Asianet Suvarna News Asianet Suvarna News

ಟ್ರಾಫಿಕ್‌ ದಂಡಕ್ಕೆ ಸವಾರರು ಹೈರಾಣು!

ಟ್ರಾಫಿಕ್‌ ದಂಡಕ್ಕೆ ಸವಾರರು ಹೈರಾಣು!| - ದೆಹಲಿ, ಹರ್ಯಾಣ, ಒಡಿಶಾದಲ್ಲಿ 1.41 ಕೋಟಿ ರು. ದಂಡ ಸಂಗ್ರಹ| ಹರ್ಯಾಣದಲ್ಲಿ ಬೈಕ್‌ ಸವಾರನಿಂದ 23,500 ರು. ದಂಡ ವಸೂಲಿ

Traffic fine collection at new record in Haryana Odisha
Author
Bangalore, First Published Sep 6, 2019, 10:45 AM IST

ನವದೆಹಲಿ[ಸೆ.06]: ನೂತನ ಮೋಟಾರ್‌ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ಸಾರಿಗೆ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವಿಕೆ ಮುಂದುವರಿದಿದ್ದು, ಭಾರೀ ದಂಡಕ್ಕೆ ವಾಹನ ಸವಾರರು ಕಂಗೆಟ್ಟಿದ್ದಾರೆ. ಕಾಯ್ದೆ ಜಾರಿಯಾದ ಮೂರೇ ದಿನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ಹರ್ಯಾಣ, ಒಡಿಶಾ ಸೇರಿದಂತೆ ದೇಶದ ಹಲವು ನಗರಗಲ್ಲಿ ಕೋಟಿಗಟ್ಟಲೆ ಮೊತ್ತದ ದಂಡ ಸಂಗ್ರಹವಾಗಿದೆ.

ಟ್ರಾಫಿಕ್ ನಲ್ಲಿ ಯಾವ ದಾಖಲೆ ತೋರಿಸಬೇಕು?

ಹರ್ಯಾಣದಲ್ಲಿ ಬೈಕ್‌ ಸವಾರನೊಬ್ಬ ಸಾರಿಗೆ ನಿಯಮ ಉಲ್ಲಂಘಿಸಿದ್ದಕ್ಕೆ 23,500 ರು. ದಂಡ ಪಾವತಿಸಿದ್ದಾನೆ. ಪಟಿಯಾಲಾ ನಿವಾಸಿಯಾಗಿರುವ ಸೋನು ಎಂಬಾತ ಇತ್ತೀಚೆಗಷ್ಟೇ ಬೈಕ್‌ ಖರೀದಿಸಿದ್ದ. ಆದರೆ, ನೋಂದಣಿ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳು ಇರಲಿಲ್ಲ. ಈ ಕಾರಣಕ್ಕಾಗಿ ಪೊಲೀಸರು ಆತನಿಗೆ 23500 ರು. ದಂಡ ಪಾವತಿಸುವಂತೆ ಸೂಚಿಸಿದ್ದಾರೆ.

ಇನ್ನು ಗುರುಗ್ರಾಮದಲ್ಲಿ ಸಾರಿಗೆ ನಿಯಮ ಉಲ್ಲಂಘಿಸಿದ ಮೂವರು ಆಟೋ ರಿಕ್ಷಾ ಚಾಲಕರಿಗೆ ತಲಾ 9,400 ರು., 27,000 ರು., ಹಾಗೂ 37,000 ರು. ದಂಡ ವಿಧಿಸಲಾಗಿದೆ.

ಸ್ಕೂಟರ್‌ ಚಾಲಕಗೆ 23000 ರು,ಆಟೋ ಚಾಲಕಗೆ 47500 ದಂಡ!

ಒಡಿಶಾದಲ್ಲಿ ನೂತನ ಕಾಯ್ದೆ ಜಾರಿ ಆದ ಬಳಿಕ 4,080 ಮಂದಿ ದಂಡ ಪಾವತಿಸಿದ್ದು, ಅವರಿಂದ ಒಟ್ಟು 88.90 ಲಕ್ಷ ರು. ದಂಡ ಸಂಗ್ರಹವಾಗಿದೆ. ಇನ್ನು ದೆಹಲಿಯಲ್ಲಿ 3,900 ಮಂದಿ ದಂಡ ಪಾವತಿಸಿದರೆ ಹರ್ಯಾಣದಲ್ಲಿ 343 ಜನರಿಂದ 52.32 ಲಕ್ಷ ದಂಡ ಸಂಗ್ರಹಿಸಲಾಗಿದೆ. ಕಾಯ್ದೆ ಜಾರಿ ಬಳಿಕ ಈ ಮೂರು ನಗರಗಳಿಂದ 1.41 ಕೊಟಿ ರು. ದಂಡ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios