4ನೇ ಏಕದಿನಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ-ಇಲ್ಲಿದೆ ಸಂಭವನೀಯ ತಂಡ!
ನ್ಯೂಜಿಲೆಂಡ್ ವಿರುದ್ದ ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ 4ನೇ ಏಕದಿನ ಪಂದ್ಯಕ್ಕೆ ಕೆಲ ಬದಲಾವಣೆ ಮಾಡಲು ಸಜ್ಜಾಗಿದೆ. ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲು ಮ್ಯಾನೇಜ್ಮೆಂಟ್ ಮುಂದಾಗಿದೆ. 4ನೇ ಪಂದ್ಯಕ್ಕೆ ಭಾರತ ಸಂಭವನೀಯ ತಂಡ ಇಲ್ಲಿದೆ.
ಹ್ಯಾಮಿಲ್ಟನ್(ಜ.30): ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ 4ನೇ ಪಂದ್ಯಕ್ಕೆ ತಯಾರಿ ಆರಂಭಿಸಿದೆ. ಅಂತಿಮ 2 ಏಕದಿನ ಹಾಗೂ ಟಿ20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ಅನಿವಾರ್ಯ.
ಇದನ್ನೂ ಓದಿ: ಭಾರತ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ!
4ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನ ಮುನ್ನಡೆಸಲಿದ್ದಾರೆ. ಇಷ್ಟೇ ಅಲ್ಲ ತಂಡ ಬೆಂಚ್ ಆಟಗಾರರಿಗೆ ಅವಕಾಶ ನೀಡಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ವಿರಾಟ್ ಸ್ಥಾನದಲ್ಲಿ ಇದೀಗ ಯುವ ಬ್ಯಾಟ್ಸ್ ಶುಭಮಾನ್ ಗಿಲ್ ತಂಡಕ್ಕೆ ಆಯ್ಕೆಯಾಗೋ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಇತಿಹಾಸ ಬರೆದ ನೇಪಾಳ!
ಇಂಜುರಿಯಿಂದ ಚೇತರಿಸಿಕೊಂಡಿರುವ ಎಂ.ಎಸ್.ಧೋನಿ ಇದೀಗ 4ನೇ ಏಕದಿನ ಪಂದ್ಯಕ್ಕೆ ಕಮ್‌ಬ್ಯಾಕ್ ಮಾಡೋ ಎಲ್ಲಾ ಸಾಧ್ಯತೆಗಳಿವೆ. ವೇಗಿಗಳಲ್ಲಿ ಖಲೀಲ್ ಅಹಮ್ಮದ್ ತಂಡ ಸೇರಿಕೊಳ್ಳೋ ಸಾಧ್ಯತೆ ಹೆಚ್ಚಿದೆ.
ಸಂಭವನೀಯ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಶುಭ್‌ಮಾನ್ ಗಿಲ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಖಲೀಲ್ ಅಹಮ್ಮದ್