ಭಾರತದಲ್ಲಿ 30% ಲೈಸೆನ್ಸ್ ನಕಲಿ; ರದ್ದಾಗೋ ಮುನ್ನ ಚೆಕ್ ಮಾಡಿಕೊಳ್ಳಿ!
ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭ. ಡ್ರೈವಿಂಗ್ ಗೊತ್ತಿಲ್ಲದಿದ್ದರೂ ಲೈಸೆನ್ಸ್ ಮಾತ್ರ ಕೈಸೇರುತ್ತೆ. ಹೀಗಾಗಿ ನಕಲಿ ಲೈಸೆನ್ಸ್ ಹೊಂದಿರುವ ಚಾಲಕರು, ಲೈಸೆನ್ಸ್ ರದ್ದಾಗೋ ಮುನ್ನ ಪರಿಶೀಲಿಸಿ ಅಥವಾ ಬದಲಾಯಿಸುವುದು ಸೂಕ್ತ.
ನವದೆಹಲಿ(ಜು.15): ಮೋಟಾರಾ ವಾಹನ ಕಾಯ್ದೆ ತಿದ್ದುಪಡಿ ಮಸೂದೆ ಇದೀಗ ಜನರ ಜವಾಬ್ದಾರಿ ಹೆಚ್ಚಿಸಲಿದೆ ಅನ್ನೋ ಮಾತು ಕೇಳಿಬರುತ್ತಿದೆ. ಕಾರಣ ಈ ಮಸೂದೆಯಲ್ಲಿ ಹಲವು ಕಟ್ಟು ನಿಟ್ಟಿನ ಕ್ರಮಗಳು ಜಾರಿಗೊಳಿಸುವ ಕುರಿತು ಹೇಳಲಾಗಿದೆ. ಈ ಕುರಿತು ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ಇದೀಗ ಕೆಲ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಗಡ್ಕರಿ ನೀಡಿರೋ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿರುವ ಶೇಕಡಾ 30 ರಷ್ಟು ಡ್ರೈವಿಂಗ್ ಲೈಸೆನ್ಸ್ ನಕಲಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ: ಯಾವುದಕ್ಕೆ ಎಷ್ಟು ದಂಡ..?
ವಿಶ್ವದಲ್ಲೇ ಅತ್ಯಂತ ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಸಿಗೋ ಸ್ಥಳ ಭಾರತ. ಇಲ್ಲಿ ಅನೇಕರು ಯಾವುದೇ ಪರೀಕ್ಷೆ ಪಾಸ್ಸಾಗದೆ, ಡ್ರೈವಿಂಗ್ ಮಾಡದೇ ಲೈಸೆನ್ಸ್ ಪಡೆದಿದ್ದಾರೆ. ಅನೇಕರಿಗೆ ಲೈಸೆನ್ಸ್ ಕೈಸೇರುವಾಗಿ ವಾಹನ ಚಲಾಯಿಸುವುದೇ ತಿಳಿದಿರುವುದಿಲ್ಲ. ಹೀಗಾಗಿ ಇದಕ್ಕೆ ಕಡಿಣವಾಣ ಹಾಕಲು ಕೇಂದ್ರ ಮುಂದಾಗಿದೆ. ಬಹು ಚರ್ಚಿತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಕಾಯ್ದಿ ಮಸೂದೆ ಅಂಗೀಕಾರಕ್ಕೆ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ಒತ್ತಾಯಿಸಿ ಈ ವಿಚಾರ ಬಹಿರಂಗ ಪಡಿಸಿದರು.
ಇದನ್ನೂ ಓದಿ: ರೈಡಿಂಗ್‌ನಲ್ಲಿ ಮ್ಯೂಸಿಕ್ ಕೇಳಿದರೆ ಕಟ್ಟಲೇ ಬೇಕು ದಂಡ!
ಲೈಸೆನ್ಸ್ ಮೇಲಿನ ಫೋಟೋ ಗುರುತು ಸಿಗದಂತಿರುತ್ತದೆ. ಕಾನೂನು, ದಂಡದ ಭಯ ಯಾರಿಗೂ ಇಲ್ಲ. ಪೊಲೀಸರು ಅಡ್ಡ ಹಾಕಿದರೆ 100 ಅಥವಾ 200 ರೂಪಾಯಿ ದಂಡ ಕಟ್ಟಿ ಮುಂದೆ ಹೋಗುತ್ತಾರೆ. ಪ್ರತಿ ವರ್ಷ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನುಪ್ಪುತ್ತಿದ್ದಾರೆ. ಈ ಸಂಖ್ಯೆ ಕಡಿಮೆ ಮಾಡಲು ನನಗೆ ಸಾಧ್ಯವಾಗಿಲ್ಲ. ಹೀಗಾಗಿ ದಂಡ ಹಾಗೂ ರಸ್ತೆ ನಿಯಮಕ್ಕೆ ತಿದ್ದುಪಡಿ ಅಗತ್ಯ. ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲು ತಿದ್ದುಪಡಿ ಮಸೂದೆಯಲ್ಲಿ ಸೂಚಿಸಲಾಗಿದೆ.
ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಅಂಗೀಕಾರವಾದಲ್ಲಿ, ನಕಲಿ ಲೈಸೆನ್ಸ್, ಸಿಗ್ನಲ್ ಜಂಪ್ ಸೇರಿದಂತೆ ರಸ್ತೆ ನಿಯಮ ಉಲ್ಲಂಘನೆ ಕಡಿಮೆಯಾಗಲಿದೆ. ಕಾರಣ 100 ರೂಪಾಯಿ ಇರುವ ದಂಡ ಮೊತ್ತವನ್ನು 1000 ರೂಪಾಯಿ ಮಾಡಲಾಗಿದೆ. ಹೀಗಾಗಿ ದಂಡ ಕಟ್ಟುವುದು ಸುಲಭವಲ್ಲ.