ಟಾಟಾ ಹೆಕ್ಸಾ ಕಾರು ಬೆಲೆ ಹೆಚ್ಚಿಸಲಾಗಿದೆ. ಹರಿಯರ್ ಕಾರು ಬಿಡುಗಡೆಯಾದದ ಬೆನ್ನಲ್ಲೇ ಹೆಕ್ಸಾ ಕಾರು ದುಬಾರಿಯಾಗಿದೆ. ಹಾಗಾದರೆ ಟಾಟಾ ಹೆಕ್ಸಾ ನೂತನ ಬೆಲೆ ಹೇಗಿದೆ? ಇಲ್ಲಿದೆ ವಿವರ.

ಮುಂಬೈ(ಜ.27): ಟಾಟಾ ಮೋಟಾರ್ಸ್ ಇತ್ತೀಚೆಗೆ ಟಾಟಾ ಹರಿಯರ್ SUV ಕಾರು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ, ಟಾಟಾ ಹೆಕ್ಸಾ ಕಾರಿನ ಬೆಲೆ ಹೆಚ್ಚಿಸಲಾಗಿದೆ. ಹೆಕ್ಸಾ ಕಾರಿನ ಎಲ್ಲಾ ವೇರಿಯೆಂಟ್ ಕಾರುಗಳ ಮೇಲೂ ಬೆಲೆ ಹೆಚ್ಚಿಸಲಾಗಿದೆ. ಬೇಸ್ ಮಾಡೆಲ್ ಬೆಲೆ 40,000 ರೂಪಾಯಿ ಹೆಚ್ಚಿಸಲಾಗಿದೆ. 

ಇದನ್ನೂ ಓದಿ: ರಾಜಧಾನಿಯಲ್ಲಿ ಬಾಡಿಗೆಗೆ ಎಲೆಕ್ಟ್ರಿಕ್ ಸ್ಕೂಟರ್ -ಪ್ರತಿ ಕಿ.ಮೀಗೆ 20 ಪೈಸೆ!

ಟಾಟಾ ಹರಿಯರ್ ಬೇಸ್ ಮಾಡೆಲೆ ಬೆಲೆ 12.69 ಲಕ್ಷ ರೂಪಾಯಿ. ಇತ್ತ ಹೆಕ್ಸಾ ಬೆಲೆ 12.57 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೀಗಾಗಿ ಟಾಟಾ ಹೆಕ್ಸಾ ಕಾರುಗಳ ಮೇಲಿನ ಬೆಲೆ ಹೆಚ್ಚಿಸಿದೆ. ಇದೀಗ ಹರಿಯರ್ ಕಾರಿಗಿಂತ ಟಾಟಾ ಹೆಕ್ಸಾ ದುಬಾರಿಯಾಗಿದೆ.

ಇದನ್ನೂ ಓದಿ: ನೂತನ ಮಾರುತಿ ವ್ಯಾಗನ್ಆರ್ ಬಿಡುಗಡೆ- ಬೆಲೆ ಕೇವಲ 4.19 ಲಕ್ಷ ರೂ!

ಟಾಟಾ ಹೆಕ್ಸಾ ಕಾರಿನ ಬೆಲೆ

ವೇರಿಯೆಂಟ್ಹಳೇ ಬೆಲೆನೂತನ ಬೆಲೆ
XE (7 ಸೀಟರ್)12.57 ಲಕ್ಷ ರೂ.12.99 ಲಕ್ಷ ರೂ.
XM (7-ಸೀಟರ್)14.19 ಲಕ್ಷ ರೂ.14.38 ಲಕ್ಷ ರೂ.
XM + (7-ಸೀಟರ್)15.27 ಲಕ್ಷ ರೂ.15.46 ಲಕ್ಷ ರೂ.
XMA (7-ಸೀಟರ್15.43 ಲಕ್ಷ ರೂ.15.62 ಲಕ್ಷ ರೂ.
XT (6/7-ಸೀಟರ್)16.64 ಲಕ್ಷ ರೂ.16.83 ಲಕ್ಷ ರೂ.
XTA (6/7-ಸೀಟರ್)17.80 ಲಕ್ಷ ರೂ.17.99 ಲಕ್ಷ ರೂ.
XT 4X4 (6/7-ಸೀಟರ್)17.97 ಲಕ್ಷ ರೂ.18.16 ಲಕ್ಷ ರೂ.