ನವದೆಹಲಿ(ನ.19): ಟೊಯೊಯಾ ಕಂಪನಿಯ ಗರಿಷ್ಠ ಮಾರಾಟವಾದ ಹಾಗೂ ಯಶಸ್ವಿ ಕಾರುಗಳಾದ ಇಟಿಯೋಸ್, ಇಟಿಯೋಸ್ ಲಿವಾ ಹಾಗೂ ಇಟಿಯೋಸ್ ಲಿವಾ ಕ್ರಾಸ್ ಕಾರುಗಳು ಸ್ಥಗಿತಗೊಳ್ಳುತ್ತಿದೆ. 2010ರ ಆಟೋ ಎಕ್ಸ್ಪೋದಲ್ಲಿ ಸಂಚಲನ ಮೂಡಿಸಿದ್ದ ಇಟಿಯೋಸ್ ಕಾರುಗಳು ಬರೋಬ್ಬರಿ 9 ವರ್ಷಗಳ ಕಾಲ ಸಂಭ್ರಮದಿಂದ ರಸ್ತೆ ಮೇಲೆ ಓಡಾಡಿತ್ತು. ಇದೀಗ 10ನೇ ವರ್ಷಾಚರಣೆಗೂ ಮುನ್ನ ಕಾರು ಸ್ಥಗಿತಗೊಳ್ಳುತ್ತಿದೆ.

ಇದನ್ನೂ ಓದಿ: 480 ಕಿ.ಮೀ ಮೈಲೇಜ್; ಬರುತ್ತಿದೆ ಫಿಸ್ಕರ್ ಒಶಿಯನ್ SUV ಕಾರು!

2010ರಿಂದ ಇಲ್ಲೀವರೆಗೆ ಸರಿಸುಮಾರು 4.44 ಲಕ್ಷ ಇಟಿಯೋಸ್ ಕಾರುಗಳು ಮಾರಾಟವಾಗಿದೆ. ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿರುವ ಟೊಯೊಟಾ ಇಟಿಯೋಸ್ ಕಾರು BS6 ಎಮಿಶನ್ ಎಂಜಿನ್ ಅಪ್‌ಗ್ರೇಡ್ ಮಾಡಲು ಹಿಂದೇಟು ಹಾಕಿದೆ. ಹೀಗಾಗಿ 2020ರಿಂದ ಈ ಕಾರು ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: ನವೆಂಬರ್ ತಿಂಗಳಲ್ಲಿ ಬಹುಬೇಡಿಕೆಯ MPV ಕಾರು ಲಿಸ್ಟ್ ಪ್ರಕಟ!

2020ರ ಅಕ್ಟೋಬರ್ 1 ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳು  BS6 ಎಂಜಿನ್ ಹೊಂದಿರುವ ಬೇಕು. ಈಗಾಗಲೇ ಹಲವು ಕಂಪನಿಗಳು BS6 ಎಂಜಿನ್‌ಗೆ ಅಪ್‌ಗ್ರೇಡ್ ಮಾಡಿವೆ. ಆದರೆ ಇಟಿಯೋಸ್ ಡೀಸೆಲ್ ಕಾರು ಅಪ್‌ಗ್ರೇಡ್ ಮಾಡಿದಲ್ಲಿ ಕಾರಿನ ದರ ಹೆಚ್ಚಾಗಲಿದೆ. ದುಬಾರಿ ದರ ಮಾರಾಟದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಟೊಯೊಟಾ ಕಂಪನಿ ಇಟಿಯೋಸ್ ಕಾರುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ದಾಟ್ಸನ್ ಹೊರತಂದಿದೆ 2 ಹೊಸ ಕಾರು!​​​​​​​

ಇಟಿಯೋಸ್ ಕಾರು NCAP ಕ್ರಾಶ್ ಟೆಸ್ಟ್‌(ಸುರಕ್ಷತಾ ಪರೀಕ್ಷೆ)ನಲ್ಲಿ 4 ಸ್ಟಾರ್ ಪಡೆದುಕೊಂಡಿತ್ತು. ಈ ಮೂಲಕ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಟೊಯೊಟಾ ಈಗಾಗಲೇ ಮಾರುತಿ ಸುಜುಕಿ ಜೊತೆ ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಮಾರುತಿ ಬಲೆನೋ ಕಾರನ್ನು ಟೊಯೊಟಾ ಗ್ಲಾಂಝಾ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಇನ್ನು ಬ್ರೆಜ್ಜಾ, ಸಿಯಾಝ್ ಸೇರಿದಂತೆ ಹಲವು ಮಾರುತಿ ಕಾರುಗಳು ಟೊಯೊಟಾ ಬ್ರಾಂಡ್‌ನಲ್ಲಿ ಬಿಡುಗಡೆಯಾಗಲಿದೆ.