ಟಾಟಾ ಸಫಾರಿ to ಮಹೀಂದ್ರ ಸ್ಕಾರ್ಪಿಯೋ: ಇಲ್ಲಿದೆ ಭಾರತೀಯ ಸೇನಾಧಿಕಾರಿ ಬಳಸಿದ ವಾಹನಗಳ ಲಿಸ್ಟ್!

ಭಾರತೀಯ ಸೇನೆ ಬಳಿ ಅತ್ಯಾಧುನಿಕ ಶಸ್ತಾಸ್ತ್ರ,ಬಂಕರ್, ಯುದ್ಧ ವಿಮಾನ ಸೇರಿದಂತೆ ಹಲವು ಯುದ್ದೋಪಯೋಗಿ ವಾಹನಗಳಿವೆ. ಇದರ ಜೊತೆಗೆ ಸಾರಿಗೆಯಾಗಿ ಹಲವು ವಾಹನಗಳನ್ನು ಸೇನಾಧಿಕಾರಿಗಳು ಬಳಸಿದ್ದಾರೆ. ಸೇನಾಧಿಕಾರಿಗಳು ಬಳಸಿದ ವಾಹನ ವಿವರ ಇಲ್ಲಿದೆ.

Tata safari to Mahindra Scorpio vehicle used by Indian army

ನವದಹೆಲಿ(ಆ.30): ವಿಶ್ವದ ಅತ್ಯಂತ ದುರ್ಗಮ ಗಡಿಗಳನ್ನು ಹೊಂದಿದ ರಾಷ್ಟ್ರಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ಹಿಮಾಲಯ ಪರ್ವತ ಶ್ರೇಣಿ, ಕಾಶ್ಮೀರ ಕಣಿವೆ. ಲಡಾಕ್, ಸಿಯಾಚಿನ್ ಸೇರಿದಂತೆ ಪ್ರತಿ ಗಡಿಗಳು ಅಷ್ಟೇ ದುರ್ಗಮ. ಹೀಗಾಗಿ ಇಲ್ಲಿ ಅತ್ಯಂತ ಬಲಷ್ಠ ದಕ್ಷ ವಾಹನಗಳ ಅವಶ್ಯತೆ ಭಾರತೀಯ ಸೇನೆಗಿದೆ. ಸೇನಾಧಿಕಾರಿಗಳು ಗಡಿ ಪ್ರದೇಶಕ್ಕೆ ತೆರಳಲು ಸೇರಿದಂತೆ ತಮ್ಮ ಸಾರಿಗೆಯಾಗಿ ಹಲವು ವಾಹನ ಬಳಸುತ್ತಿದ್ದಾರೆ. ಇದರಲ್ಲಿ ಹೆಚ್ಚು ಬಳಸಿದ ವಾಹನಗಳ ಪಟ್ಟಿ ಇಲ್ಲಿವೆ.

ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!

ಟಾಟಾ ಮೋಟಾರ್ಸ್ ಸಂಸ್ಥೆಯ ಟಾಟಾ ಸಫಾರಿ ಸ್ಟೋರ್ಮ್ ಭಾರತೀಯ ಸೇನೆಗಾಗಿ ತಯಾರಿಸಿದ ವಾಹನವಾಗಿದೆ. ಬ್ಯಾಟಲ್ ಗ್ರೀನ್ ಬಣ್ಣದ ಈ ಸೇನಾ ವಾಹನ ಸೇನೆಗೆ ಬೇಕಾದ ಎಲ್ಲಾ ಫೀಚರ್ಸ್ ಸೇರಿಸಲಾಗಿದೆ. ಆ್ಯಂಟೆನಾ, ಪಿಂಟೆಲ್ ಹುಕ್ ಸೇರಿದಂತೆ ಸೇನೆಗೆ ಬೇಕಾದ ಫೀಚರ್ಸ್ ಈ ವಾಹನದಲ್ಲಿದೆ.

ಆತ್ಮನಿರ್ಭರ ಭಾರತ; 600 ಟಾಟಾ ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್

ಮಾರುತಿ ಜಿಪ್ಸಿ ವಾಹನ ಉತ್ಪಾದನೆ ನಿಲ್ಲಿಸಲಾಗಿದೆ. ಆದರೆ ಭಾರತೀಯ ಸೇನೆ ಹೆಚ್ಚು ಬಳಸಿದ ವಾಹನಗಳಲ್ಲಿ ಇದೂ ಒಂದಾಗಿದೆ. ಜಿಪ್ಸ್ ಸೇನೆ ಹಾಗೂ ಪರ್ವತ ವಲಯ ಪ್ರದೇಶಗಳಿಗೆ ಹೇಳಿ ಮಾಡಿಸದ ವಾಹನವಾಗಿದೆ. ಈಗಲೂ ಭಾರತೀಯ ಸೇನೆಯಲ್ಲಿ ಮಾರುತಿ ಜಿಪ್ಸಿ ವಾಹನ ಹೆಚ್ಚಾಗಿ ಬಳಕೆಯಾಗುತ್ತಿದೆ.

ಭಾರತೀಯ ಸೇನೆ ಹಾಗೂ ಪ್ಯಾರಾಮಿಲಿಟರಿ ಫೋರ್ಸ್ ಅತೀ ಹೆಚ್ಚಾಗಿ ಟಾಟಾ ಸುಮೋ ವಾಹನ ಬಳಸಿದೆ. ಸೇನೆಯ ಆ್ಯಂಬುಲೆನ್ಸ್ ಆಗಿಯೂ ಸುಮೋ ಬಳಸಲಾಗಿದೆ

ಹಿಂದೂಸ್ತಾನ ಅಂಬಾಸಿಡರ್ ಅತೀ ಹೆಚ್ಚು ಬಳಕೆ ಮಾಡಿದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೇನಾಧಿಕಾರಿಗಳಿಗೆ ಇದೇ ಕಾರು ನೀಡಲಾಗಿದೆ. ಇತ್ತ ಭಾರತೀಯ ರಾಜಕಾರಣಿಗಳು ಇದೇ ಕಾರನ್ನು ಬಳಸುತ್ತಿದ್ದರು. ಮಾಜಿ ಪ್ರಧಾನಿ ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ ಕೂಡ ಅಂಬಾಸಿಡರ್ ಕಾರು ಬಳಸಿದ್ದರು.

ಮಹೀಂದ್ರ ಸ್ಕಾರ್ಪಿಯೋ ಸೇನೆಯಲ್ಲೂ ಅಷ್ಟೇ ಜನಪ್ರಿಯವಾಗಿದೆ. 2.2 ಲೀಟರ್ ಡೀಸೆಲ್ ಎಂಜಿನ್ ಸ್ಕಾರ್ಪಿಯೋ ವಾಹನವನ್ನು ಭಾರತೀಯ ಸೇನೆ ಬಳಸುತ್ತಿದೆ.

ಸೇನಾಧಿಕಾರಿಗಳು ಸದ್ಯ ಟೊಯೋಟಾ ಫಾರ್ಚುನರ್ ಕಾರು ಬಳಸುತ್ತಿದ್ದಾರೆ. ರಾಜಕಾರಣಿಗಳು ಕೂಡ ಇದೇ ಕಾರನ್ನು ಬಳಸುತ್ತಿದ್ದಾರೆ. ಆರಾಮದಾಯಕ ಹಾಗೂ ಯಾವುದೇ ಕ್ಲಿಷ್ಟ ದಾರಿಯಲ್ಲೂ ಫಾರ್ಚುನರ್ ಕಾರು ಸಲೀಸಾಗಿ ಪ್ರಯಾಣ ಮಾಡಬಲ್ಲದು.

ಮಿಸ್ತುಬಿಷ್ ಪಜೆರೋ, ಪೊಲರಿಸ್ ಸ್ನೋಬೈಕ್ ಸೇರಿದಂತೆ ಇನ್ನೂ ಕೆಲ ವಾಹನಗಳನ್ನು ಭಾರತೀಯ ಸೇನೆ ಬಳಸಿದೆ

Latest Videos
Follow Us:
Download App:
  • android
  • ios