ಮುಂಬೈ(ಏ.27):  ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಟಾಟಾ ಮೋಟರ್ಸ್ ವಿಶ್ವವ್ಯಾಪಿಯಾಗಿ ತನ್ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ವಾರಂಟಿಯನ್ನು ವಿಸ್ತರಿಸಿದೆ. ಇಂತಹ ಕಠಿಣ ಸಮಯದಲ್ಲಿ ವಾಹನಗಳು ಓಡುವ ಸಾಮರ್ಥ್ಯವನ್ನು ಹೊಂದಿರುವಂತೆ ಮಾಡುವುದಕ್ಕಾಗಿ ಹಾಗೂ ತಾಂತ್ರಿಕ ಬೆಂಬಲವನ್ನೂ ವಿಸ್ತರಿಸಲು ಟಾಟಾ ಹಲವು ಘೋಷಣೆ ಮಾಡಿದೆ. 

COVID-19 ಪರಿಹಾರ ನಿಧಿಗೆ 1000 ಕೋಟಿ ನೀಡಿದ ಟಾಟಾ ಸನ್ಸ್; ಇದು ಗರಿಷ್ಠ ದೇಣಿಗೆ!

ವಾಣಿಜ್ಯ ವಾಹನಗಳ ಗ್ರಾಹಕರಿಗೆ ಸೇವಾ ವಿಸ್ತರಣೆಯ ಭಾಗವಾಗಿ ಟಾಟಾ ಮೋಟರ್ಸ್ ಭಾರತದ ತನ್ನ ಗ್ರಾಹಕರಿಗೆ ಈ ಕೆಳಕಂಡ ಲಾಭಗಳನ್ನೂ ಒದಗಿಸುತ್ತಿದೆ:

  • ರಾಷ್ಟ್ರೀಯ ಲಾಕ್‍ಡೌನ್ ಸಮಯದಲ್ಲಿ ಈ ಹಿಂದೆ ಶೆಡ್ಯೂಲ್ ಮಾಡಲಾದ ಉಚಿತ ಸೇವೆಗಳು ಎರಡು ತಿಂಗಳಿಗೆ ವಿಸ್ತರಣೆ.
  • ರಾಷ್ಟ್ರೀಯ ಲಾಕ್‍ಡೌನ್ ಸಮಯದಲ್ಲಿ ವಾರಂಟಿ ಅವಧಿ ಮುಗಿದರೆ ಎಲ್ಲಾ ವಾಹನಗಳಿಗೆ ಎರಡು ತಿಂಗಳ ವಾರಂಟಿ ಅವಧಿ ವಿಸ್ತರಣೆ
  • ರಾಷ್ಟ್ರೀಯ ಲಾಕ್‍ಡೌನ್ ಸಮಯದಲ್ಲಿ ವಾರಂಟಿ ಅವಧಿ ಮುಗಿದರೆ ಎಲ್ಲಾ ವಾಹನಗಳಿಗೆ ಟಾಟಾ ಸುರಕ್ಷಾ ಎಎಮ್‍ಸಿ ಒಂದು ತಿಂಗಳ ವಿಸ್ತರಣೆ
  • ಎಲ್ಲಾ ಸಕ್ರಿಯ ಗುತ್ತಿಗೆದಾರರಿಗೆ ಟಾಟಾ ಮೋಟರ್ಸ್ ಸುರಕ್ಷಾದಲ್ಲಿ ಒಂದು ತಿಂಗಳ ಮಾನ್ಯತೆಯ ವಿಸ್ತರಣೆ
  • ರಾಷ್ಟ್ರೀಯ ಲಾಕ್‍ಡೌನ್ ಸಮಯದಲ್ಲಿ ಈ ಹಿಂದೆ ಶೆಡ್ಯೂಲ್ ಮಾಡಲಾದ ಎಎಮ್‍ಸಿ ಸೇವೆಗಳನ್ನು ಪಡೆದುಕೊಳ್ಳಲು ಗ್ರಾಹಕರಿಗೆ ಒಂದು ತಿಂಗಳ ವಿಸ್ತರಣೆ
  • ಸರ್ಕಾರವು ವಿನಿರ್ದಿಷ್ಟಗೊಳಿಸಿರುವಂತೆ, ರಾಷ್ಟ್ರೀಯ ಲಾಕ್‍ಡೌನ್ ಸಮಯದಲ್ಲಿ ಅತ್ಯಗತ್ಯ ವಸ್ತುಗಳನ್ನು ಸಾಗಿಸುತ್ತಿರುವ ಟ್ರಕ್‍ಗಳಿಗೆ ಟಾಟಾ ಮೋಟರ್ಸ್ ಸಹಾಯವಾಣಿ

