡಿದೆ. ಇದು, ಭಾರತದ ಮೊದಲ ಬ್ಲೂಟೂತ್ ಸಂಪರ್ಕವಿರುವ ಮತ್ತು ಆರ್‍ಟಿ-ಫೈ ತಂತ್ರಜ್ಞಾನವನ್ನು ಹೊಂದಿರುವ ಸ್ಕೂಟರ್ ಆಗಿದ್ದು, ಮಾರ್ವೆಲ್ ಅವರ ಹೆಸರಾಂತ ಸೂಪರ್ ಹೀರೋಗಳಿಂದ ಪ್ರೇರೇಪಣೆ ಪಡೆದಿದೆ.

40 ಲಕ್ಷ ಜಾಗತಿಕ ಮಾರಾಟದ ಮೈಲುಗಲ್ಲು ದಾಟಿದ TVS ಅಪಾಚೆ!

2018ರಲ್ಲಿTVS Ntorq 125 ಸ್ಕೂಟರ್ ಅನ್ನು ಭಾರತದ ಮೊದಲ ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದ ವಾಹನವಾಗಿ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಸರಿಸಾಟಿಯಿಲ್ಲದ ನೋಟ, ಉನ್ನತ ಗುಣಮಟ್ಟದ ರೇಸಿಂಗ್ ಶೈಲಿಯ ಸಾಮಥ್ರ್ಯ, ಅತ್ಯಾಧುನಿಕವಾದ ಟೆಕ್ನಾಲಜಿಯಿಂದಾಗಿ ಗಮನಸೆಳೆದಿತ್ತು.  ಬ್ರಾಂಡ್ ಈಗ ಹೊಸ ಅನ್ವೇಷಣೆಗಳಿಗಾಗಿ ಗಮನಸೆಳೆಯುತ್ತಿದೆ.  ಹೊಸ ಪೀಳಿಗೆಯ ಗ್ರಾಹಕರನ್ನು ಸಂತುಷ್ಟಗೊಳಿಸಲು ಇನ್ನಷ್ಟು ಹೊಸತನ ನೀಡಲು ಕಂಪನಿ ಒತ್ತು ನೀಡುತ್ತಿದೆ. ಜನರೇಷನ್ ಜಡ್ ಎಂದೇ ಗುರುತಿಸುವ ನವಪೀಳಿಗೆಗಾಗಿ ಮಾರ್ವೆಲ್ ಯೂನಿವರ್ಸ್ ಚೆನ್ನಾಗಿ ಬೆಸೆದು ಕೊಂಡಿದೆ.

ಖರೀದಿಸಿ, 6 ತಿಂಗಳ ಬಳಿಕ ಪಾವತಿಸಿ; TVS ಮೋಟಾರ್ಸ್‌ನಿಂದ ಹೊಸ ಸ್ಕೀಮ್ !.

ಸೂಪರ್ ಸ್ಕ್ವಾಡ್ ಆವೃತ್ತಿಯು ಮೂರು ಹೊಸ ಮಾದರಿಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಇನ್‍ವಿಸಿಬಲ್ ರೆಡ್, ಸ್ಟೀಲ್ತ್ ಬ್ಲ್ಯಾಕ್, ಕಾಂಬ್ಯಾಟ್ ಬ್ಲೂ ಇನ್‍ಸ್ಪೈರ್ಡ್ ಬೈ ಐರನ್ ಮ್ಯಾನ್ ಬ್ಲ್ಯಾಕ್ ಪ್ಯಾಂಥರ್ ಮತ್ತು ಕ್ಯಾಫ್ಟನ್ ಅಮೆರಿಕ ಇವುಗಳು. ನೂತನ ಆವೃತ್ತಿಯು ಮಾರ್ವೆಲ್‍ರ ಪ್ರತಿ ಸೂಪರ್ ಹೀರೊ ಜೊತೆಗೆ ಗುರುತಿಸಿಕೊಂಡಿದ್ದು, ತನ್ನದೇ ಆದ ವಿನ್ಯಾಸವನ್ನು ಒಳಗೊಂಡಿದೆ. 

