ಬೆಂಗಳೂರು: ಮಧ್ಯಮ ವರ್ಗಕ್ಕಾಗಿ ಕಡಿಮೆ ಬೆಲೆಯ ಐಶಾರಾಮಿ ಕಾರು ‘ಗ್ಲಾಂಜಾ’ ಟಯೋಟಾ ಸಂಸ್ಥೆ ಬಿಡುಗಡೆ ಮಾಡಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ವಿವೋ ಟಯೋಟಾ ಶೋರೂಂ ನಲ್ಲಿ ಗುರುವಾರ ಗೃಹ ಸಚಿವ ಎಂ.ಬಿ.ಪಾಟೀಲ್ ‘ಗ್ಲಾಂಜಾ’ ಕಾರು ಬಿಡುಗಡೆ ಗೊಳಿಸಿದರು.

ಟೊಯೋಟಾ ಕಂಪನಿ ಮಾರುತಿ ಸುಜುಕಿ ಸಹಯೋಗ ದೊಂದಿಗೆ ಉತ್ಪಾದಿಸಿದೆ. 

ಪೆಟ್ರೋಲ್ ಎಂಜಿನ್ ಹೊಂದಿದ್ದು, 7 ಲಕ್ಷದಿಂದ 10 ಲಕ್ಷ ರು. ವರೆಗೆ ವಿವಿಧ ಮಾದರಿಯಲ್ಲಿ ಹಾಗೂ ಐದು ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ.