ಬೆಂಗಳೂರು(ಆ.04): ಟೀಂ ಇಂಡಿಯಾ ಮಾಜಿ ನಾಯಕ, ಸದ್ಯ ಭಾರತ ಅಂಡರ್ 19 ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸರಳ ವ್ಯಕ್ತಿ. ಕ್ರಿಕೆಟ್ ಹಾಗೂ ವೈಯುಕ್ತಿಕ ಜೀವನದಲ್ಲಿ ದ್ರಾವಿಡ್ ಶಿಸ್ತಿನ ಸಿಪಾಯಿ. ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ, ಟ್ರೈನಿಂಗ್ ಸೇರಿದಂತೆ ದ್ರಾವಿಡ್ ಸುತ್ತಾಡುತ್ತಲೇ ಇರುತ್ತಾರೆ. ಇದೀಗ ದ್ರಾವಿಡ್ ತಮ್ಮ ಆರಾಮದಾಯಕ ಪ್ರಯಾಣಕ್ಕಾಗಿ ನೂತನ ಮರ್ಸಿಡೀಸ್ ಬೆಂಝ್  GLE ಕಾರು ಖರೀದಿಸಿದ್ದಾರೆ.

ಇದನ್ನೂ ಓದಿ: NCA ಮುಖ್ಯಸ್ಥರಾಗಿ ರಾಹುಲ್‌ ದ್ರಾವಿಡ್‌ ನೇಮಕ

ದ್ರಾವಿಡ್ ಕಪ್ಪು ಬಣ್ಣದ ಮರ್ಸಿಡೀಸ್ ಬೆಂಝ್  GLE SUV ಕಾರು ಖರೀದಿಸಿದ್ದಾರೆ. ಬೆಂಝ್  GLE ಕಾರಿನ ಆರಂಭಿಕ ಬೆಲೆ 61.75  ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಪ್ ಮಾಡೆಲ್ ಬೆಲೆ  77.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಕಾರು ಖರೀದಿಸಿದ ಬಳಿಕ ನೂತನ ಕಾರಿನೊಳಗೆ ದ್ರಾವಿಡ್ ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!

ಇತ್ತೀಚೆಗಷ್ಟೇ ಬಾಲಿವುಡ್ ನಟಿ ಕಂಗನಾ ರಣಾವತ್  ಮರ್ಸಿಡೀಸ್ ಬೆಂಝ್  GLE ಕಾರು ಖರೀದಿಸಿದ್ದರು. ಇದೀಗ ದ್ರಾವಿಡ್ ಕೂಡ ಐಷಾರಾಮಿ ಕಾರು ಖರೀದಿಸಿದ್ದಾರೆ. 3 ವೇರಿಯೆಂಟ್‌ಗಳಲ್ಲಿ ನೂತನ ಬೆಂಝ್  GLE ಕಾರು ಲಭ್ಯವಿದೆ.    2.1 ಲೀಟರ್, 4 ಸಿಲಿಂಡರ್ ಡೀಸೆಲ್ ಕಾರು, 201 Bhp ಪವರ್ ಹಾಗೂ 500 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 3.0 ಲೀಟರ್, V6 ಪೆಟ್ರೋಲ್ ಎಂಜಿನ್ ಕಾರು, 333 Bhp ಪವರ್ ಹಾಗೂ 480 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಇನ್ನು ಟಾಪ್ ಮಾಡೆಲ್ 3.0-ಲೀಟರ್ V6 ಡೀಸೆಲ್ ಎಂಜಿನ್ ಕಾರು, 255 Bhp ಪವರ್ ಹಾಗೂ 620 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಮೂರು ವೇರಿಯೆಂಟ್ ಕಾರು 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ಇದನ್ನೂ ಓದಿ: ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!

ರಾಹುಲ್ ದ್ರಾವಿಡ್ ಐಷಾರಾಮಿ ಕಾರು ಖರೀದಿಸುತ್ತಿರುವುದು ಇದೇ ಮೊದಲಲ್ಲ. ದ್ರಾವಿಡ್ ಬಳಿ ಆಡಿ Q5, BMW 5 ಸೀರಿಸ್ , ಪಂದ್ಯಶ್ರೇಷ್ಠ ಪ್ರಶಸ್ತಿಯಲ್ಲಿ ಸಿಕ್ಕಿದ ಹ್ಯುಂಡೈ ಟಕ್ಸನ್ ದುಬಾರಿ ಕಾರುಗಳಿವೆ. ದ್ರಾವಿಡ್ ಇದೇ ಮೊದಲ ಬಾರಿಗೆ ಮರ್ಸಡೀಸ್ ಬೆಂಝ್ ಕಾರು ಖರೀದಿಸಿದ್ದಾರೆ.