`ಮಾರ್ವೆಲ್ ಅವೆಂಜರ್ಸ್‍ನಿಂದ ಪ್ರೇರೇಪಿತವಾದ TVS Ntorq 125 ಬಿಡುಗಡೆ ಮಾಡಲು ಖುಷಿಯಾಗಿದೆ.  ನವಪೀಳಿಗೆಯು `ಪ್ಲೇ ಸ್ಮಾರ್ಟ್, ಪ್ಲೇ ಎಪಿಕ್’ ಜೊತೆಗೆ ಗುರುತಿಸಿಕೊಳ್ಳಬಹುದಾಗಿದೆ. ನಾವು ಎಲ್ಲರೂ ನಮ್ಮ ನೆಚ್ಚಿನ ಹೀರೋಗಳನ್ನು ಹೊಂದಿದ್ದೇವೆ, ಅವರ ಜೊತೆಗೆ ಭಾವನಾತ್ಮಕವಾಗಿ ಸಹಯೋಗ ಹೊಂದಿರುತ್ತೇವೆ. ಅದನ್ನು ಆನಂದಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಟಿ.ವಿ.ಎಸ್. TVS Ntorq 125  ಸೂಪರ್ ಸ್ಕ್ವಾಡ್ ಆವೃತ್ತಿಯು  ಆರಂಭಿಕ ಪ್ರತಿಕ್ರಿಯೆಯೂ ಉತ್ಸಾಹಭರಿತವಾಗಿದೆ.  ಇದೊಂದು ಬ್ಲಾಕ್ ಬಸ್ಟರ್ ಆಗುವ ಎಲ್ಲ ವಿಶ್ವಾಸವೂ ಇದೆ ಎಂದು ಟಿ.ವಿ.ಎಸ್. ಮೋಟರ್ ಕಂಪನಿಯ ಕಮ್ಯುಟರ್ ಮೋಟರ್ ಸೈಕಲ್ಸ್, ಸ್ಕೂಟರ್ & ಕಾರ್ಪೊರೇಟ್ ಬ್ರಾಂಡ್ ವಿಭಾಗದ ಉಪಾಧ್ಯಕ್ಷ  ಅನಿರುದ್ಧ ಹಲ್ದಾರ್ ಹೇಳಿದರು. 

ಸೂಪರ್ ಸ್ಕ್ವಾಡ್ ಲೊಗೊ ಮತ್ತು ಹೆಸರಾಂತ ಅವೆಂಜರ್ಸ್ ನ ‘ಎ’ ಅನ್ನು ಎದ್ದು ಕಾಣುವಂತೆ ಮುಂದಿನ ಪ್ಯಾನಲ್, ಲೆಗ್ ಶೀಲ್ಡ್ ಮತ್ತು ಸ್ಪೀಡೊಮೀಟರ್ ಕೆಳಗೆ ಬಿಂಬಿಸಲಾಗಿದೆ. 

ಸ್ಟೀಲ್ತ್ ಬ್ಲ್ಯಾಕ್: ಬ್ಲ್ಯಾಕ್ ಪ್ಯಾಂಥರ್‍ನಿಂದ ಪ್ರೇರೇಪಿತವಾದ ಈ ಆವೃತ್ತಿಯು ಜೆಟ್ ಬ್ಲ್ಯಾಕ್ ವರ್ಣ ಹಾಗೂ ಪರ್ಪಲ್ ವರ್ಣವನ್ನು ಒಳಗೊಂಡಿದೆ. ಸ್ಕೂಟರ್ ಬ್ಲ್ಯಾಕ್ ಪ್ಯಾಂಥರ್ ಅನ್ನು ಬಿಂಬಿಸಲಿದೆ. ಉತ್ಸಾಹಿಗಳಿಗಾಗಿ ವಾಕಾಂಡಾ ಫಾರ್‍ಎವರ್ ಸಿಗ್ನೇಚರ್ ಸಲ್ಯೂಟ್ ಕೂಡಾ ಇದ್ದು, 66 ಸಂಖ್ಯೆಯೂ (1966) ಮಾರ್ವೆಲ್ ಯೂನಿವರ್ಸ್‍ನಲ್ಲಿ ಈ ಪಾತ್ರವನ್ನು ಪರಿಚಯಿಸಿದ ವರ್ಷವನ್ನು ಉಲ್ಲೇಖಿಸಲಿದೆ.

ಇನ್‍ವಿಸಿಬಲ್ ರೆಡ್: ಐರನ್ ಮ್ಯಾನ್‍ನಿಂದ ಪ್ರೇರೇಪಿತವಾದ ಈ ಸ್ಕೂಟರ್ ಕೆಂಪು ಮತ್ತು ಚಿನ್ನದ ವರ್ಣವನ್ನು ಬಿಂಬಿಸಲಿದ್ದು, ಆಕರ್ಷಕ ನೋಟವನ್ನು ಒಳಗೊಂಡಿದೆ. ಐರನ್ ಮ್ಯಾನ್ ಹೆಲ್ಮೆಟ್ ಚಿತ್ರವನ್ನು ಲೆಗ್‍ಶೀಲ್ಡ್ ಮೇಲೆ ಬಿಂಬಿಸಲಾಗಿದೆ. ಎರಡೂ ಬದಿಯ ಪ್ಯಾನಲ್ ಮೇಲೆ ಆರ್ಕ್ ರಿಯಾಕ್ಟರ್ ಚಿತ್ರವಿದೆ. ಮಾರ್ಕ್ ಘಿಘಿIಘಿ ಚಿತ್ರವು ಎರಡೂ ಪ್ಯಾನಲ್ ಮೇಲಿದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಲಿದೆ. ಐರನ್ ಮ್ಯಾನ್‍ನ 29ನೇ ಸ್ಯೂಟ್ ಹಾಗೂ 63 (1963) ಸಂಖ್ಯೆಯೂ ಮಾರ್ವೆಲ್ ಯೂನಿವರ್ಸ್‍ನಲ್ಲಿ ಈ ಪಾತ್ರವನ್ನು ಪರಿಚಯಿಸಿದ ವರ್ಷವನ್ನು ಬಿಂಬಿಸಲಿದೆ.

ಕಾಂಬ್ಯಾಟ್ ಬ್ಲೂ: ಕ್ಯಾಪ್ಟನ್ ಅಮೆರಿಕದಿಂದ ಪ್ರೇರೇಪಿತವಾದ ಈ ಸ್ಕೂಟರ್ ನೀಲಿ, ಬಿಳಿ ಮತ್ತು ಕೆಂಪು ವರ್ಣವನ್ನು ಒಳಗೊಂಡಿದೆ. ಪಾತ್ರವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಕ್ರಮವಾಗಿ ಇದು 41 (1941) ಸಂಖ್ಯೆಯನ್ನು ಬಿಂಬಿಸಿದ್ದು, ಇದು ಮಾರ್ವೆಲ್ ಯೂನಿವರ್ಸ್‍ನಲ್ಲಿ ಕ್ಯಾಫ್ಟನ್ ಅಮೆರಿಕ ಅನ್ನು ಪರಿಚಯಿಸಿದ ವರ್ಷವಾಗಿದೆ. ಸ್ಕೂಟರ್ ಮುಂಭಾಗದ ಶೀಲ್ಡ್, ಎರಡೂ ಬದಿಯ ಪ್ಯಾನಲ್ ಮೇಲೆ ಸೂಪರ್ ಸೋಲ್ಜರ್‍ಚಿತ್ರ ಬಿಂಬಿಸಲಾಗಿದೆ.

ಸೂಪರ್ ಸ್ಕ್ವಾಡ್ ಆವೃತ್ತಿಯ ಟಿ.ವಿ.ಎಸ್. ಕನೆಕ್ಟ್ ಆ್ಯಪ್ ಅನ್ನು ಸ್ಮಾರ್ಟ್ ಕನೆಕ್ಟ್ ಫೀಚರ್ಸ್ ಹೊಂದಿದೆ.  ಆ್ಯಪ್ ಆಯಾ ಪಾತ್ರಗಳ ಗಮನಸೆಳೆಯುವ ಲಕ್ಷಣಗಳೊಂದಿಗೆ ತೆರೆದುಕೊಳ್ಳಲಿದೆ. ಅಂದರೆ ಕ್ಯಾಫ್ಟನ್ ಅಮೆರಿಕದ ಶೀಲ್ಡ್, ಐರನ್ ಮ್ಯಾನ್‍ನ ಸ್ಯೂಟ್ ಮತ್ತು ಬ್ಲ್ಯಾಕ್ ಪ್ಯಾಂಥರ್‌ನ ಕಣ್ಣುಗಳ ಚಿತ್ರದೊಂದಿಗೆ ತೆರೆದುಕೊಳ್ಳಲಿದೆ. ಆ್ಯಪ್‍ನ ಪ್ರತಿ ಸ್ಕ್ರೀನ್ ಅನ್ನು ವಿಶೇಷ ಪಾತ್ರಗಳೊಂದಿಗೆ ರೂಪಿಸಲಾಗಿದೆ ಈ ಮೂಲಕ ಆ್ಯಪ್, ಮಾರ್ವೆಲ್‍ನ ಪೂರ್ಣ ಅನುಭವವನ್ನು ನೀಡಲಿದೆ. 125 ಸೂಪರ್ ಸ್ಕ್ವಾಡ್ ಆವೃತ್ತಿಯ ದರ 83,815 ಆಗಿದೆ (ಎಕ್ಸ್ ಶೋರೂಂ ದರ, ದೆಹಲಿ).