ನವೆಂಬರ್ ತಿಂಗಳಲ್ಲಿ ಬಹುಬೇಡಿಕೆಯ MPV ಕಾರು ಲಿಸ್ಟ್ ಪ್ರಕಟ!

ಭಾರತದಲ್ಲಿ ಕಾರು ಮಾರಾಟ ಸಹಜ ಸ್ಥಿತಿಗೆ ಮರಳುತ್ತಿದೆ. ಇದೀಗ ನವೆಂಬರ್ ತಿಂಗಳಲ್ಲಿ ಟೊಯೊಟಾ ಇನೋವಾ, ಮಾರುಟಿ ಎರ್ಟಿಗಾ ಸೇರಿದಂತೆ  MPV ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಕುರಿತ ವರದಿ ಇಲ್ಲಿದೆ.
 

Maruti ertiga toyota innova mpv car waiting period increased after demand

ನವದೆಹಲಿ(ನ.18): ಭಾರತೀಯ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಜನರು ವಾಹನ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಭಾರತದಲ್ಲಿ ಸದ್ಯ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದರ ಜೊತೆಗೆ ಟೊಯೊಟಾ ಇನೋವಾ, ಮಾರುಟಿ ಎರ್ಟಿಗಾ ಸೇರಿದಂತೆ MPV ಕಾರುಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ನವೆಂಬರ್ ತಿಂಗಳಲ್ಲಿ MPV ಕಾರುಗಳಿಗೆ ಬೇಡಿಕೆ ಹೆಚ್ಚಾದ ಕಾರಣ, ಬುಕ್ ಮಾಡಿದವರಿಗೆ ಕಾರು ಡೆಲಿವರಿ ವಿಳಂಬವಾಗುತ್ತಿದೆ.

ಇದನ್ನೂ ಓದಿ: ಗಂಟೆಗೆ 800 ಕಿ.ಮೀ ವೇಗ; ದಾಖಲೆ ಬರೆದ ಬ್ಲಡ್‌ಹೌಂಡ್ ಕಾರು!

ನವೆಂಬರ್ ತಿಂಗಳಲ್ಲಿ ಮಾರುತಿ ಎರ್ಟಿಗಾ ಕಾರಿಗೆ ಬಹು ಬೇಡಿಕೆ ಇದೆ. ಹೀಗಾಗಿ ಪ್ರಮುಖ ನಗರಗಳಲ್ಲಿ ಎರ್ಟಿಗಾ ಕಾರಿಗಾಗಿ ಗ್ರಾಹಕರು 3 ರಿಂದ 4 ತಿಂಗಳು ಕಾಯುವ ಪರಿಸ್ಥಿತಿ ಎದುರಾಗಿದೆ. ಪಂಜಾಬ್‌ನ ಚಂಢೀಗಡದಲ್ಲಿ ಎರ್ಟಿಗಾ ಕಾರು ಡೆಲಿವರಿಗಾಗಿ ಗ್ರಾಹಕರು ಬರೋಬ್ಬರಿ 35 ವಾರಗಳ ಕಾಲ ಕಾಯಬೇಕು. ಅಂದರೆ ಸರಿಸುಮಾರು 8 ರಿಂದ 8 ತಿಂಗಳು. ಇನ್ನು ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ 34 ತಿಂಗಳು ಕಾಯಬೇಕು.

ಇದನ್ನೂ ಓದಿ: ಡಿ.1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ; ತಿಳಿದುಕೊಳ್ಳಿ ಡಿಜಿಟಲ್ ಟೋಲ್!

ಬೆಂಗಳೂರಿನಲ್ಲಿ ಎರ್ಟಿಗಾ ಪೆಟ್ರೋಲ್ ಕಾರಿಗಾಗಿ ಗ್ರಾಹಕರು 25 ವಾರ ಹಾಗೂ ಡೀಸೆಲ್ ಕಾರಿಗಾಗಿ 22 ರಿಂದ 23 ವಾರ ಕಾಯಬೇಕು. ಮಾರುತಿ XL6 ಕಾರಿಗೆ ಯಾವುದೇ ಕಾಯುವಿಕೆ ಇಲ್ಲ. ಇನ್ನು ಟೊಯೊಟಾ ಇನೋವಾ ಕಾರಿಗೆ 30 ರಿಂದ 45 ದಿನ, ಮಹೀಂದ್ರ ಮೊರಾಜೋ 15 ದಿನ ಹಾಗೂ ರೆನಾಲ್ಡ್ ಲಾಡ್ಜಿ ಕಾರಿಗೆ 3 ರಿಂದ 4 ವಾರ ಬೆಂಗಳೂರಿನ ಗ್ರಾಹಕರು ಕಾಯಬೇಕು.

ದೆಹಲಿಯಲ್ಲಿ ಮಾರುತಿ ಎರ್ಟಿಗಾ ಕಾರಿಗೆ 10-15 ದಿನ, ಮಾರುತಿ XL6 ಕಾರಿಗೆ 4 ರಿಂದ 6 ವಾರ, ಟೊಯೊಟಾ ಇನೋವಾ ಪೆಟ್ರೋಲ್ 2 ರಿಂದ 3 ವಾರ ಕಾಯಬೇಕು. ಆದರೆ ಮಹೀಂದ್ರ ಮೋರಾಜೋ ಹಾಗೂ ರೆನಾಲ್ಟ್ ಲಾಡ್ಜಿ ಕಾರಿಗೆ ಯಾವುದೇ ಕಾಯುವಿಕೆ ಇಲ್ಲ.

ಇದನ್ನೂ ಓದಿ: ಭಾರತಕ್ಕೆ ಕಾಲಿಡುತ್ತಿದೆ ಚೀನಾ ಗ್ರೇಟ್ ವಾಲ್ ಕಾರು; ಕರ್ನಾಟಕದಲ್ಲಿ ಘಟಕ?

ಮುಂಬೈ ಮಹಾನಗರದಲ್ಲಿ ಎರ್ಟಿಗಾ ಕಾರಿಗೆ 5 ರಿಂದ 6 ತಿಂಗಳು, ಮಾರುತಿ ಸುಜುಕಿ XL6 ಕಾರಿಗೆ 2 ರಿಂದ 4 ವಾರ, ಟೊಯೊಟಾ ಇನೋವಾ 1 ತಿಂಗಳು ಹಾಗೂ ೇಮಹೀಂದ್ರ ಮೋರಾಜೋ 2 ವಾರ ಕಾಯಬೇಕು. ರೆನಾಲ್ಟ್ ಲಾಡ್ಜಿ ಕಾರಿಗೆ ಯಾವುದೇ ಕಾಯುವಿಕೆ ಇಲ್ಲ. 

ದೇಶದ ಪ್ರಮುಖ ನಗರಗಳಲ್ಲಿ ಮಾರುತಿ ಎರ್ಟಿಗಾ ಕಾರು ಬುಕ್ ಮಾಡಿ ಕನಿಷ್ಠ 1 ತಿಂಗಳು ಕಾಯಲೇಬೇಕು. ಆದರೆ ಚೆನ್ನೈನಲ್ಲಿ ಮಾತ್ರ ಎರ್ಟಿಗಾ ಬುಕ್ ಮಾಡಿ ಕಾಯಬೇಕಿಲ್ಲ. 

Latest Videos
Follow Us:
Download App:
  • android
  • ios