ನವದೆಹಲಿ(ಮಾ.05): ಟಾಟಾ ನೆಕ್ಸಾನ್ ಕಾರು ಭಾರತದ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್ ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಮೂಲಕ ಇತರ ಎಲ್ಲಾ ಕಾರಿಗಿಂತ ಗರಿಷ್ಠ ಸುರಕ್ಷತೆ ನೀಡಲಿದೆ.

ಇದನ್ನೂ ಓದಿ: ಸಾಬೀತಾಯ್ತು ಟಾಟಾ ನೆಕ್ಸಾನ್ ಕಾರು ಸುರಕ್ಷತೆ- ಪಿಲ್ಲರ್ ಬಿದ್ದರೂ ಪ್ರಯಾಣಿಕರು ಸೇಫ್!

ಟಾಟಾ ನೆಕ್ಸಾನ್ ಕಾರು ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆಯಲು ಕಾರಣಗಳಿವೆ. ನೆಕ್ಸಾನ್ ಕಾರಿನಲ್ಲಿ 10 ಸೇಫ್ಟಿ ಫೀಚರ್ಸ್ ಗ್ರಾಹಕರ ಸುಖಕರ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಹೀಗಾಗಿಯೇ ಟಾಟಾ ನೆಕ್ಸಾನ್ ಗರಿಷ್ಠ ಮಾರಾಟವಾಗುತ್ತಿರುವ ಸಬ್ ಕಾಂಪಾಕ್ಟ್ SUV ಕಾರಿನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಮಾರುತಿ ಬ್ರಿಜಾ ಪಡೆದುಕೊಂಡಿದೆ.

ಇದನ್ನೂ ಓದಿ: ಟ್ರಾಫಿಕ್ ನಿಯ ಉಲ್ಲಂಘಿಸಿದ ವಿರಾಟ್ ಕೊಹ್ಲಿ!

ಟಾಟಾ ನೆಕ್ಸಾನ್ ಕಾರಿನಲ್ಲಿ ಬಲಿಷ್ಠ ಫೊರ್ಟಿಫೀಲ್ಡ್ ಕ್ಯಾಬಿನ್, ಪ್ರೊಟೆಕ್ಟೀವ್ ಸೀಟ್ ಬೆಲ್ಟ್, ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್, ISOFIX ಚೈಲ್ಡ್ ಸೀಟ್, 4 ಚ್ಯಾನಲ್ಸ್ ABS with EBD, ರೇರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್(CSC), ಫ್ರಂಟ್ ಫಾಗ್ ಲ್ಯಾಂಪ್ಸ್(ಕಾರ್ನರಿಂಗ್ ಅಸಿಸ್ಟ್), ವಾಯ್ಸ್ ವಾರ್ನಿಂಗ್ ಅಲರ್ಟ್, ಡ್ರೈವರ್ , ಕೋ ಡ್ರೈವರ್ ಸೀಟ್ ಬೆಲ್ಟ್ ಅಲರಾಂ, ರಿವರ್ಸ್ ಕ್ಯಾಮರ ಸೇರಿದಂತೆ ಹತ್ತು ಹಲವು ಫೀಚರ್ಸ್ ಕಾರಿನ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಿದೆ.