ನವದೆಹಲಿ(ಏ.18): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಇದಕ್ಕೆ ಇದರ ಬೆಲೆ, ಹಾಗೂ ಚಾರ್ಜಿಂಗ್ ಸ್ಟೇಶನ್ ಕೊರತೆಗಳೇ ಮುಖ್ಯ ಕಾರಣ. ಹೀಗಾಗಿ SUV ಎಲೆಕ್ಟ್ರಿಕ್ ಕಾರುಗಳ ಬೈಕಿ ಹ್ಯುಂಡೈ ಕಂಪನಿಯ ಕೋನಾ, ಎಂಜಿ ಮೋಟಾರ್ಸ್ ಕಂಪನಿಯ ZS ಕಾರುಗಳು ಬಿಡುಗಡೆಗೆ ಮಾಡಿದ ಸದ್ದು ಮತ್ತೆ ಮಾಡಲೇ ಇಲ್ಲ. ಹೀಗಿರುವಾಗ ಸ್ವದೇಶಿ ನಿರ್ಮಿತ, ಗರಿಷ್ಠ ಸುರಕ್ಷತೆಯ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿತು. ಬಿಡುಗಡೆಯಾದ 2 ತಿಂಗಳಲ್ಲಿ ಟಾಟಾ ಅಗ್ರಸ್ಥಾನಕ್ಕೇರಿದೆ.

300 ರೂಪಾಯಿಗೆ 312 ಕಿ.ಮೀ ಮೈಲೇಜ್,ಇದು ಟಾಟಾ ನೆಕ್ಸಾನ್EV ಕಾರು ಬಾರು!

ಸದ್ಯ ಬಿಡುಗಡೆಯಾಗಿರು ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾದ ನೆಕ್ಸಾನ್ EV ಕೈಗೆಟುಕವ ಬೆಲೆ ಹೊಂದಿದೆ. ಇದರ ಆರಂಭಿಕ ಬೆಲೆ 13.99 ಲಕ್ಷ ರೂಪಾಯಿ. ಜನವರಿ ಅಂತ್ಯದಲ್ಲಿ ಈ ಕಾರು ಮಾರುಕಟ್ಟೆ ಪ್ರವೇಶಿಸಿತು. ಆದರೆ ಮಾರ್ಚ್ ಅಂತ್ಯಕ್ಕೆ  ಕೊರೋನಾ ವೈರಸ್ ಕಾಟದಿಂದ ಎಲ್ಲಾ ಆಟೋಮೊಬೈಲ್ ಕಂಪನಿಗಳು, ಶೋ ರೂಂಗಳು ಬಾಗಿಲು ಹಾಕಿತು. ಆದರೆ ಮಾರ್ಚ್ ಆರಂಭಿಕ 2 ವಾರಗಳಲ್ಲಿ ಟಾಟಾ  ನೆಕ್ಸಾನ್ EV ಗರಿಷ್ಠ ಮಾರಾಟವಾಗೋ ಮೂಲಕ ಮೊದಲ ಸ್ಥಾನ ಪಡೆದಿದೆ.

ಟಾಟಾ ನೆಕ್ಸಾನ್ EV ಗ್ರ್ಯಾಂಡ್ ಎಲೆಕ್ಟ್ರಿಕ್ ಟೂರ್ ಆರಂಭ; ಇದು ಅತ್ಯುತ್ತಮ ಕಾರು!

ಮಾರ್ಚ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಎಲೆಕ್ಟ್ರಿಕ್ SUV ಕಾರು
ಟಾಟಾ  ನೆಕ್ಸಾನ್ EV = 198
MG ಮೋಟಾರ್ಸ್ Zs  = 116
ಹ್ಯುಂಡೈ ಕೋನಾ =  14

ಕೊರೋನಾ ವೈರಸ್ ಕಾರಣ ಮಾರ್ಚ್ 2ನೇ ವಾರದ ಅಂತ್ಯದಿಂದಲೇ ಭಾರತದ ಆಟೋಮೊಬೈಲ್ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿತ್ತು. ಆದರೂ ನೆಕ್ಸಾನ್ ಮೊದಲ ಸ್ಥಾನ ಸಂಪಾದಿಸಿದೆ.  ನೆಕ್ಸಾನ್ EV ಸಂಪೂರ್ಣ ಚಾರ್ಜ್‌ಗೆ 312 ಕಿ.ಮೀ ಮೈಲೇಜ್ ನೀಡಲಿದೆ. 

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ 25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇನ್ನು MG ಮೋಟಾರ್ಸ್ Zs ಎಲೆಕ್ಟ್ರಿಕ್ ಕಾರಿನ ಬೆಲೆ 20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಎರಡು ಎಲೆಕ್ಟ್ರಿಕ್ SUV ಕಾರುಗಳು ದುಬಾರಿಯಾಗಿದೆ. ಆದರೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.

ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಇದೀಗ ಹಲವರ ಆಯ್ಕೆ ಟಾಟಾ ವಾಹನಗಳಾಗಲಿದೆ ಅನ್ನೋ ಆಟೋಮೊಬೈಲ್ ಕ್ಷೇತ್ರದ ದಿಗ್ಗಜರ ಮಾತು. ಇದಕ್ಕೆ ಕಾರಣ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಟಾಟಾ ಸಮೂಹ ಸಂಸ್ಥೆ ಒಟ್ಟು 1,500 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಹೀಗಾಗಿ ಭಾರತೀಯರಲ್ಲಿ  ಟಾಟಾ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ.