ಆತ್ಮನಿರ್ಭರ ಭಾರತ; 600 ಟಾಟಾ ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್
ಆತ್ಮನಿರ್ಭರ ಭಾರತದ ಹೊಸ ಹೆಜ್ಜೆ/ ಟಾಟಾದ ಆರು ನೂರು ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್/ ದೇಶದ ಇತಿಹಾಸದಲ್ಲಿ ಹೊಸ ಹೆಜ್ಜೆ/ ಭಾರತೀಯ ಸೇನೆಗೆ ದಶಕಗಳಿಂದಲೂ ಟ್ರಕ್ ನೀಡುತ್ತಿರುವ ಕಂಪನಿ
ನವದೆಹಲಿ(ಆ. 26) ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ ಎಂದು ಅಭಿಯಾನ ಆರಂಭಿಸಿದ್ದು ದೇಶದ ನಾಗರಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಈ ನಡುವೆ ಮತ್ತೊಂದು ದೊಡ್ಡ ಸುದ್ದಿ ಇದೆ.
ಭಾರತೀಯ ಕಂಪನಿ ಟಾಟಾದಿಂದ ಆರು ನೂರು ಮಿಲಿಟರಿ ಟ್ರಕ್ ಖರೀದಿ ಮಾಡಲು ಥೈಲ್ಯಾಂಡ್ ಮುಂದಾಗಿದೆ. ಗೋ ಲೋಕಲ್ ಹೆಸರಿಗೆ ಅನ್ವರ್ಥವಾಗಿ 600 TATA LPTA ಖರೀದಿ ಮಾಡಲು ನಿರ್ಧರಿಸಿದ್ದನ್ನು ಥೈಲ್ಯಾಂಡ್ ರಾಯಭಾರಿ ಹಂಚಿಕೊಂಡಿದ್ದಾರೆ.
ಅಮೆಜಾನ್, ರಿಲಯನ್ಸ್ ಗೆ ಟಾಟಾ ಠಕ್ಕರ್
ಚುಟಿನ್ ಟೊರ್ನ್ ಸಾಮ್ ಗೋಕ್ಸಾಡಿ ಟ್ವಿಟ್ ಮಾಡಿದ್ದು ಟಾಟಾ ಕಂಪನಿಯ ಆರು ನೂರು ಟ್ರಕ್ ಖರೀದಿಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.ಭಾರತಕ್ಕೆ ಅನೇಕ ವರ್ಷಗಳಿಂದ ಸೇನಾಟ್ರಕ್ ಗಳನ್ನು ಟಾಟಾ ನೀಡುತ್ತ ಬಂದಿದೆ. ಟ್ವಿಟ್ ಮಾಡುವಾಗ ಸಾಮ್ ತಪ್ಪು ಧ್ವಜ ಹಾಕಿದ್ದರು. ಇದನ್ನು ಆನ್ ಲೈನ್ ಬಳಕೆದಾರರು ಅವರ ಗಮನಕ್ಕೆ ತಂದು ತಕ್ಷಣ ಸರಿ ಮಾಡಿಕೊಂಡಿದ್ದಾರೆ.