ನವದೆಹಲಿ(ಫೆ.20): ಗ್ರೇಟರ್ ನೋಯ್ಡಾದಲ್ಲಿ ಮುಕ್ತಾಯಗೊಂಡ ಭಾರತದ ಅತೀ ದೊಡ್ಡ ಆಟೋ ಎಕ್ಸ್ಪೋದಲ್ಲಿ 200ಕ್ಕೂ ಹೆಚ್ಚಿನ ವಾಹನಗಳು ಅನಾವರಣಗೊಂಡಿದ್ದರೆ, 70 ವಾಹನಗಳು ಬಿಡುಗಡೆಯಾಗಿದೆ. ಎಕ್ಸ್ಪೋದಲ್ಲಿನ ಕಾರುಗಳ ಪೈಕಿ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅತ್ಯುತ್ತ ಡಿಸೈನ್ ಪ್ರಶಸ್ತಿ ಪಡೆದುಕೊಂಡಿದೆ. 

ಇದನ್ನೂ ಓದಿ: ಹೊಸ ಅವತಾರದಲ್ಲಿ ಮತ್ತೆ ಬಂತು ಟಾಟಾ ಸಿಯೆರಾ!

ಟಾಟಾ ಸಿಯೆರಾ 1991ರಲ್ಲಿ ಅತ್ಯುತ್ತಮ SUV ಕಾರಾಗಿ ಮಿಂಚಿತ್ತು. ಬಳಿಕ ಸ್ಥಗಿತಗೊಂಡಿದ್ದ ಸಿಯೆರಾ ಕಾರು ಮತ್ತೆ ಅನಾವರಣಗೊಂಡಿದೆ. ವಿನ್ಯಾಸದಲ್ಲಿ ಇತರ ಎಲ್ಲಾ ಕಾರುಗಳನ್ನು ಹಿಂದಿಕ್ಕಿ ಅತ್ಯುತ್ತಮ ವಿನ್ಯಾಸದ ಕಾರು ಅನ್ನೋ ಅವಾರ್ಡ್ ಗೆದ್ದುಕೊಂಡಿದೆ.

ಇದನ್ನೂ ಓದಿ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್, ಹ್ಯುಂಡೈ MGಗೆ ನಡುಕ!

1991ರಿಂದ 2000ದ ವರೆಗೆ ಟಾಟಾ ಸಿಯೆರಾ SUV ಕಾರು ಭಾರತದಲ್ಲಿ ಹೆಚ್ಚು  ಜನಪ್ರಿಯವಾಗಿತ್ತು. ಇದೇ ಕಾರಿನ ವಿನ್ಯಾಸಕ್ಕೆ ಆಧುನಿಕ ಟಚ್ ನೀಡಿರುವ ಟಾಟಾ, ಕೆಲ ಬದಲಾವಣೆಯನ್ನು ಮಾಡಿದೆ. ಟಾಟಾ ನೆಕ್ಸಾನ್, ಟಾಟಾ ಟಿಗೋರ್  ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿರುವ ಟಾಟಾ ಶೀಘ್ರದಲ್ಲೇ ಅಲ್ಟ್ರೋಜ್ EV ಬಿಡುಗಡೆ ಮಾಡಲಿದೆ. ಇದರ ಬೆನ್ನಲ್ಲೇ ಸಿಯೆರಾ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಫೆಬ್ರವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