ಟಾಟಾ ಮೋಟಾರ್ಸ್ ಜಾಗತಿಕ ವಾಣಿಜ್ಯ ವಾಹನಗಳ ಗ್ರಾಹಕರಿಗೂ ವಾರಂಟಿ ಅವಧಿಯನ್ನು ವಿಸ್ತರಿಸಲಿದೆ. :
ದಕ್ಷಿಣ ಆಫ್ರಿಕಾ, ಮಧ್ಯಪ್ರಾಚ್ಯ, ನೇಪಾಳ, ಭೂತಾನ್, ಶ್ರೀಲಂಕಾ, ನೈಋತ್ಯ ಆಫ್ರಿಕಾ ದೇಶಗಳು, ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿರುವ ಗ್ರಾಹಕರಿಗೆ ಮತ್ತು ಮಾರ್ಚ್ 15, 2020ರ ನಂತರ ವಾರಂಟಿ ಮುಗಿಯುವ ದಿನಾಂಕ ಬರುವ ವಾಹನಗಳಿಗೆ ಎರಡು ತಿಂಗಳ ವಾರಂಟಿ ವಿಸ್ತರಣೆ.

ಟಾಟಾ ಸಮೂಹದಿಂದ 1500 ಕೋಟಿ ನೆರವು!

ಬಾಂಗ್ಲಾದೇಶ ಗ್ರಾಹಕರಿಗೆ ಮತ್ತು ಮಾರ್ಚ್ 20, 2020ರ ನಂತರ ವಾರೆಂಟಿ ಮುಗಿಯುವ ಅವಧಿ ಇರುವ ವಾಹನ  ಮತ್ತು ಮಾರ್ಚ್ 15, 2020ರ ನಂತರ ವಾರೆಂಟಿ ಮುಗಿಯುವ ಅವಧಿ ಇರುವ ಶ್ರೀಲಂಕಾ ಗ್ರಾಹಕರಿಗೆ ಎರಡು ತಿಂಗಳ ವಾಹನ ವಾರಂಟಿ ವಿಸ್ತರಣೆ.

ತಾಂಜಾನಿಯಾ, ಝಾಂಬಿಯಾ, ಮೊಝಾಂಬಿಕ್, ಕೀನ್ಯ, ಉಗಾಂಡಾ, ಝಿಂಬಾಬ್ವೆ, ಮ್ಯಾನ್ಮಾರ್, ಮಲೇಶಿಯಾ, ಫಿಲಿಪೀನ್ಸ್, ವಿಯೆಟ್ನಾಮ್, ಥಾಯ್ಲೆಂಡ್, ಇಂಡೋನೇಶಿಯಾ, ಗ್ರಾಹಕರಿಗೆ ಮತ್ತು ಏಪ್ರಿಲ್ 1, 2020ರ ನಂತರ ವಾರಂಟಿ ಮುಗಿಯುವ ಅವಧಿ ಬರುವ ವಾಹನಗಳಿಗೆ ಎರಡು ತಿಂಗಳ ವಾಹನ ವಾರಂಟಿ ವಿಸ್ತರಣೆ.