ಕ್ಯಾಲಿಫೋರ್ನಿಯಾ(ನ.26):  ಅತ್ಯಂತ ದಕ್ಷ, ಅತ್ಯಂತ ಜನಪ್ರಿಯ, ಗರಿಷ್ಠ ಮೈಲೇಜ್ ಹೊಂದಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ವಿಶ್ವದಲ್ಲಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಇದೀಗ ಟೆಸ್ಲಾ ಎಲೆಕ್ಟ್ರಿಕ್ ತನ್ನ ರೋಡ್‌ಸ್ಟರ್ ಕಾರನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡುತ್ತಿದೆ. ಹೊಸ ಬಣ್ಣದಲ್ಲಿ ಟೆಸ್ಲಾ ರೋಡ್‌ಸ್ಟರ್ ಸೂಪರ್ ಕಾರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತ ಆಗಮನ ಖಚಿತ ಪಡಿಸಿದ ಎಲನ್ ಮಸ್ಕ್!..

ಟೆಸ್ಲಾ ರೋಡ್‌ಸ್ಟರ್ ಸೂಪರ್ ಕಾರಿನ ಕುರಿತು ಟೆಸ್ಲಾ CEO ಎಲನ್ ಮಸ್ಕ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಟೆಸ್ಲಾ ರೋಡ್‌ಸ್ಟರ್ ಸೂಪರ್ ಕಾರು ಇದೀಗ ಹಲವು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. 2017ರಲ್ಲಿ ಪರಿಚಯಿಯಲಾದ ಅಪ್‌ಗ್ರೇಡೆಡ್ ಹಾಗೂ ಹೊಚ್ಚ ಹೊಸ ರೋಡ್‌ಸ್ಟರ್ ಸೂಪರ್ ಕಾರು, ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸುತ್ತಿದೆ.

ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಐತಿಹಾಸಿಕ ನಿರ್ಧಾರ, ಕರ್ನಾಟಕದಲ್ಲಿ R&D ಸೆಂಟರ್ ತೆರೆಯಲು ಮಾತುಕತೆ!

ವೆರಿ ಆರೇಂಜ್, ಜೆಟ್ ಬ್ಲಾಕ್, ಗ್ರೇ, ಬ್ಲೂ, ಎಲೆಕ್ಟ್ರಿಕ್ ಬ್ಲೂ, ಹಳದಿ, ವೈಟ್, ಸ್ವಿಲ್ವರ್, ರೆಡ್ ಸೇರಿದಂತೆ ಹಲವು ಬಣ್ಣಗಳಲ್ಲಿ ಕಾರು ಬಿಡುಗಡೆಯಾಗುತ್ತಿದೆ. ಈ ಮೂಲಕ ಟೆಸ್ಲಾ ರೋಡ್‌ಸ್ಟರ್ ಸೂಪರ್ ಕಾರು ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ.

2011ರಲ್ಲಿ ಟೆಸ್ಲಾ ರೋಡ್‌ಸ್ಟರ್ ಕಾರು ಸ್ಥಗಿತಗೊಂಡಿತ್ತು. ಬಳಿಕ 2017ರಲ್ಲಿ ಮತ್ತೆ ರೋಡ್‌ಸ್ಟರ್ ಸೂಪರ್ ಕಾರು ಬಿಡುಗಡೆ ಮಾಡಲಾಯಿತು. 2008ರಲ್ಲಿ ರೋಡ್‌ಸ್ಟರ್ ಸೂಪರ್ ಕಾರು ಈ ರೀತಿ ಹಲವು ಬಣ್ಣ ಪರಿಚಯಿಸಿತು.