ನವದಹೆಲಿ(ಜು.25): ಭಾರತದಲ್ಲಿ ಕಾರು ಮಾರಾಟ ಕುಸಿತವಾದರೂ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಸೇರಿದಂತೆ ಪ್ರಮುಖ ಕಾರುಗಳ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದೀಗ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ, ಕಿಯಾ, ರೆನಾಲ್ಟ್, ಹ್ಯುಂಡೈ ಸೇರಿದಂತೆ ಕಾರು ಬಿಡುಗಡೆ ಮಾಡುತ್ತಿದೆ. ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳು ಇಲ್ಲಿವೆ.

ಇದನ್ನೂ ಓದಿ: ವಾಹನ ಮಾರಾಟ ಕುಸಿತ; 10 ಲಕ್ಷ ಉದ್ಯೋಗ ಕಡಿತ!

ಹ್ಯುಂಡೈ ಗ್ರ್ಯಾಂಡ್ i10
ಅಪ್‌ಗ್ರೇಡ್ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಹ್ಯುಂಡೈ ಗ್ರ್ಯಾಂಡ್ i10 ಬಿಡುಗಡೆಯಾಗುತ್ತಿದೆ. ಆಗಸ್ಟ್ 20 ರಂದು ಹ್ಯುಂಡೈ ಗ್ರ್ಯಾಂಡ್ i10 ಕಾರು ಬಿಡುಗಡೆಯಾಗಲಿದೆ. ನೂತನ ಕಾರಿನ ಬೆಲೆ 5-7 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ(ಎಕ್ಸ್ ಶೋ ರೂಂ ಬೆಲೆ)

ಮಾರುತಿ ಸುಜುಕಿ XL6
ಮಾರುತಿ ಸುಜುಕಿ ನೂತನ ಕ್ರಾಸ್ಓವರ್ ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಕಾರಿನ ಕ್ರಾಸ್ಓವರ್ ವರ್ಶನ್ ಆಗಸ್ಟ್ 21 ರಂದು ಬಿಡುಗಡೆಯಾಗಲಿದೆ. 1.5 ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ಇದನ್ನೂ ಓದಿ: ಬ್ರೆಜಾ, ನೆಕ್ಸಾನ್ ಪ್ರತಿಸ್ಪರ್ಧಿ; ಬರುತ್ತಿದೆ ಟೊಯೊಟಾ SUV ಕಾರು!

BMW 3 ಸೀರಿಸ್
7ನೇ ಜನರೇಶ್ BMW 3 ಸೀರಿಸ್ ಕಾರು ಆಗಸ್ಟ್ 21 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಲಭ್ಯವಿದೆ. 

ಕಿಯಾ ಸೆಲ್ಟೊಸ್
ಕಿಯಾ ಮೋಟಾರ್ಸ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಕಾರು ಬಿಡುಗಡೆ ಮಾಡುತ್ತಿದೆ. ಕಿಯಾ ಸೆಲ್ಟೊಸ್ ಹೆಸರಿನ SUV ಕಾರು ಆಗಸ್ಟ್ 22 ರಂದು ಬಿಡುಗಡೆಯಾಗಲಿದೆ.  ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಫೀಚರ್ಸ್ ಹೊಂದಿರುವ ಸೆಲ್ಟೊಸ್ ಬಾರಿ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಭಾರತದಲ್ಲಿ 30% ಲೈಸೆನ್ಸ್ ನಕಲಿ; ರದ್ದಾಗೋ ಮುನ್ನ ಚೆಕ್ ಮಾಡಿಕೊಳ್ಳಿ!

ರೆನಾಲ್ಟ್ ಟ್ರೈಬರ್
ರೆನಾಲ್ಟ್ ಕ್ವಿಡ್ ಮಾದರಿಯಲ್ಲೇ ಕಡಿಮೆ ಬೆಲೆಯ MPV ಕಾರು ಬಿಡುಗಡೆ ಮಾಡುತ್ತಿದೆ. ರೆನಾಲ್ಟ್ ಟ್ರೈಬರ್ ಕಾರು ಆಗಸ್ಟ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. 1.0 ಲೀಟರ್, 3 ಸಿಲಿಂಡರ್ ಎಂಜಿನ್ ಹೊಂದಿರುವ ಈ ಕಾರು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.