ಹ್ಯಾಮಿಲ್ಟನ್(ಜ.30): ಭಾರತ ವಿರುದ್ದದ ಏಕದಿನ ಸರಣಿ ಸೋತು ಮುಖಭಂಗಕ್ಕೆ ಒಳಗಾಗಿರುವ ನ್ಯೂಜಿಲೆಂಡ್ ಇದೀಗ ಇನ್ನುಳಿದಿರುವ 2 ಪಂದ್ಯದಲ್ಲಿ ಗೆಲುವಿಗಾಗಿ ಕಸರತ್ತು ಆರಂಭಿಸಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ 3 ಪಂದ್ಯಗಳ ಟಿ20 ಸರಣಿಗೆ ತಂಡ ಪ್ರಕಟಿಸಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಬರೆದ ಅಪರೂಪದ ದಾಖಲೆ!

ಚುಟುಕು ಕ್ರಿಕೆಟ್‌ಗಾಗಿ ಆಲ್ರೌಂಡರ್ ಡರಿಲ್ ಮಿಚೆಲ್ ಹಾಗೂ ವೇಗಿ ಬ್ಲೇರ್ ಟಿಕ್ನರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.  ಇನ್ನು ಶ್ರೀಲಂಕಾ ವಿರುದ್ದದ ಟಿ20 ಸರಣಿಯಲ್ಲಿ ಜಿಮ್ಮಿ ನೀಶಮ್ ಬದಲು ತಂಡದಲ್ಲಿ ಸ್ಥಾನ ಪಡೆದ ಡಗ್ ಬ್ರಾಸ್‌ವೆಲ್ ಭಾರತ  ವಿರುದ್ಧದ ಟಿ20 ಸರಣಿಯಲ್ಲೂ ಸ್ಥಾನ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಸ್ತ್ರ ಚಿಕಿತ್ಸೆಗೆ ಒಳಗಾದ ಟೆನಿಸ್ ಪಟು ಆ್ಯಂಡಿ ಮರ್ರೆ

ನ್ಯೂಜಿಲೆಂಡ್ ತಂಡ:
ಕೇನ್ ವಿಲಿಯಮ್ಸನ್(ನಾಯಕ), ಡಗ್ ಬ್ರಾಸ್‌ವೆಲ್, ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ, ಲ್ಯೂಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಲ್, ಸ್ಕಾಟ್ ಕಗ್ಲಿನ್, ಡರಿಲ್ ಮಿಚೆಲ್, ಕಾಲಿನ್ ಮುನ್ರೋ, ಮಿಚೆಲ್ ಸ್ಯಾಂಟ್ನರ್, ಟಮ್ ಸೆೈಫರಾತ್, ಐಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಬ್ಲೇರ್ ಟಿಕ್ನರ್