ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಡಿಶನ್ ಕಾರು ಬಿಡುಗಡೆ!
ಟಾಟಾ ಮಾಲೀಕತ್ವದ ಬ್ರಿಟೀಷ್ ಕಂಪೆನಿ ಲ್ಯಾಂಡ್ ರೋವರ್ ನೂತನ ಡಿಸ್ಕವರಿ ಸ್ಪೋರ್ಟ್ ಲ್ಯಾಂಡ್‌ಮಾರ್ಕ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.
ನವದೆಹಲಿ(ಜ.28): ಟಾಟಾ ಒಡೆತನದ ಲ್ಯಾಂಡ್ ರೋವರ್ ಕಂಪನಿ ಇದೀಗ ಡಿಸ್ಕವರಿ ಸ್ಪೋರ್ಟ್ ಲ್ಯಾಂಡ್‌ಮಾರ್ಕ್ ಎಡಿಶನ್ SUV ಕಾರು ಬಿಡುಗಡೆ ಮಾಡಿದೆ. 3 ಬಣ್ಣಗಳಲ್ಲಿ ನೂತನ ಡಿಸ್ಕವರಿ ಲಭ್ಯವಿದೆ. ಇಷ್ಟೇ ಅಲ್ಲ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಈ ಕಾರು ಬಿಡುಗಡೆಯಾಗಿದೆ.
ಇದನ್ನೂ ಓದಿ: ಅತ್ಯಾಧುನಿಕ ಟೊಯೊಟಾ ಕ್ಯಾಮ್ರಿ - ಹೇಗಿದೆ ಈ ಹೈಬ್ರಿಡ್ ಕಾರು?
ಡಿಸ್ಕವರಿ ಸ್ಪೋರ್ಟ್ ಲ್ಯಾಂಡ್‌ಮಾರ್ಕ್ ಎಡಿಶನ್ SUV ಕಾರಿನ ಬೆಲೆ 53.77 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರು ನೂತನ ಕಾರು, 132 kW (180 PS) ಪವರ್ ಹಾಗೂ 430 Nm ಪೀಕ್ ಟಾರ್ಕ್ ಉತ್ವಾದಿಸಲಿದೆ. ಇನ್ನು 9 ಸ್ಪೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ನೂತನ ಕಾರಿನ ಗರಿಷ್ಠ ವೇಗ 188 /kmph. ಅತ್ಯಾಧುನಿಕ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆನ್ ಬೋರ್ಡ್ ವೈಫೈ, TFT ಸ್ಕ್ರೀನ್ ಡಿಸ್‌ಪ್ಲೇ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿದೆ.
ಇದನ್ನೂ ಓದಿ: ಟಾಟಾ ಹರಿಯರ್ ಬಿಡುಗಡೆಯಿಂದ ಹೆಕ್ಸಾ ಕಾರು ಬೆಲೆ ಹೆಚ್ಚಳ!
ಭಾರತದಲ್ಲಿ ರೇಂಜ್ ರೋವರ್ ಕಾರಿನ ಬೆಲೆ ಈ ರೀತಿ ಇದೆ. ಡಿಸ್ಕವರಿ ಸ್ಪೋರ್ಟ್ 44.68 ಲಕ್ಷ ರೂಪಾಯಿ, ರೇಂಜ್ ರೋವರ್ Evoque 52.06 ಲಕ್ಷ ರೂಪಾಯಿ,ಆಲ್ ನ್ಯೂ ಡಿಸ್ಕವರಿ 75.84 ಲಕ್ಷ ರೂಪಾಯಿ, ನ್ಯೂ ರೇಂಜ್ ರೋವರ್ ವೆಲಾರ್ 82.90 ಲಕ್ಷ ರೂಪಾಯಿ, ರೇಂಜ್ ರೋವರ್ ಸ್ಪೋರ್ಟ್ 1.02 ಕೋಟಿ ರೂಪಾಯಿ ಹಾಗೂ ರೇಂಜ್ ರೋವರ್ 1.79 ಕೋಟಿ ರೂಪಾಯಿ. ಈ ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಬೆಲೆ.