ಮುಂಬೈ(ಆ.03): ವಿದೇಶಿ ವಸ್ತುಗಳಿಗೆ ಬಹಿಷ್ಕಾರ, ಆತ್ಮನಿರ್ಭರ್ ಭಾರತ್ ಸೇರಿದಂತೆ ಹಲವು ಅಭಿಯಾನಗಳಿಂದ ಮೇಡ್ ಇನ್ ಇಂಡಿಯಾ ವಸ್ತುಗಳ ಬೇಡಿಕೆ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಿಂದ ಟಾಟಾ ಮೋಾರ್ಸ್ ಪ್ಯಾಸೆಂಜರ್ ವಾಹನಗಳತ್ತ ಗಮನ ಕೇಂದ್ರಿಕರಿಸಿದೆ. ಹೀಗಾಗಿ ಅತ್ಯುತ್ತಮ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಭಾರತದ ಕಾರು ಪ್ರಿಯರನ್ನು ಮೋಡಿ ಮಾಡಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೆ 4 ಹೊಚ್ಚ ಕಾರುಗಳನ್ನ ಬಿಡುಗಡೆ ಮಾಡುತ್ತಿದೆ. 

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!.

ಟಾಟಾ ಗ್ರಾವಿಟಾಸ್


2020ರ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿರುವ ಟಾಟಾ ಗ್ರಾವಿಟಾಸ್ ಕಾರು ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದೆ.  ಹ್ಯಾರಿಯರ್ ಕಾರಿಗಿಂತ ದೊಡ್ಡದಾದ ಈ ಕಾರು 7 ಸೀಟರ್ ಸಾಮರ್ಥ್ಯ ಹೊಂದಿದೆ. 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಗ್ರಾವಿಟಾಸ್ 2021ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಟಾಟಾ ಅಲ್ಟ್ರೋಜ್ EV


ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಹಾಗೂ ಅತ್ಯುತ್ತಮ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ EV ಪಾತ್ರವಾಗಿದೆ. ಇದೀಗ ಟಾಟಾ ಮತ್ತೊಂದು ಕೈಗೆಟುವ ದರದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ಅಲ್ಟ್ರೋಜ್ EV ಕಾರು 2021ರ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಂಪೂರ್ಣ ಚಾರ್ಜ್‍ಗೆ 300 ಕಿ.ಮೀ ಮೈಲೇಜ್ ನೀಡಲಿದೆ. ಇದರ ಬೆಲೆ 10 ಲಕ್ಷ ರೂಪಾಯಿ ಒಳಗಿರಲಿದೆ.

ಟಾಟಾ ಹೆಕ್ಸಾ ಸಫಾರಿ ಎಡಿಶನ್


ಟಾಟಾ ಸಫಾರಿ ಕಾರು ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ. BS6 ಎಂಜಿನ್ ಹಾಗೂ ಕೆಲ ಬದಲಾವಣೆಯೊಂದಿಗೆ ಟಾಟಾ ಹೆಕ್ಸಾ ಸಫಾರಿ ಎಡಿಶನ್ ಕಾರು 2020ರ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಹೆಕ್ಸಾ ಕಾರನ್ನೇ ಸಫಾರಿ ಎಡಿಶನ್ ಕಾರಾಗಿ ಪರಿವರ್ತಿಸಿ ಬಿಡುಗಡೆ ಮಾಡಲಾಗುತ್ತಿದೆ. 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಈ ಕಾರು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಕೊರೋನಾ ವೈರಸ್ ಕಾರಣ ಬಿಡುಗಡೆ ವಿಳಂಬವಾಗಿದೆ.

ಟಾಟಾ HBX


ಟಾಟಾ ಮೋಟಾರ್ಸ್ ಸಣ್ಣ SUV ಕಾರು HBX ಹೊಸ ಸಂಚಲನ ಸೃಷ್ಟಿಸಲಿದೆ. ಮಹೀಂದ್ರ KUV100 ಹಾಗೂ ಮಾರುತಿ ಇಗ್ನಿಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಈ ಕಾರ ಬಿಡುಗಡೆಯಾಗಲಿದೆ. ಈ ಕಾರು ಪೆಟ್ರೋಲ್ ಹಾಗೂ AMT ವೇರಿಯೆಂಟ್ ಮಾತ್ರ ಲಭ್ಯವಿದೆ. ನೂತನ ಕಾರು 2021ರ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ.