TVS ಮೋಟಾರ್ಸ್ ಹೊಸ ಸ್ಕೀಮ್ ಪರಿಚಯಿಸುತ್ತಿದೆ. ಈಗ ಖರೀದಿಸಿ 6 ತಿಂಗಳ ಬಳಿಕ ಪಾವತಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಡಿ ವಾಹನ ಖರೀದಿಸುವ ಗ್ರಾಹಕರಿಗೆ ಆರಂಭಿಕ 6 ತಿಂಗಳು ಯಾವುದೇ ಲೋನ್ ಮರುಪಾವತಿ ಮಾಡಬೇಕಾಗಿಲ್ಲ.  

ಬೆಂಗಳೂರು( ಜೂ. 5,): ಭಾರತದ ಪ್ರಖ್ಯಾತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಉತ್ಪಾದಕ TVS ಮೋಟರ್ ಕಂಪನಿ ಮೊಟ್ಟಮೊದಲ ಬಾರಿಗೆ ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ TVS XL 100ಗಾಗಿ “ಈಗ ಖರೀದಿಸಿ, ಆರು ತಿಂಗಳ ಬಳಿಕ ಪಾವತಿಸಿ’ ಎಂಬ EMI ಯೋಜನೆಯನ್ನು ಆರಂಭಿಸಿದೆ.

ಕೊರೋನಾ ವಿರುದ್ಧ ಹೋರಾಡುತ್ತಿರುವ ಬೆಂಗಳೂರು ಪೊಲೀಸರಿಗೆ TVS ಮೋಟಾರ್ ಸಾಥ್!

TVS XL 100 ಖರೀದಿಸಿದ ಬಳಿಕ ಈ ಯೋಜನೆ ಅನ್ವಯಿಸುವ ಗ್ರಾಹಕರಿಗೆ EMI ಪಾವತಿ ಆರಂಭವಾಗುವ ದಿನಾಂಕದಿಂದ ಆರು ತಿಂಗಳ ಮುಂದೂಡಿಕೆ ಸೌಲಭ್ಯ ನೀಡಲಾಗುತ್ತದೆ. ಇದರ ಪರಿಣಾಮವಾಗಿ ಗ್ರಾಹಕರು ಆರು ತಿಂಗಳ EMI ಪಾವತಿಸಬೇಕಿಲ್ಲ. ಈ ಯೋಜನೆಯಡಿ ಒಟ್ಟು ಮೌಲ್ಯಕ್ಕೆ ನೀಡುವ ಸಾಲದ ಮೊತ್ತ ಶೇಕಡ 75 ರಷ್ಟಾಗಿರುತ್ತದೆ.

ಹೆಚ್ಚು ಮೈಲೇಜ್, ಕೈಗೆಟುಕವ ಬೆಲೆಯೊಂದಿಗೆ BS6 ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ

ವಿನೂತನ ಹಾಗೂ ಕೈಗೆಟುಕುವ ದರದ ಸಂಚಾರ ಪರಿಹಾರವನ್ನು ಸೃಷ್ಟಿಸುವ ಕಂಪನಿಯ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಗ್ರಾಹಕರಿಗೆ ತಮ್ಮ ತಕ್ಷಣದ ಅಗತ್ಯತೆಗಾಗಿ ವಾಹನ ಖರೀದಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು 2020ರ ಜುಲೈ 31ರವರೆಗೆ ಜಾರಿಯಲ್ಲಿರುತ್ತದೆ.

TVS XL 100 100 ವಾಹನವು ಹೈಸ್ಪಾರ್ಕ್ ಎನರ್ಜಿ ಎಂಜಿನ್‍ನಿಂದ ಚಾಲಿತವಾಗಿದ್ದು, ಪಿಕ್ ಅಪ್ ಜತೆಗೆ ಅದ್ಭುತ ಕ್ಷಮತೆಯನ್ನು ನೀಡುತ್ತದೆ. 99.7 cc, 4 ಸ್ಟ್ರೋಕ್ ಎಂಜಿನ್‍ನ ಗರಿಷ್ಠ ಶಕ್ತಿ 4.3 bh ಪವರ್ ಹಾಗೂ ಗರಿಷ್ಠ ಟಾರ್ಕ್ 6.5 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

#NewsIn100Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್‌

"